
ಕೇದರನಾಥ್ (ಮೇ.02) : ಪವಿತ್ರ ಕೇದರನಾಥ ಧಾಮದ ದ್ವಾರಗಳು ಇಂದಿನಿಂದ ಭಕ್ತರಿಗೆ ತೆರಿದಿದೆ. ಇಂದು ಬೆಳಗ್ಗೆ 7 ಗಂಟೆಯ ಶುಭ ಮೂಹರ್ತದಲ್ಲಿ ಭಕ್ತರಿಗಾಗಿ ಕೇದನಾರನಾಥ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ವಿಶೇಷ ಪೂಜೆ ಹಾಗೂ ಸಂಪ್ರದಾಯದ ಪ್ರಕಾರ ದೇವಸ್ಥಾನದ ಬಾಗಿಲು ಭಕ್ತರಿಗಾಗಿ ತೆರೆಯಲಾಗಿದೆ. ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಹಾಗೂ ಕುಟಂಬ ಈ ವೇಳೆ ಹಾಜರಿತ್ತು. ಕೇದಾರನಾಥ ದೇವಸ್ಥಾನ ಅಲಂಕರಿಸಲು ಬರೋಬ್ಬರಿ 108 ಕ್ವಿಂಟಾಲ್ ಹೂವು ಬಳಸಲಾಗಿದೆ. ಇದರಲ್ಲಿ ವಿವಿಧ 56 ಬಗೆಯ ಹೂವುಗಳಿವೆ.
ರುದ್ರಪ್ರಯಾಗ್ ಜಿಲ್ಲೆಯ ಸಮುದ್ರ ಮಟ್ಟದಿಂದ 11 ಸಾವಿರ ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಶತಮಾನಗಳಷ್ಟು ಹಳೆಯದಾದ ದೇವಾಲಯದಲ್ಲಿ ಸುಮಾರು 150ಕ್ಕೂ ಹೆಚ್ಚು ಸ್ವಯಂಸೇವಕರು ದೇವಸ್ಥಾನದ ಅಲಂಕಾರದಲ್ಲಿ ಭಾಗಿಯಾಗಿದ್ದರು. ನೇಪಾಳ, ಥಾಯ್ಲೆಂಡ್ ಮತ್ತು ಶ್ರೀಲಂಕಾ ದೇಶಗಳಿಂದ ಹಾಗೂ ದೆಹಲಿ, ಕಾಶ್ಮೀರ, ಪುಣೆ, ಕೋಲ್ಕತಾ , ಪಟನಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ತಂದ ಹೂವುಗಳನ್ನು ಬಳಸಲಾಗಿದೆ. ಗುಲಾಬಿ, ಚೆಂಡು ಸೇರಿದಂತೆ 54 ಬಗೆಯ ಹೂವುಗಳನ್ನು ಉಪಯೋಗಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಕೇದರನಾಥದ ಬಾಗಿಲು ತೆರೆಯಲಿದ್ದು, 6 ತಿಂಗಳು ಇಲ್ಲಿ ಭಕ್ತರು ದೇವರ ದರ್ಶನ ಪಡೆಯಬಹುದು.
ಅಕ್ಷಯ ತೃತೀಯದಂದೇ ಚಾರ್‌ಧಾಮ್ ಯಾತ್ರೆ ಆರಂಭ; ಭಕ್ತರಿಗಾಗಿ ತೆರೆದ ಯಮುನೋತ್ರಿ, ಗಂಗೋತ್ರಿ ಧಾಮದ ಬಾಗಿಲುಗಳು
ಗಂಗೋತ್ರಿ ಹಾಗೂ ಯುಮುನೋತ್ರಿ ಧಾಮ ಯಾತ್ರೆಯಾದ ಚಾರ್ ಧಾಮ್ ಯಾತ್ರೆ ಏಪ್ರಿಲ್ 30 ರಿಂದ ಆರಂಭಗೊಂಡಿದೆ. ಇದೀಗ ಕೇದಾರನಾಥ ಭಕ್ತರಿಗೆ ಇಂದಿನಿಂದ ಮಕ್ತವಾಗಿದೆ. ಇನ್ನು 6 ತಿಂಗಳ ಕಾಲ ಕೇದಾರನಾಥ ಭಕ್ತರಿಗಾಗಿ ತೆರೆದಿರುತ್ತದೆ. ಇಂದು ಕೇದರಾನಾಥ ದೇವಸ್ತಾನದ ಬಾಗಿಲು ತೆರೆಯುವಾಗ 15 ಸಾವಿರಕ್ಕೂ ಭಕ್ತರು ಹಾಜರಿದ್ದರು. ಬಳಿಕ ಭಕ್ತರು ಕೇದಾರನಾಥ ದೇವಸ್ಥಾನ ಪ್ರವೇಶಿಸಿ ದರ್ಶನ ಪಡೆದಿದ್ದಾರೆ. ಮೊದಲ ದಿನವೇ ಕೇದಾರನಾಥ ದೇಗುಲ ಪ್ರವೇಶಿಸಿ ದರ್ಶನ ಪಡೆಯಲು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು.
ಗುರುವಾರ ಬೆಳಗ್ಗೆ ಕೇದಾರನಾಥ ಭಗವಾನ್ ಪಂಚಮುಖಿ ಚಾಲ್ ವಿಗ್ರಹ ಡೋಲಿಗೆ ವಿಶೇಷ ಪೂಜೆ ನಡೆಸಲಾಗಿತ್ತು. ಗೌರಿಕುಂಡದ ಈ ಭವಂತನಿಗೆ ಪೂಜೆ ಹಾಗೂ ಸಂಪ್ರದಾಯಿಕವ ಉತ್ಸವ ನೆರವೇರಿಸಲಾಗಿತ್ತು. ಬಳಿಕ ಕೇದಾರನಾಥ ಪಂಚಮುಖಿ ಚಾಲ್ ವಿಗ್ರಹವನ್ನು ಮೆರವಣಿಗೆ ಮೂಲಕ ಕೇದರಾನಾಥ ಸನ್ನಿಧಾನಕ್ಕೆ ಸಂಜೆ ವೇಳೆಗೆ ತರಲಾಗಿತ್ತು. ಇಂದು ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
ಕೇದಾರನಾಥ ದೇವಸ್ಥಾನದ ಬಾಗಿಲು ತೆರೆಯುವ ಪೂಜಾ ಕೈಂಕರ್ಯಗಳು ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡಿತ್ತು. ದೇವಸ್ಥಾನ ಕಮಿಟಿ, ಸ್ವಯಂ ಸೇವಕರು, ಭಕ್ತರು ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕೇದರಾನಾಥದಲ್ಲಿ ಹಾಜರಿದ್ದರು.
ಕೇದಾರನಾಥದಲ್ಲಿ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ…. ರೀಲ್ಸ್ ಮಾಡಿದ್ರೆ ಇಲ್ಲ ದರ್ಶನ ಭಾಗ್ಯ, ನೇರ ಮನೆಗೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ