500 ಮೀಟರ್ ಪೇಪರ್‌ ರೋಲ್‌ನಲ್ಲಿ ಖುರಾನ್ ಬರೆದ ಕಾಶ್ಮೀರಿ ಯುವಕ

Published : Jul 10, 2022, 02:41 PM ISTUpdated : Jul 10, 2022, 02:46 PM IST
500 ಮೀಟರ್ ಪೇಪರ್‌ ರೋಲ್‌ನಲ್ಲಿ ಖುರಾನ್ ಬರೆದ ಕಾಶ್ಮೀರಿ ಯುವಕ

ಸಾರಾಂಶ

ಕಣಿವೆ ನಾಡು ಕಾಶ್ಮೀರದ ಯುವಕನೋರ್ವ ಖುರಾನ್ ಬರೆದು ಗಿನ್ನೆಸ್ ಪುಟ ಸೇರಿದ್ದಾನೆ. 500 ಮೀಟರ್ ಉದ್ದದ ಪೇಪರ್ ರೋಲ್‌ನಲ್ಲಿ ಈತ ಸಂಪೂರ್ಣ ಖುರಾನ್‌ ಅನ್ನು ಬರೆದಿದ್ದಾನೆ.

ಜಮ್ಮುಕಾಶ್ಮೀರ: ಕಣಿವೆ ನಾಡು ಕಾಶ್ಮೀರದ ಯುವಕನೋರ್ವ ಖುರಾನ್ ಬರೆದು ಗಿನ್ನೆಸ್ ಪುಟ ಸೇರಿದ್ದಾನೆ. 500 ಮೀಟರ್ ಉದ್ದದ ಪೇಪರ್ ರೋಲ್‌ನಲ್ಲಿ ಈತ ಸಂಪೂರ್ಣ ಖುರಾನ್‌ ಅನ್ನು ಬರೆದಿದ್ದಾನೆ. ಇದಕ್ಕಾಗಿ ಈತ 7 ತಿಂಗಳ ಕಾಲ ಪ್ರತಿದಿನ 18 ಗಂಟೆಗಳನ್ನು ವ್ಯಯಿಸಿದ್ದಾನೆ. ಈ ಮೂಲಕ ಅತೀ ದೊಡ್ಡದಾದ ಒಂದೇ ಹಳೆಯ ಮೇಲೆ ಖುರಾನ್ ಬರೆಯುವ ಮೂಲಕ ಗಿನ್ನೆಸ್ ಪುಟ ಸೇರಿದ್ದಾನೆ. ಕಾಶ್ಮೀರ ಮೂಲದ ಮುಸ್ತಾಫ ಇಬ್ನಿ ಜಮೀಲ್‌ (Mustafa Ibni Jameel) ಎಂಬಾತನೇ ಈ ಸಾಧನೆ ಮಾಡಿದ ವ್ಯಕ್ತಿ. ಕಾಶ್ಮೀರದ(Kashmir)  ಈ ಕ್ಯಾಲಿಗ್ರಾಫರ್‌ ಇಸ್ಲಾಂ ಪವಿತ್ರ ಗ್ರಂಥವನ್ನು ಒಂದೇ ಹಳೆಯ ಮೇಲೆ ಕೈಯಲ್ಲಿ ಬರೆಯುವ ಮೂಲಕ ಈ ಸಾಧನೆ ಮಾಡಿದ್ದಾನೆ. 

ಈ ಐತಿಹಾಸಿಕ ಧರ್ಮಗ್ರಂಥವನ್ನು ಬರೆಯಲು ನನಗೆ ಸುಮಾರು ತಿಂಗಳುಗಳೇ ಬೇಕಾಯಿತು ಎಂದು 27 ವರ್ಷದ ಮುಸ್ತಾಫ ಇಬ್ನಿ ಜಮೀಲ್‌  ಹೇಳಿಕೊಂಡಿದ್ದಾರೆ. ಇದಕ್ಕಾಗಿ ಇವರು ವಿಶೇಷ ಪೆನ್ನೊಂದು ಬಳಸಿದ್ದಾರೆ. ಹಾಗೆಯೇ 85 ಗ್ರಾಂ ಪೇಪರ್‌ನ್ನು ಬಳಸಿದ್ದಾರೆ. ಈ ಪೇಪರ್‌ 14.5 ಇಂಚು ಅಗಲ ಹಾಗೂ 500 ಮೀಟರ್ ಉದ್ದಳತೆಯನ್ನು ಹೊಂದಿದೆ. ಈ ಮೂಲಕ ಈತ ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕವಲ್ಲದೇ ಲಿಂಕೊಲನ್‌ ಬುಕ್ ಆಫ್‌ ರೆಕಾರ್ಡ್‌ಗೂ ಸೇರಲ್ಪಟ್ಟಿದ್ದಾರೆ. 

Hijab Row: 'ಶುಕ್ರವಾರ, ರಂಜಾನ್‌ ಮಾಸದಲ್ಲಾದರೂ ಹಿಜಾಬ್‌ಗೆ ಅವಕಾಶ ಕೊಡಿ'

ಈ ಬಗ್ಗೆ ವಿದೇಶಿ ಪಬ್ಲಿಕೇಷನ್ ಸಂಸ್ಥೆಯೊಂದಕ್ಕೆ ಮಾತನಾಡಿದ ಮುಸ್ತಾಫ ಇಬ್ನಿ ಜಮೀಲ್‌, ತಾನು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್‌ ಕಣಿವೆಯ ನಿವಾಸಿ, ತನ್ನ ಹಸ್ತಾಕ್ಷರವನ್ನು ಸುಧಾರಣೆ ಮಾಡಿಕೊಳ್ಳುವ ಸಲುವಾಗಿ ನಾನು ಕ್ಯಾಲಿಗ್ರಾಪ್ (calligraph)ಆರಂಭಿಸಿದೆ. ಇದಾಗಿ ಸ್ವಲ್ಪ ಸಮಯದ ನಂತರ ಧರ್ಮಗ್ರಂಥವನ್ನು ಬರೆಯಲು ಶುರು ಮಾಡಿದೆ ಎಂದು ಅವರು ಹೇಳಿದರು. ಲಿಂಕೊಲನ್‌ ಬುಕ್ ಆಫ್‌ ರೆಕಾರ್ಡ್ (Lincoln Book of Records) ಈಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಸ್ತಾಫ ಇಬ್ನಿ ಜಮೀಲ್‌ ಮಾಡಿರುವ ಈ ಅಪರೂಪದ ಸಾಧನೆಯನ್ನು ಹಾಕಿಕೊಂಡಿದ್ದಾರೆ. ತನ್ನ ಮೊದಲ ಯೋಜನೆಯಾದ ಇದು ಯಾವುದೇ ಪ್ರಮುಖ ತಜ್ಞರ ಸಲಹೆಯನ್ನು ಪಡೆಯದೇ ವರ್ಷಕ್ಕೂ ಮೊದಲು ಸಂಪೂರ್ಣಗೊಂಡಿದೆ ಎಂದು ಮುಸ್ತಾಪ ಹೇಳಿಕೊಂಡಿದ್ದಾರೆ.

Hassan: ವಿವಾದದ ಮಧ್ಯೆ ಕುರಾನ್‌ ಪಠಿಸಿ ಬೇಲೂರು ರಥೋತ್ಸವ: ಸಾವಿರಾರು ಭಕ್ತರು ಭಾಗಿ 

ಕುರಾನ್ ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ. ಅಲ್-ಕುರಾನ್ ಅಲ್ಲಾಹನ ವಚನವಾಗಿದೆ. 
ಕುರಾನ್‌ ಇನ್ನೊಂದು ಹೆಸರು ಪುರ್ಕಾನ್ ಎಂದು ಆಗಿದೆ. ಪುರ್ಕಾನ್ ಅಂದರೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಸಾಧನವೆಂದು. ಇದಲ್ಲದೆ ಅಲ್-ಕಿತಾಬ್ ಮತ್ತು ಅಧ್-ಧಿಕ್ರ್ ಎಂಬ ಹೆಸರುಗಳೂ ಕೂಡಾ ಇದೆ. ಮಾನವ ಸಮೂಹವನ್ನು ಸನ್ಮಾರ್ಗದ ಹಾದಿಯತ್ತ ಕೊಂಡೊಯ್ಯಲು  ಅಲ್ಲಾಹನು ಪ್ರವಾದಿ ಮುಹಮ್ಮದ್ ಅವರಿಗೆ ಬೋದಿಸಿದ ಪವಿತ್ರ ಗ್ರಂಥ ಕುರಾನ್‌ ಎಂದು ಮುಸಲ್ಮಾನ ಸಮುದಾಯದವರು ನಂಬುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?