Mekedatu: ಕ್ಯಾತೆ ತೆಗೆದ ತಮಿಳ್ನಾಡು ಸರ್ಕಾರದಿಂದ ಕಾವೇರಿ ಹೊಸ ಯೋಜನೆ

Kannadaprabha News   | Asianet News
Published : Jan 21, 2022, 06:39 AM ISTUpdated : Jan 21, 2022, 09:16 AM IST
Mekedatu: ಕ್ಯಾತೆ ತೆಗೆದ ತಮಿಳ್ನಾಡು ಸರ್ಕಾರದಿಂದ ಕಾವೇರಿ ಹೊಸ ಯೋಜನೆ

ಸಾರಾಂಶ

*   ತಮಿಳುನಾಡು ಸರ್ಕಾರದಿಂದ ವಿಸ್ತೃತ ಯೋಜನೆ ವರದಿ ಸಿದ್ಧ *  1ನೇ ಹಂತದ ಯೋಜನೆಗೆ ಕರ್ನಾಟಕ ಅಸ್ತು ಎಂದಿತ್ತು *  ಕಾವೇರಿ ನೀರು ಬಳಸಿಕೊಂಡು ಧರ್ಮಪುರಿ, ಕೃಷ್ಣಗಿರಿ ಜಿಲ್ಲೆಗೆ ನೀರು ಪೂರೈಕೆ  

ಚೆನ್ನೈ(ಜ.21): ಬೆಂಗಳೂರು(Bengaluru) ಸೇರಿದಂತೆ ಇತರ ಜಿಲ್ಲೆಗಳಿಗೆ ಕುಡಿಯುವ ನೀರು(Drinking Water) ಪೂರೈಸುವ ಕರ್ನಾಟಕದ(Karnataka) ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ(Mekedatu Project) ಅಡ್ಡಿಪಡಿಸುತ್ತಿರುವ ತಮಿಳುನಾಡು ಸರ್ಕಾರ(Government of Tamil Nadu), ಈಗ ಹೊಗೇನಕಲ್‌ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಅನುಷ್ಠಾನಕ್ಕೆ ನಿರ್ಧರಿಸಿದೆ.

ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 4600 ಕೋಟಿ ರು. ವೆಚ್ಚದ ಯೋಜನೆ ಇದಾಗಲಿದೆ. ಇದಕ್ಕೆಂದು ರಾಜ್ಯ ಸರ್ಕಾರ ವಿಸ್ತೃತ ಯೋಜನೆ ವರದಿ (DPR) ಸಿದ್ಧಪಡಿಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌(MK Stalin) ಗುರುವಾರ ಹೇಳಿದ್ದಾರೆ.

Mekedatu Project: ಮೇಕೆದಾಟು ಅಣೆಕಟ್ಟೆಏಕೆ ಬೇಕು? ಕಾವೇರಿ ವಿವಾದಕ್ಕೆ ಪರಿಹಾರ ಈ ಡ್ಯಾಂ!

ಗುರುವಾರ ಧರ್ಮಪುರಿ ಜಿಲ್ಲೆಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಸ್ಟಾಲಿನ್‌, ‘ಕಲೈನಾರ್‌ (ದಿ. ಕರುಣಾನಿಧಿ) ಅವರು ಆರಂಭಿಸಿದ ಸ್ವಸಹಾಯ ಗುಂಪುಗಳ ಕಾರ್ಯಕ್ರಮ ಮತ್ತು ಹೊಗೇನಕಲ್‌ ಯೋಜನೆಗಳನ್ನು(Hogenakkal  Project) ಧರ್ಮಪುರಿ ಸದಾಕಾಲ ನೆನಪಿಸುತ್ತದೆ. ಈಗಾಗಲೇ 2008ರಲ್ಲಿ ಕೈಗೊಳ್ಳಲಾಗಿದ್ದ ಮೊದಲ ಹಂತದ ಯೋಜನೆ ಮುಗಿದಿದೆ. ಅದು 17 ಪಟ್ಟಣಗಳು ಹಾಗೂ 7639 ಗ್ರಾಮಗಳ ಕುಡಿವ ನೀರಿನ ದಾಹ ತಣಿಸಿದೆ. ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಹೆಚ್ಚುವರಿ ಕುಡಿಯುವ ನೀರು ಪೂರೈಕೆಗಾಗಿ ಹೊಗೇನಕಲ್‌-2ನೇ ಹಂತದ ಯೋಜನೆಗಾಗಿ ಡಿಪಿಆರ್‌ ಸಿದ್ಧಪಡಿಸಲಾಗುತ್ತದೆ’ ಎಂದು ಹೇಳಿದರು.

1ನೇ ಹಂತದ ಯೋಜನೆಗೆ ಕರ್ನಾಟಕ ಅಸ್ತು ಎಂದಿತ್ತು:

1998ರಲ್ಲಿ ಮೊದಲು ಹೊಗೇನಕಲ್‌ ಕುಡಿವ ನೀರಿನ ಯೋಜನೆಯ ಮೊದಲ ಹಂತದ ಯೋಜನೆಯನ್ನು ತಮಿಳುನಾಡು ಸಿದ್ಧಪಡಿಸಿತು. ಧರ್ಮಪುರಿ ಹಾಗೂ ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿವ ನೀರು ಪೂರೈಸುವ ಈ ಯೋಜನೆಯ ಯೋಜನಾ ಮೊತ್ತ 1300 ಕೋಟಿ ರು. ಆಗಿತ್ತು. ತಮಿಳುನಾಡು ತನ್ನ ಪಾಲಿನ ಕಾವೇರಿ(Kaveri) ನೀರನ್ನು ಮಾತ್ರ ಬಳಸಿಕೊಂಡು ತನ್ನ ರಾಜ್ಯದ ಪ್ರದೇಶಗಳಿಗೆ ಕುಡಿವ ನೀರಿನ ಪೂರೈಸುವ ಉದ್ದೇಶ ಹೊಂದಿತ್ತು. ಇದಕ್ಕೆ ಮೊದಲು ಕೇಂದ್ರ ಸರ್ಕಾರ(Central Government) ಅನುಮತಿಸಿತು. ಬಳಿಕ 1998ರಲ್ಲೇ ಕರ್ನಾಟಕದ ಅಂದಿನ ಜೆ.ಎಚ್‌.ಪಟೇಲರ(JH Patel) ಸರ್ಕಾರ, ಕೂಡ ತನ್ನ ಪಾಲಿನ ಕಾವೇರಿ ನೀರು ಬಳಕೆ ಆಗಕೂಡದು ಎಂಬ ಷರತ್ತಿನ ಮೇರೆಗೆ ತನ್ನ ನಿರಾಕ್ಷೇಪಣಾ ಪತ್ರ ನೀಡಿತ್ತು.

ಈ ನಡುವೆ, 2008ರಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ(M  Karunanidhi), ಕಾಮಗಾರಿಗೆ ಚಾಲನೆ ನೀಡಿದ್ದರು. ಆಗ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಯಡಿಯೂರಪ್ಪ(BS Yediyurappa) ಸರ್ಕಾರ ಈ ಯೋಜನೆಗೆ ಆಕ್ಷೇಪಿಸಿದಾಗ ವಿವಾದ ಉಂಟಾಗಿತ್ತು. ಆದರೆ ಕರುಣಾನಿಧಿ ಅವರು ಯೋಜನೆ ಮುಂದುವರಿಸಿದ್ದರು. 2013ರಲ್ಲಿ ಮೊದಲ ಹಂತದ ಯೋಜನೆ ಪೂರ್ಣಗೊಂಡಿತ್ತು ಹಾಗೂ ಅಂದಿನ ಮುಖ್ಯಮಂತ್ರಿ ಜಯಲಲಿತಾ(J Jayalalithaa) ಲೋಕಾರ್ಪಣೆ ಮಾಡಿದ್ದರು.

ಏನಿದು ಯೋಜನೆ?
- ಕಾವೇರಿ ನೀರು ಬಳಸಿಕೊಂಡು ಧರ್ಮಪುರಿ, ಕೃಷ್ಣಗಿರಿ ಜಿಲ್ಲೆಗೆ ನೀರು ಪೂರೈಕೆ
- ಕರುಣಾನಿಧಿ ಸಿಎಂ ಆಗಿದ್ದಾಗ ಹೊಗೇನಕಲ್‌ನಲ್ಲಿ 1ನೇ ಹಂತದ ಅನುಷ್ಠಾನ
- ಈಗ ಧರ್ಮಪುರಿ, ಕೃಷ್ಣಗಿರಿಗೆ ಹೆಚ್ಚುವರಿ ನೀರು ಪೂರೈಸಲು 2ನೇ ಯೋಜನೆ
ಮೇಕೆದಾಟು ಅಣೆಕಟ್ಟೆಏಕೆ ಬೇಕು? ಕಾವೇರಿ ವಿವಾದಕ್ಕೆ ಪರಿಹಾರ ಈ ಡ್ಯಾಂ!

Padayatra Politics: ತಮಿಳ್ನಾಡಲ್ಲಿ ಮಿತ್ರಪಕ್ಷಕ್ಕೆ ಬುದ್ಧಿ ಹೇಳಿ: ಕಾಂಗ್ರೆಸ್‌ಗೆ ಕಾರಜೋಳ ತಿರುಗೇಟು

ತಮಿಳ್ನಾಡಲ್ಲಿ ಬಿಜೆಪಿ ಬೆಳೆಸಲು ಮೇಕೆದಾಟಿಗೆ ಅಡ್ಡಿ: ಸಿದ್ದರಾಮಯ್ಯ

ತಮಿಳುನಾಡಿನಲ್ಲಿ(Tamil Nadu) ತಮ್ಮ ನೆಲೆ ವಿಸ್ತರಿಸಿಕೊಳ್ಳಲು ಬಿಜೆಪಿಯ(BJP) ಡಬಲ್‌ ಎಂಜಿನ್‌ ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧವಾಗಿ ನಿಂತಿದೆ. ಇದಕ್ಕಾಗಿಯೇ ಬೆಂಗಳೂರು ಸೇರಿದಂತೆ ಕಾವೇರಿ ತಟದ 2.5 ಕೋಟಿ ಜನರ ದಾಹ ಇಂಗಿಸುವ ಈ ಮಹಾತ್ವಾಕಾಂಕ್ಷಿ ಯೋಜನೆ ಬಗ್ಗೆ ವಿಳಂಬ ದ್ರೋಹ ತೋರುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರೋಪ ಮಾಡಿದ್ದರು. 

ತಮಿಳುನಾಡಿನಲ್ಲಿ ಪಕ್ಷವನ್ನು ವಿಸ್ತರಿಸಲು ಯೋಜನೆ ತಡೆಯುತ್ತಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಕನ್ನಡಿಗರಿಗೆ(Kannadigas) ಮಾಡುತ್ತಿರುವ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?