ಬೆಂಗಳೂರು (ಫೆ.21): ಇಲ್ಲಿವರೆಗೂ ವಿಪಕ್ಷಗಳ ನಾಯಕರ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಇದೀಗ 2 ಸಾವಿರ ಕೋಟಿ ರೂಪಾಯಿ ಭಷ್ಟಾಚಾರ ಆರೋಪ ಮಾಡಲಾಗಿದೆ. ಶಾಸಕ ಮುನಿರತ್ನ ಈ ದೂರು ನೀಡಿದ್ದು, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ 2 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬೇಕಾಬಿಟ್ಟಿ ಹಂಚಿಕೆ ಮಾಡಿದ್ದು, ಅದರಲ್ಲಿ ಶೇ. 15ರಷ್ಟು ಕಮೀಷನ್ ಪಡೆದಿದ್ದಾರೆ ಎಂದು ಅರೋಪಿಸಿದ್ದಾರೆ. ಈ ಕುರಿತಾಗಿ ಲೋಕಾಯುಕ್ತ, ಇಡಿ ಹಾಗೂ ಸಿಬಿಐಗೆ ದೂರು ನೀಡಿದ್ದಾರೆ.

06:20 PM (IST) Feb 21
ಬೆಳಗಾವಿಯಲ್ಲಿ ಶಕ್ತಿ ಯೋಜನೆಯಡಿ ಪ್ರಯಾಣಿಸುತ್ತಿದ್ದ ಯುವತಿಗೆ ಕನ್ನಡದಲ್ಲಿ ಆಧಾರ್ ಕಾರ್ಡ್ ಕೇಳಿದ್ದಕ್ಕೆ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದು, ಕಂಡಕ್ಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗಾವಿ ಬಸ್‌ನಲ್ಲಿ ಕನ್ನಡ ಮಾತನಾಡಿದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರು!
05:14 PM (IST) Feb 21
ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಒಂದು ವಾರದಲ್ಲಿ ಯಜಮಾನಿಯರ ಖಾತೆಗೆ ಹಣ: ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್!
03:45 PM (IST) Feb 21
ಉದ್ಯಮಿ ಮೋಹನ್‌ದಾಸ್ ಪೈ, ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು, ಬೆಂಗಳೂರು ಅಭಿವೃದ್ಧಿ ಕಡೆ ಗಮನಹರಿಸಲು ಮನವಿ ಮಾಡಿದ್ದಾರೆ. ನಗರದ ಸಮಸ್ಯೆಗಳ ಬಗ್ಗೆ ಅವರು ಸಚಿವರ ಗಮನ ಸೆಳೆದಿದ್ದಾರೆ.
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಕನಕಪುರ ಬಂಡೆಗೆ ಡಿಚ್ಚಿ ಹೊಡೆದ ಉದ್ಯಮಿ ಮೋಹನ್‌ದಾಸ್ ಪೈ!
03:44 PM (IST) Feb 21
ಬೆಂಗಳೂರಿನ ಕೋರಮಂಗಲದಲ್ಲಿ ಖಾಸಗಿ ಹೋಟೆಲ್ ಟೆರೇಸ್ ಮೇಲೆ ಮಹಿಳೆಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪರಿಚಿತ ವ್ಯಕ್ತಿಯೊಂದಿಗೆ ಹೋದಾಗ ಈ ಘಟನೆ ನಡೆದಿದೆ. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್: ಕೋರಮಂಗಲ ಖಾಸಗಿ ಹೋಟೆಲ್ ಟೆರೇಸ್‌ನಲ್ಲಿ ಮೂವರಿಂದ ಅತ್ಯಾಚಾರ!
03:43 PM (IST) Feb 21
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ-ಕಿಸಾನ್ ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಲಿದ್ದು, ರೈತ ಸಮುದಾಯದ ಆದಾಯವನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ, ಸುಮಾರು 22,000 ಕೋಟಿ ರೂ.ಗಳನ್ನು 9.8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಿದ್ದಾರೆ.
03:26 PM (IST) Feb 21
ತಮಿಳುನಾಡಿನಲ್ಲಿ 79 ವರ್ಷದ ವ್ಯಕ್ತಿಯೊಬ್ಬ ಸಮಯಕ್ಕೆ ಸರಿಯಾಗಿ ಊಟ ನೀಡದ ಕಾರಣಕ್ಕೆ ತನ್ನ ಪತ್ನಿಯನ್ನು ಕೊಂದಿದ್ದಾನೆ. ಮಧುಮೇಹಿಯಾಗಿದ್ದ ವಿನಾಯಗಂಗೆ ಆತನ ಪತ್ನಿ ಧನಲಕ್ಷ್ಮಿ ಊಟ ಬಡಿಸಲು ವಿಳಂಬಿಸಿದ್ದರಿಂದ ಈ ಕೊಲೆ ನಡೆದಿದೆ.
ಊಟ ಹಾಕೋದು ತಡವಾಗಿದ್ದಕ್ಕೆ ಪತ್ನಿಯನ್ನೇ ಕೊಂದ 79 ವರ್ಷದ ವೃದ್ಧ!
02:45 PM (IST) Feb 21
ಮಹಾಕುಂಭ 2025 ಕ್ಕಾಗಿ 1200 ಹೆಚ್ಚುವರಿ ಬಸ್ಸುಗಳು ಸಂಚಾರ ಪ್ರಾರಂಭಿಸಲಿವೆ. ಶಟಲ್ ಬಸ್ಸುಗಳು ಮತ್ತು ವಲಯವಾರು ಬಸ್ಸುಗಳಿಂದ ಪ್ರಯಾಣ ಸುಲಭವಾಗಲಿದೆ.
02:32 PM (IST) Feb 21
ಭಾರತದಲ್ಲಿ ಆದಾಯ ಗಳಿಸುವವರು ತಮ್ಮ ಸಂಬಳದ 33% ಕ್ಕಿಂತ ಹೆಚ್ಚು ಹಣವನ್ನು EMI ಗಳಿಗಾಗಿ ಖರ್ಚು ಮಾಡುತ್ತಾರೆ. ಈ ಮಾಹಿತಿಯನ್ನು 'ಭಾರತ ಹೇಗೆ ಖರ್ಚು ಮಾಡುತ್ತದೆ: ಗ್ರಾಹಕ ಖರ್ಚುಗಳ ಬಗ್ಗೆ ವಿವರವಾದ ಮಾಹಿತಿ' (How India Spends: A Deep Dive into Consumer Spending Behavior) ವರದಿಯಲ್ಲಿ ತಿಳಿಸಲಾಗಿದೆ. ಭಾರತದ ಅತಿದೊಡ್ಡ B2B SaaS ಫಿನ್‌ಟೆಕ್ ಕಂಪನಿ ಪರ್ಫಿಯೋಸ್ ಫೆಬ್ರವರಿ 19 ರಂದು PwC ಇಂಡಿಯಾ ಸಹಯೋಗದೊಂದಿಗೆ ಈ ವರದಿಯನ್ನು ಬಿಡುಗಡೆ ಮಾಡಿದೆ.
ಭಾರತದಲ್ಲಿ ಉದ್ಯೋಗಿಗಳು ತಮ್ಮ ವೇತನದ ಶೇ.33ರಷ್ಟನ್ನು EMI ಪಾವತಿ ಮಾಡ್ತಾರೆ ಎಂದ ವರದಿ!
02:16 PM (IST) Feb 21
ಪಟಿಯಾಲದ ರಾಜಪುರದಲ್ಲಿ ಸುಪಾರಿ ಹತ್ಯೆಗೆ ಯತ್ನ ಪ್ರಕರಣವನ್ನು ಭೇದಿಸಿ ವಿದೇಶಿ ಮೂಲದ ಗ್ಯಾಂಗ್ ಸ್ಟಾರ್ ಗೋಲ್ಡಿ ಧಿಲ್ಲನ್‌ನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಪಾತಕಿ ಗೋಲ್ಡಿ ಧಿಲ್ಲನ್‌ನ ನಿರ್ದೇಶನದ ಮೇರೆಗೆ ಈ ಇಬ್ಬರೂ ಆರೋಪಿಗಳು ಮೊಹಾಲಿ ಮತ್ತು ರಾಜಪುರದಲ್ಲಿ ಸುಪಾರಿ ಹತ್ಯೆ ಪ್ರಕರಣವನ್ನು ನಿಭಾಯಿಸಿದ್ದರು. ಈ ಇಬ್ಬರೂ ಆರೋಪಿಗಳು ಅಪರಾಧ ಚಟುವಟಿಕೆಗಳ ಇತಿಹಾಸವನ್ನು ಹೊಂದಿದ್ದು, ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅವರಿಂದ 5 ಪಿಸ್ತೂಲ್‌ಗಳು, 15 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
01:26 PM (IST) Feb 21
ತಮಿಳುನಾಡು: ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (SIWU) ನೌಕರರು ಮತ್ತು ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಕಾರ್ಯಕರ್ತರು ಕಾಂಚೀಪುರಂನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸುಳ್ಳು ಆರೋಫಗಳನ್ನು ಮಾಡಿ ಯೂನಿಯನ್‌ನ ಮೂವರು ಪದಾಧಿಕಾರಿಗಳನ್ನು ಸಂಸ್ಥೆ ಅಮಾನತು ಮಾಡಿದೆ ಹಾಗೂ ಸಂಸ್ಥೆ ಗುತ್ತಿಗೆ ಕಾರ್ಮಿಕರನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸಿಕೊಂಡಿದೆ ಎಂದು ಆರೋಪಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
01:02 PM (IST) Feb 21
ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಖಂಡಿಸಿ ಪ್ರತಿಭಟನೆಗೆ ಸಿದ್ಧತೆ ಸುಮಾರು 15-20 ವರ್ಷಗಳಿಂದ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿರುವ ಮೆಟ್ರೋ. ಇವರು ಇದನ್ನು ಖಾಸಗಿ ಸಂಸ್ಥೆಯನ್ನಾಗಿ ಮಾಡಿಕೊಳ್ಳಲು ಹೊರಟ್ಟಿದ್ದಾರೆ ಸಿಂಗಾಪುರ್ ಮೆಟ್ರೋ ಟಿಕೆಟ್ ದರದಂತೆ ಬೆಂಗಳೂರಲ್ಲೂ ಟಿಕೆಟ್ ದರ ಏರಿಕೆ ಮಾಡಿದ್ದಾರೆ. ಬೆಂಗಳೂರು ಮೆಟ್ರೋ ಇನ್ನೂ ಕೂಸು ಈಗಾಗಲೇ ನೂರಾರು ರೂಪಾಯಿ ದರ ಮಾಡಿದ್ರೆ ಮುಂದಿನ ದಿನಗಳಲ್ಲಿ ನೀವು ಎಷ್ಟು ಕೀ.ಮೀಟರ್ ಮಾಡಿದ್ರೂ ನೋ ಯೂಸ್. ಈಗಾಗಲೇ ಜನಗಳೇ ಈ ಮೆಟ್ರೋ ನಮಗಲ್ಲ ನಾವು ಹೋಗೋದು ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಜನ ಮೆಟ್ರೋ ತ್ಯಜಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿರುವ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆ ಭಾನುವಾರ ದೊಡ್ಡ ಮಟ್ಟದ ಸಮಾವೇಶ ಮಾಡಲು ತೀರ್ಮಾನ ಮಾಡಿದೆ.
12:30 PM (IST) Feb 21
ಇಂಡಿಯಾಸ್ ಗಾಟ್ ಲೇಟೆಂಟ್ ಶೋಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಹಲವು ಎಫ್‌ಐಆರ್‌ಗಳ ವಿರುದ್ಧ ಯೂಟ್ಯೂಬರ್ ಆಶಿಶ್ ಚಂಚಲಾನಿ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಚಂಚಲಾನಿ ಅವರ ಅರ್ಜಿಯ ಮೇರೆಗೆ ಮಹಾರಾಷ್ಟ್ರ ಮತ್ತು ಅಸ್ಸಾಂ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ ಮತ್ತು ಅವರ ಅರ್ಜಿಯನ್ನು ಯೂಟ್ಯೂಬರ್ ರಣವೀರ್ ಅಲಹಾಬಾದ್ ಅವರ ಅರ್ಜಿಯೊಂದಿಗೆ ಸೇರಿಸಿದೆ.
10:41 AM (IST) Feb 21
ಜಮ್ಮು ಮತ್ತು ಕಾಶ್ಮೀರ: ದೀರ್ಘಕಾಲದ ಒಣ ಹವೆಯ ನಂತರ ಹೊಸ ಹಿಮಪಾತದಿಂದಾಗಿ ಪ್ರವಾಸಿ ತಾಣ ಗುಲ್ಮಾರ್ಗ್ ಚಳಿಗಾಲದ ಅದ್ಭುತ ಲೋಕವಾಗಿ ಮಾರ್ಪಟ್ಟಿದೆ.
09:51 AM (IST) Feb 21
ದೆಹಲಿ: ಅಂತರರಾಷ್ಟ್ರೀಯ ಆರೋಗ್ಯ ಸಂವಾದ 2025 ರ 12 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ, "ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅನ್ನು 2018 ರಲ್ಲಿ ಪ್ರಾರಂಭಿಸಲಾಯಿತು. ಇದು ವಿಶ್ವದ ಅತಿದೊಡ್ಡ ಆರೋಗ್ಯ ವ್ಯಾಪ್ತಿ ಮತ್ತು ಆರೋಗ್ಯ ಭರವಸೆ ಯೋಜನೆಯಾಗಿದ್ದು, ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5,00,000 ರೂ.ಗಳವರೆಗೆ ಸಮಗ್ರ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚೆಗೆ, ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು ಸೇರಿಸಲು ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಭಾರತ ಸರ್ಕಾರದ ಇತರ ಯೋಜನೆಗಳ ಅಡಿಯಲ್ಲಿ ಒದಗಿಸಲಾದ ಸೇವೆಗಳೊಂದಿಗೆ, ಕಳೆದ 10 ವರ್ಷಗಳಲ್ಲಿ ಒಟ್ಟು ಆರೋಗ್ಯ ವೆಚ್ಚದಲ್ಲಿ ಪಾಕೆಟ್‌ನಿಂದ ಹೊರಗಿರುವ ವೆಚ್ಚವನ್ನು 64.2% ರಿಂದ 39.4% ಕ್ಕೆ ಇಳಿಸಿದೆ... ಅಂತರರಾಷ್ಟ್ರೀಯ ಆರೋಗ್ಯ ಸಂವಾದಗಳಂತಹ ವೇದಿಕೆಗಳು ಈ ಆಂದೋಲನವನ್ನು ಉತ್ತೇಜಿಸುತ್ತವೆ. ನಾವೀನ್ಯತೆಗಳು ಮತ್ತು ಪಾಲುದಾರಿಕೆಗಳನ್ನು ನಡೆಸುತ್ತವೆ, ಇದು ರೋಗಿಗಳ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆಯ ಮುಂದಿನ ಯುಗವನ್ನು ವ್ಯಾಖ್ಯಾನಿಸುತ್ತದೆ ಎಂದರು.
<
p>
09:16 AM (IST) Feb 21
ಜಮ್ಮು ಮತ್ತು ಕಾಶ್ಮೀರ: ಬಹಳ ದಿನಗಳಿಂದ ಜಮ್ಮು ಕಾಶ್ಮೀರದ ದೋಡಾ ಪ್ರದೇಶವನ್ನು ಕಾಡುತ್ತಿದ್ದ ಬರಗಾಲ ಕೊನೆಗೂ ಕೊನೆಗೊಂಡಿದ್ದು, ಜನರಿಗೆ ನೆಮ್ಮದಿ ತಂದಿದೆ. ದೋಡಾದ ಭಲೇಸಾದ ಮೇಲ್ಭಾಗದಲ್ಲಿ ಹೊಸ ಹಿಮಪಾತ ಉಂಟಾಗಿದೆ. ಇದು ನೋಡಲು ಒಂದು ಅದ್ಭುತ ದೃಶ್ಯವಾಗಿದ್ದು, ಇಡೀ ಪ್ರದೇಶವು ಬೆರಗುಗೊಳಿಸುವ ಬಿಳಿ ಭೂದೃಶ್ಯವಾಗಿ ಮಾರ್ಪಟ್ಟಿದೆ.