Coronavirus: ಒಮಿಕ್ರೋನ್‌ ಪತ್ತೆ ಮಾಡುವ 5 ಜೀನೋಮ್‌ ಲ್ಯಾಬ್‌ ಬಂದ್‌

Kannadaprabha News   | Asianet News
Published : Jan 21, 2022, 03:30 AM IST
Coronavirus: ಒಮಿಕ್ರೋನ್‌ ಪತ್ತೆ ಮಾಡುವ 5 ಜೀನೋಮ್‌ ಲ್ಯಾಬ್‌ ಬಂದ್‌

ಸಾರಾಂಶ

ದೇಶಾದ್ಯಂತ ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್‌ ಸೋಂಕು ವೇಗವಾಗಿ ಹಬ್ಬುತ್ತಿರುವಾಗಲೇ, ಆ ಸೋಂಕು ಪತ್ತೆ ಹಚ್ಚುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಜೀನೋಮ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ಗಳ ಪೈಕಿ 5 ಸದ್ದಿಲ್ಲದೆ ಬಂದ್‌ ಆಗಿರುವುದು ಕಳವಳಕ್ಕೆ ಕಾರಣವಾಗಿದೆ.

ನವದೆಹಲಿ (ಜ.21): ದೇಶಾದ್ಯಂತ ಕೊರೋನಾದ (Coronavirus) ಹೊಸ ರೂಪಾಂತರಿ ಒಮಿಕ್ರೋನ್‌ ಸೋಂಕು (Omicron Virus) ವೇಗವಾಗಿ ಹಬ್ಬುತ್ತಿರುವಾಗಲೇ, ಆ ಸೋಂಕು ಪತ್ತೆ ಹಚ್ಚುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಜೀನೋಮ್‌ ಸೀಕ್ವೆನ್ಸಿಂಗ್‌ (Genome Sequencing) ಲ್ಯಾಬ್‌ಗಳ ಪೈಕಿ 5 ಸದ್ದಿಲ್ಲದೆ ಬಂದ್‌ ಆಗಿರುವುದು ಕಳವಳಕ್ಕೆ ಕಾರಣವಾಗಿದೆ. ವೈರಾಣುವಿನ ವಂಶವಾಹಿಯಲ್ಲಿರುವ ಡಿಎನ್‌ಎಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸುವುದೇ ಜೀನೋಮ್‌ ಸೀಕ್ವೆನ್ಸಿಂಗ್‌. 

ಈ ಪ್ರಯೋಗ ನಡೆಸಲು ದೇಶದಲ್ಲಿ 38 ಪ್ರಯೋಗಾಲಯಗಳು ಮಾತ್ರವೇ ಇವೆ. ಜೀನೋಮ್‌ ಸೀಕ್ವೆನ್ಸಿಂಗ್‌ ಮೊದಲು ರಾಸಾಯನಿಕ ಕ್ರಿಯೆ ನಡೆಸುವುದಕ್ಕೆ ‘ರೀ ಏಜೆಂಟ್‌’ (ರಾಸಾಯನಿಕ ಕಾರಕ)ಗಳನ್ನು ಬಳಸಲಾಗುತ್ತದೆ. ಆದರೆ ಅದನ್ನು ಖರೀದಿಸಲು ಅನುದಾನದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಐದು ಲ್ಯಾಬ್‌ಗಳು ಸ್ಥಗಿತಗೊಂಡಿವೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

Covid-19: ಜಗತ್ತಿನಲ್ಲಿ ಕೋವಿಡ್‌ ಏರುಗತಿಯ ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ

ವೈರಾಣುವಿನ ಹೊಸ ಹೊಸ ಮಾದರಿ ಹಾಗೂ ಅವುಗಳ ವಿಕಸನವನ್ನು ಜೀನೋಮ್‌ ಸೀಕ್ವೆನ್ಸಿಂಗ್‌ನಿಂದ ಪತ್ತೆ ಮಾಡಬಹುದು. 5 ಲ್ಯಾಬ್‌ಗಳು ಬಂದ್‌ ಆಗಿರುವ ಕಾರಣ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಪರೀಕ್ಷೆ ಶೇ.40ರಷ್ಟುಕಡಿಮೆಯಾಗಿದೆ. ಒಮಿಕ್ರೋನ್‌ ಸೋಂಕು ಪತ್ತೆಯಾದ ಬಳಿಕ ಇಲ್ಲಿವರೆಗೆ 25 ಸಾವಿರ ಜೀನೋಮ್‌ ಸೀಕ್ವೆನ್ಸಿಂಗ್‌ ಮಾತ್ರ ಮಾಡಲಾಗಿದೆ. ದೇಶದಲ್ಲಿ ಮೊದಲ ಕೋವಿಡ್‌ ಪ್ರಕರಣ ಕಾಣಿಸಿಕೊಂಡ ಬಳಿಕ 1.6 ಲಕ್ಷ ಸೀಕ್ವೆನ್ಸಿಂಗ್‌ ನಡೆಸಲಾಗಿದೆ. ದೇಶದಲ್ಲಿನ ಕೋವಿಡ್‌ (Covid19) ಸ್ಥಿತಿ ಪರಿಶೀಲಿಸಲು ಇತ್ತೀಚೆಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಜೀನೋಮ್‌ ಸೀಕ್ವೆನ್ಸಿಂಗ್‌ನ ಮಹತ್ವವನ್ನು ಒತ್ತಿ ಹೇಳಿದ್ದರು.

ಕೊರೋನಾ ಟೆಸ್ಟಿಂಗ್‌ ಕಮ್ಮಿ ಮಾಡಬೇಡಿ: ಕೆಲವು ರಾಜ್ಯಗಳು ಕೊರೋನಾ ಪರೀಕ್ಷೆಯನ್ನು (Covid Testing) ಕಡಿಮೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ. ಈ ಸಂಬಂಧ ಎಲ್ಲಾ ರಾಜ್ಯ (States) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವ ಕೇಂದ್ರ ಹೆಚ್ಚುವರಿ ಆರೋಗ್ಯ ಕಾರ‍್ಯದರ್ಶಿ ಆರತಿ ಅಹುಜಾ (Arti Ahuja), ತತ್‌ಕ್ಷಣದಿಂದಲೇ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ಕೆಲವು ನಿರ್ದಿಷ್ಟಪ್ರದೇಶಗಳ ಕೋವಿಡ್‌ ಪಾಸಿಟಿವಿಟಿ (Covid Positivity) ಮೇಲೆ ನಿಗಾ ಇಡಲು ಕೋರಿದ್ದಾರೆ.

Covid Booster Dose India: ಕೇವಲ 8 ದಿನದಲ್ಲಿ 50 ಲಕ್ಷ ಜನರಿಗೆ 3ನೇ ಡೋಸ್‌

ವಿಶ್ವ ಆರೋಗ್ಯ ಸಂಸ್ಥೆ ವೇರಿಯಂಟ್‌ ಆಫ್‌ ಕನ್ಸರ್ನ್‌ ಎಂದು ಗುರುತಿಸಿರುವ ಒಮಿಕ್ರೋನ್‌ ವೈರಸ್‌ (Omicron Virus) ದೇಶಾದ್ಯಂತ ಹರಡುತ್ತಿದೆ. ಈ ರೂಪಾಂತರಿ ನಿಗ್ರಹಕ್ಕೆ ಆಕ್ರಮಣಕಾರಿ ಪರೀಕ್ಷೆಯೇ ಪ್ರಮುಖ ಮದ್ದು. ಆದಾಗ್ಯೂ ಕೆಲ ರಾಜ್ಯಗಳಲ್ಲಿ ಕಡಿಮೆ ಪ್ರಮಾಣ ಪರೀಕ್ಷೆ ನಡೆಯುತ್ತಿದೆ ಎಂಬ ವರದಿಗಳು ಕೇಂದ್ರ ಸರ್ಕಾರಕ್ಕೆ ಲಭಿಸಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪರೀಕ್ಷೆಯಿಂದ ವೇಗವಾಗಿ ಹೊಸ ಕೊರೋನಾ ಹಾಟ್‌ಸ್ಪಾಟ್‌, ಕ್ಲಸ್ಟರ್‌ ಗುರುತಿಸಬಹುದು. ಇದರಿಂದ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆ, ಕ್ವಾರಂಟೈನ್‌ ಮತ್ತಿತರ ಸೋಂಕು ನಿಯಂತ್ರಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬಹುದು. ತನ್ಮೂಲಕ ಜಿಲ್ಲೆ ಮತ್ತು ರಾಜ್ಯಗಳು ಸೋಂಕನ್ನು ನಿಗ್ರಹಿಸಬಹುದು ಎಂದು ಅಹುಜಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್