ನವದೆಹಲಿ(ಜು.19): ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಆದರೆ 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಪ್ರಯೋಗ ಅಂತಿಮ ಹಂತದಲ್ಲಿದೆ. 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಈಗಾಗಲೇ 2ನೇ ಡೋಸ್ ಕೋವಾಕ್ಸಿನ್ ಲಸಿಕೆ ನೀಡಲಾಗಿದೆ. ಇದೀಗ ಮುಂದಿನ ವಾರದಿಂದ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ 2ನೇ ಡೋಸ್ ಟ್ರಯಲ್ ಲಸಿಕೆ ನೀಡಲಾಗುತ್ತಿದೆ.
ಹೊಸ ಮೈಲಿಗಲ್ಲು; 40 ಕೋಟಿ ಗಡಿ ದಾಟಿದ ಭಾರತದ ಲಸಿಕಾ ಅಭಿಯಾನ!
ಮಕ್ಕಳ ಕೋವಿಡ್ ಲಸಿಕೆ ಪ್ರಯೋಗ ಇದೀಗ ಅಂತಿಮ ಹಂತ ತಲುಪಿದೆ. ಮುಂದಿನ ವಾರದಿಂದ 2 ರಿಂದ 6 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ 2ನೇ ಡೋಸ್ ಪ್ರಯೋಗ ನಡೆಯಲಿದೆ. 3ನೇ ಅಲೆ ಆತಂಕದ ನಡುವೆ ಮಕ್ಕಳ ಮೇಲಿನ ಲಸಿಕೆ ಪ್ರಯೋಗಕ್ಕೆ ಮತ್ತಷ್ಟು ವೇಗ ನೀಡಲಾಗಿದೆ.
ಸದ್ಯ ಪ್ರಯೋಗದ ಹಂತದಲ್ಲಿರುವ ಮಕ್ಕಳ ಕೋವಿಡ್ ಲಸಿಕೆ ಸೆಪ್ಟೆಂಬರ್ ವೇಳೆ ಲಭ್ಯವಾಗಲಿದೆ. ಈ ಮೂಲಕ ಭಾರತ ಕೊರೋನಾ ಎದುರಿಸಲು ಸಂಪೂರ್ಣ ವಾಗಿ ಶಕ್ತವಾಗಲಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಜೀವಿತಾವಧಿಗೆ ರಕ್ಷಣೆ ನೀಡಲಿದೆ ಆಸ್ಟ್ರಾಜೆನೆಕಾ ಲಸಿಕೆ; ಅಧ್ಯಯನ ವರದಿ ಬಹಿರಂಗ!
2 ರಿಂದ 6 ವರ್ಷದೊಳಗಿನ ಮಕ್ಕಳ ಮೇಲಿನ ಲಸಿಕೆ ಪ್ರಯೋಗಕ್ಕೆ ಅವರ ವಯಸ್ಸಿನ ಆಧಾರದಲ್ಲಿ ಕೆಲ ವಿಭಾಗ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ 175 ಮಕ್ಕಳಿದ್ದಾರೆ. ಆಗಸ್ಟ್ ತಿಂಗಳ ಅಂತ್ಯದಲ್ಲಿ ಮಕ್ಕಳ ಮೇಲಿನ 2ನೇ ಡೋಸ್ ಲಸಿಕೆ ಪ್ರಯೋಗದ ಆಂತರಿಕೆ ವರದಿ ಲಭ್ಯವಾಗಲಿದೆ. ಕೋವಾಕ್ಸಿನ್ ಮಾತ್ರವಲ್ಲ ಜೈಡಸ್ ಕ್ಯಾಡಿಲಾ ಕೂಡ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಿ ಅಂತಿಮ ಹಂತ ತಲುಪಿದೆ.