Kashi Vishwanath Dham ಪ್ರಧಾನಿ ಮೋದಿ ಕನಸಿನ ಯೋಜನೆ ಪೂರ್ಣ, ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಡಿ.13ಕ್ಕೆ ಉದ್ಘಾಟನೆ!

By Suvarna News  |  First Published Dec 12, 2021, 7:39 PM IST
  • ಮೋದಿ ಮಾರ್ಗದರ್ಶನದಲ್ಲಿ  ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಯೋಜನೆ ಪೂರ್ಣ
  • ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ, ನಾಳೆ ಕಾರಿಡಾರ್ ಉದ್ಘಾಟನೆ
  • ಎರಡು ವರ್ಷಗಲ್ಲಿ 399 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪೂರ್ಣ

ನವದೆಹಲಿ(ಡಿ.12): ಪ್ರಧಾನಿ ನರೇಂದ್ರ ಮೋದಿ(PM Narendra Modi) ಸ್ವಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಐತಿಹಾಸಿಕ, ಅತ್ಯಂತ ಪುರಾತನ ಪವಿತ್ರ ಶಿವನ ದೇಗುಲ ಕಾಶಿ ವಿಶ್ವನಾಥ ಮಂದಿರದ(Kashi Vishwanath Temple) ಸಂಕೀರ್ಣದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದೆ. ನಾಳೆ(ಡಿ.13) ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮ ಕಾರಿಜಾರ್(Vishwanath Dham project) ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಯೋಜನೆ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರಕ್ಕೆ(Varanasi) ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಮೋದಿ ವಾರಣಾಸಿ ತಲುಪಲಿದ್ದಾರೆ. ಭಕ್ತರಿಗೆ ಪಾದಾಚಾರಿ ವ್ಯವಸ್ಥೆ, ಹಲವು ಸಭಾಂಗಣ, ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ, ಆಧ್ಯಾತ್ಮಿಕ ಗ್ರಂಥಾಲಯ, ವರ್ಚುವಲ್ ಗ್ಯಾಲರಿ ಸೇರಿದಂತೆ ಹಲವು ಕಾಮಾಗಾರಿಗಳನ್ನು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. 

Tap to resize

Latest Videos

Kashi Vishwanath Temple: ಕಾಶಿಯ ಕುರಿತ ಆಸಕ್ತಿಕರ ಸಂಗತಿಗಳಿವು

ಬರೋಬ್ಬರಿ 339 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಪೂರ್ಣಗೊಳಿಸಲಾಗಿದೆ. ಈ ಯೋಜನೆ ಮೋದಿ ಕನಸಿನ ಯೋಜನೆಯಾಗಿದೆ. ಐತಿಹಾಸಿಕ ದೇಗುಲ ಹಾಗೂ ಅದರ ಸುತ್ತಲಿನ ಸಂಕೀರ್ಣದಲ್ಲಿ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿಶೇಷ ಅಂದರೆ ದೇವಾಲಯದ ಪರಂಪರೆ ಹಾಗೂ ಸಂಸ್ಕೃತಿಗೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ಕಾಶಿ ವಿಶ್ವನಾಥ ದೇಗುಲದ ಗತವೈಭವವನ್ನು ಪುನರ್ ನಿರ್ಮಿಸಲಾಗಿದೆ. 

"

ಕಾರಿಡಾರ್ ಯೋಜನೆ ವಾಸ್ತುಶಿಲ್ಪ, ವಿನ್ಯಾಸ ಎಲ್ಲವನ್ನೂ ಖುದ್ದು ಮೋದಿ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಈ ಅಭಿವೃದ್ದಿ ಕಾಮಗಾರಿಗೆ ಭೂಸ್ವಾದೀನ ಪ್ರಕ್ರಿಯೆ ಯಾವುದೇ ಸಮಸ್ಯೆ ಇಲ್ಲದೆ ಮಾಡಲಾಗಿದೆ.  ಯೋಜನೆಗೆ ಮೇಲ್ವಿಚಾರಣೆ, ಮಾರ್ಗದರ್ಶನವನ್ನು ಮೋದಿ ನೀಡಿದ್ದಾರೆ. ಹೀಗಾಗಿ ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳ್ಳಲು ಸಾಧ್ಯವಾಗಿದೆ. ಕಾಮಗಾರಿ ಪ್ರಗತಿ ಪರಿಶೀಲಿಸು ಮೋದಿ ಹಲವು ಭಾರಿ ವಿಡಿಯೋ ಕಾನ್ಫೆರನ್ಸ್ ಮೂಲಕ ಸಭೆ ನಡೆಸಿದ್ದಾರೆ. 

UP Elections: ಕಾಶಿ ವಿಶ್ವನಾಥ ದೇಗುಲದಲ್ಲಿ ಯೋಗಿ ಸರ್ಕಾರದ ಸಚಿವ ಸಂಪುಟ ಸಭೆ!

5,000 ಹೆಕ್ಟೇರ್ ಪ್ರದೇಶದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ತಲೆ ಎತ್ತಿದೆ. ಭೂಸ್ವಾದೀನ ಪಡಿಸಿದ ಬಳಿಕ 300ಕ್ಕೂ ಹೆಚ್ಚು ಕಟ್ಟಡಗಳನ್ನು ಕಡವಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾಶಿ ವಿಶ್ವನಾಥ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಇದೀಗ ಎಲ್ಲಾ ಸೌಲಭ್ಯಗಳು ಸಿಗಲಿದೆ. ದೇಗುಲದಲ ಸಂಕೀರ್ಣದಲ್ಲಿ ಧ್ಯಾನ, ಆಧ್ಯಾತ್ಮಿಕ ಸಭೆ ಸಮಾರಂಭ ನಡೆಸಬಹುಗುದಾದ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದೀಗ ಕಾಶಿ ವಿಶ್ವನಾಥ ಮಂದಿರದ ಗತ ವೈಭವ ಮರುಕಳಿಸಿದೆ. 

ಕಾಶೀ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂತಸ ಹಂಚಿಕೊಂಡಿದ್ದಾರೆ. ಕಾಶಿ ವಿಶ್ವನಾಥ ಮಂದಿರ ಆಧ್ಯಾತ್ಮಿಕ ಚೈತನ್ಯದ ಕೇಂದ್ರ. ನಾಳೆ ದೇಶದಲ್ಲಿ ಅತೀ ಸಂಭ್ರಮದ ದಿನ. ಐತಿಹಾಸಿಕ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆ ನಡೆಯಲಿದೆ. ಎಲ್ಲರೂ ನಾಳಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದುು ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

 

Tomorrow, 13th December is a landmark day. At a special programme in Kashi, the Shri Kashi Vishwanath Dham project will be inaugurated. This will add to Kashi's spiritual vibrancy. I would urge you all to join tomorrow's programme. https://t.co/DvTrEKfSzk pic.twitter.com/p2zGMZNv2U

— Narendra Modi (@narendramodi)

ದೇಗುದಲ ಸುತ್ತಮುತ್ತ ಕಿರಿದಾದ ರಸ್ತೆ, ಸೂಕ್ತ ಪಾದಾಚಾರಿ ವ್ಯವಸ್ಥೆ, ಗಂಗಾಜಲವನ್ನ ದೇವಸ್ಥಾನಕ್ಕೆ ಅರ್ಪಿಸುವ ಸಂಪ್ರದಾಯಕ್ಕೆ ಸೌಲಭ್ಯಗಳ ಕೊರತೆ ತೊಡಕಾಗಿತ್ತು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡಲಾಗಿದೆ. ಇದೀಗ ಭಕ್ತರ ಅನುಕೂಲಕ್ಕೆ ಎಲ್ಲಾ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ.

ಇದೀಗ ಇಡೀ ದೇಶ ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಯುತ್ತಿದೆ. ದೇಶದ ಎಲ್ಲಾ ರಾಜ್ಯಗಳ ಪ್ರಮುಖ ನಗರ, ಪಟ್ಟಣಗಳಲ್ಲಿ ಕಾರಿಡಾರ್ ಯೋಜನೆ ಲೈವ್ ಪ್ರಸಾರವಾಗಲಿದೆ. ಈ ವಿಶೇಷ ಕಾರ್ಯಕ್ರಮ ದೇಶದ ಸಂತಸ ಇಮ್ಮಡಿಗೊಳಿಸಿದೆ.

click me!