ಪುಲ್ವಾಮಾ ದಾಳಿಯ ಅಸಲಿ ಮೂಲ ಬಹಿರಂಗ; ಇಲ್ಲೆ ಇತ್ತು ಉಗ್ರ ತಯಾರಿಕಾ ಶಾಲೆ!

By Suvarna NewsFirst Published Oct 13, 2020, 5:39 PM IST
Highlights

ಪುಲ್ವಾಮಾ ದಾಳಿಕೋರರ ಬಗ್ಗೆ ಮತ್ತೊಂದು ಸಾಕ್ಷ್ಯ/ ಈ ಶಾಲೆಯಲ್ಲಿ ಕಲಿತವರು ಉಗ್ರ  ಸಂಘಟನೆ ಜಾಯಿನ್ ಆಗುತ್ತಿದ್ದರು/ ಇದೇ ಸಂಸ್ಥೆಯ  ಹಳೆ ವಿದ್ಯಾರ್ಥಿ ಸಜ್ಜಾದ್ ಭಟ್ ಎಂಬ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವುದಕ್ಕೆ ದಾಖಲೆಗಳಿವೆ

ಶ್ರೀನಗರ(ಅ. 13) ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ವಾಸನೆ ಬಂದಿದೆ.  ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಧಾರ್ಮಿಕ ಶಾಲೆಯೊಂದರ ಮೂವರು ಶಿಕ್ಷಕರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ನಂತರ ಆತಂಕಕಾರಿ ಮಾಹಿತಿಗಳು ಹೊರಕ್ಕೆ ಬಂದಿವೆ.

ಸಿರಾಜ್-ಉಲೂಮ್ ಇಮಾಮ್ ಸಾಹಿಬ್ (ಶಾಲೆ) ಇದೀಗ ತನಿಖೆಯನ್ನು ಎದುರಿಸಬೇಕಾಗಿದೆ.  ಇದೇ ಸಂಸ್ಥೆಯ  ಹಳೆ ವಿದ್ಯಾರ್ಥಿ ಸಜ್ಜಾದ್ ಭಟ್ ಎಂಬ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವುದಕ್ಕೆ ದಾಖಲೆಗಳು ಲಭ್ಯವಾಗಿದೆ. 

ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ದಾಳಿ.. ಏನೇನಾಯ್ತು?

ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಲವತ್ತು ಜನ ಸೈನಿಕರು ಹುತಾತ್ಮರಾಗಿದ್ದರು. ಇದಾದ ಮೇಲೆ ಉಗ್ರರ ಮೇಲೆ ನಡೆದ ಸರ್ಜಿಕಲ್ ದಾಳಿ ಈಗ ಇತಿಹಾಸ. ಈ ಶಾಲೆಯ ಹದಿಮೂರು ಜನ ಉಗ್ರ ಸಂಘಟನೆಗೆ ಸೇರಿದ್ದಾರೆ ಎನ್ನುವುದರ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.  ನಿಷೇಧಕ್ಕೆ ಒಳಗಾಗಿರುವ ಜಮಾತೆ ಇ ಇಸ್ಲಾಮಿ ಸಂಘಟನೆ ಜತೆ ಇವರು ಗುರುತಿಸಿಕೊಂಡಿದ್ದರು.

click me!