
ನವದೆಹಲಿ(ಮೇ 19) ಸ್ವಚ್ಛ ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಕಸ ಮುಕ್ತ ನಗರಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ನಮ್ಮ ರಾಜ್ಯದ ಮೈಸೂರು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಹೆಮ್ಮೆ ಹೆಚ್ಚಿಸಿದೆ.
ಛತ್ತೀಸ್ ಘಡದ ಅಂಬಿಕಾಪುರ್ ಮತ್ತು ಮಧ್ಯ ಪ್ರದೇಶದ ಇಂದೋರ್ ಮೊದಲೆರಡು ಸ್ಥಾನ ಪಡೆದುಕೊಂಡಿವೆ. ಕೊರೋನಾ ವಿರುದ್ಧ ಹೋರಾಟ ಮಾಡಲು ಸ್ವಚ್ಛ ಭಾರತ ಬಹುದೊಡ್ಡ ಅಸ್ತ್ರವಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ ಫಲಿತಾಂಶ ಪ್ರಕಟ ಮಾಡಿದ್ದಾರೆ. ಒಟ್ಟು 141 ನಗರಗಳಿಗೆ ರೇಟಿಂಗ್ ಕೊಡಲಾಗಿದೆ. ಅದರಲ್ಲಿ ಆರಕ್ಕೆ 5 ಸ್ಟಾರ್ 65ಕ್ಕೆ ಮೂರು ಸ್ಟಾರ್ ಮತ್ತು 70ಕ್ಕೆ ಒಂದು ಸ್ಟಾರ್ ನೀಡಲಾಗಿದೆ ಎಂದು ತಿಳಿಸಿದ್ದಾರೆ
ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದ ಮೈಸೂರು, ಜೈ ಹೋ
ಅಂಬಿಕಾನಗರ ಮತ್ತು ಇಂದೋರ್ ನಂತರ ಗುಜರಾತಿನ ರಾಜ್ ಕೋಟ್, ಸುರತ್, ಕರ್ನಾಟಕದ ಮೈಸೂರು ಮತ್ತು ಮಹಾರಾಷ್ಟ್ರದ ನೇವಿ ಮುಂಬೈ ಟಾಪ್ ಸ್ಥಾನ ಪಡೆದುಕೊಂಡಿವೆ. ಕರ್ನೂಲ್, ಹೊಸ ದಿಲ್ಲಿ, ತಿರುಪತಿ, ವಿಜಯವಾಡ, ಚಂಡೀಗಢ, ಭಿಲಾಯ್ ನಗರ, ಅಹಮದಾಬಾದ್ ನಗರಗಳು 3 ಸ್ಟಾರ್ ರೇಟಿಂಗ್ ಪಡೆದಿವೆ. ದಿಲ್ಲಿ ಕಂಟೋನ್ಮೆಂಟ್, ವಡೋದರಾ, ರೋಹ್ಟಕ್ ನಗರಗಳು ಸಿಂಗಲ್ ಸ್ಟಾರ್ ರೇಟಿಂಗ್ ಗೆ ತೃಪ್ತಿ ಪಟ್ಟುಕೊಂಡಿವೆ.
ದೇಶದ ಒಟ್ಟು 1435 ನಗರಗಳು ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದವು. ಕೊರೊನಾ ವೈರಸ್ ಹಾವಳಿಯಿಂದಾಗಿ ಪಟ್ಟಿ ಪ್ರಕಟ ಕೊಂಚ ತಡವಾಗಿದೆ. ನಗರಗಳಲ್ಲಿನ ಘನ ತ್ಯಾಜ್ಯ ವಿಲೇವಾರಿ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ರೇಟಿಂಗ್ ನೀಡಲಾಗಿದೆ. ನಗರಗಳು ಕಸ ಮುಕ್ತವಾಗಲು ಸ್ವಚ್ಛ ಭಾರತ ಅಭಿಯಾನ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.
ದ್ವಿತೀಯ ಸ್ಥಾನ ಪಡೆದುಕೊಂಡಿದ್ದ ಮೈಸೂರು: 2010 ರಲ್ಲಿ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛ ನಗರಗಳ ಪಟ್ಟಿಯಲ್ಲಿ ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ತದ ನಂತರದವರ್ಷಗಳಲ್ಲಿ ಹಿಂದೆ ಬಿದ್ದುದ್ದು ಈ ಬಾರಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ