ಭಾರತದ ಮೊದಲ ಯಂಗೆಸ್ಟ್ ಲೇಡಿ ಪೈಲಟ್: ಕಾಶ್ಮೀರಿ ಯುವತಿ ಸಾಧನೆಗೆ ಶ್ಲಾಘನೆ

By Suvarna NewsFirst Published Feb 4, 2021, 1:32 PM IST
Highlights

ಕಣಿವೆ ರಾಜ್ಯದಲ್ಲಿ ಬದುಕು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಎಲ್ಲ ಅಡೆತಡೆಗಳ ಮಧ್ಯೆಯೂ ಕಷ್ಟಪಟ್ಟ ಮೇಲೆ ಬಂದ ಈಕೆ ದೇಶದ ಯಂಗೆಸ್ಟ್ ಲೇಡಿ ಪೈಲಟ್ ಆಗಿ ಗುರುತಿಸಲ್ಪಟ್ಟಿದ್ದಾರೆ. ಸಾಧನೆಯ ಹಾದಿಯಲ್ಲಿರೋ ಬಹಳಷ್ಟು ಜನಕ್ಕೆ ಸ್ಫೂರ್ಥಿಯಾಗಿದ್ದಾರೆ.

ಶ್ರೀನಗರ(ಜ.04): ಅಯೇಷಾ ಆಝೀಸ್ ಎಂಬ ಕಾಶ್ಮೀರದ ಯುವತಿ 25 ವರ್ಷಕ್ಕೆ ಪೈಲಟ್ ಆಗಿದ್ದಾಳೆ. ಈ ಮೂಲಕ ಮಹಿಳಾ ಸಬಲೀಕರಣದತ್ತ ಬಹಳಷ್ಟು ಕಾಶ್ಮೀರಿ ಮಹಿಳೆಯರಿಗೆ ಸ್ಫೂರ್ಥಿ ತುಂಬಿದ್ದಾಳೆ.

2011ರಲ್ಲಿ ಅಝೀಝ್ ತನ್ನ 15 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ವಿದ್ಯಾರ್ಥಿ ಪೈಲಟ್ ಎನಿಸಿಕೊಂಡಿದ್ದರು. ಮುಂದಿನ ವರ್ಷ ರಷ್ಯಾದ ಸೊಕೊಲ್ ವಾಯುನೆಲೆಯಲ್ಲಿ ಎಂಐಜಿ -29 ಜೆಟ್ ಹಾರಿಸಲು ಪರವಾನಗಿ ತರಬೇತಿ ಪಡೆದರು.

ದೆಹಲಿ ರೈತ ಹೋರಾಟಕ್ಕೆ ಹಾಲಿವುಡ್ ಸೆಲಬ್ರಿಟಿಗಳಿಂದ ಬೆಂಬಲ, ಪ್ರತಿಭಟನೆ ವೈಭವೀಕರಣವಾಗ್ತಿದ್ಯಾ.?

ನಂತರ ಬಾಂಬೆ ಫ್ಲೈಯಿಂಗ್ ಕ್ಲಬ್‌ ವಿಷಯದಲ್ಲಿ ಆವಿಯೇಷನ್ ಪದವಿ ಪಡೆದರು. 2017ರಲ್ಲಿ ಕಮರ್ಷಿಯಲ್ ಪರವಾನಗಿಯನ್ನೂ ಪಡೆದರು. ಕಳೆದ ಕೆಲವು ವರ್ಷಗಳಿಂದ ಕಾಶ್ಮೀರಿ ಮಹಿಳೆಯರು ಬಹಳಷ್ಟು ಮೇಲೆ ಬಂದಿದ್ದಾರೆ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎನ್ನುತ್ತಾರೆ ಆಝೀಝ್

ನಾನು ಚಿಕ್ಕ ವಯಸ್ಸಿನಿಂದಲೂ ಪ್ರಯಾಣವನ್ನು ಇಷ್ಟಪಡುತ್ತಿದೆ. ಹಾರಾಟದಿಂದ ತುಂಬಾ ಆಕರ್ಷಿತಳಾಗಿದ್ದೆ. ಅನೇಕ ಜನರನ್ನು ಭೇಟಿಯಾಗಲು ಸಾಧ್ಯ. ಅದಕ್ಕಾಗಿಯೇ ನಾನು ಪೈಲಟ್ ಆಗಬೇಕೆಂದು ಬಯಸಿದ್ದೆ. ಹಾಗಾಗಿ ನಾನು ಈ ಕ್ಷೇತ್ರವನ್ನು ಆರಿಸಿಕೊಂಡಿದ್ದೇನೆ ಎಂದಿದ್ದಾರೆ.

click me!