ಕರ್ನಾಟಕ ಶಾಸಕರು ದೇಶದಲ್ಲೇ ಅತ್ಯಂತ ಶ್ರೀಮಂತರು: ಎಡಿಆರ್‌ ವರದಿ

By Kannadaprabha News  |  First Published Jul 16, 2023, 7:53 AM IST

ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು ದೇಶದಲ್ಲೇ ಅತ್ಯಂತ ಶ್ರೀಮಂತರು ಎಂದು ವರದಿಯೊಂದು ಹೇಳಿದೆ. ದೇಶದ ವಿವಿಧ ರಾಜ್ಯಗಳ ಶಾಸಕರ ಆಸ್ತಿಯ ಸರಾಸರಿ ಪ್ರಮಾಣ 13.63 ಕೋಟಿ ರು.ಗಳಾಗಿದ್ದರೆ, ಕರ್ನಾಟಕದ ಶಾಸಕರ ಸರಾಸರಿ ಆಸ್ತಿ ಪ್ರಮಾಣ 64.39 ಕೋಟಿ ರು.ನಷ್ಟಿದೆ ಎಂದು ವರದಿ ಹೇಳಿದೆ.


ನವದೆಹಲಿ (ಜು.16): ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು ದೇಶದಲ್ಲೇ ಅತ್ಯಂತ ಶ್ರೀಮಂತರು ಎಂದು ವರದಿಯೊಂದು ಹೇಳಿದೆ. ದೇಶದ ವಿವಿಧ ರಾಜ್ಯಗಳ ಶಾಸಕರ ಆಸ್ತಿಯ ಸರಾಸರಿ ಪ್ರಮಾಣ 13.63 ಕೋಟಿ ರು.ಗಳಾಗಿದ್ದರೆ, ಕರ್ನಾಟಕದ ಶಾಸಕರ ಸರಾಸರಿ ಆಸ್ತಿ ಪ್ರಮಾಣ 64.39 ಕೋಟಿ ರು.ನಷ್ಟಿದೆ ಎಂದು ವರದಿ ಹೇಳಿದೆ. 28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 4033 ಶಾಸಕರ ಪೈಕಿ 4001 ಶಾಸಕರು ತಮ್ಮ ಅಫಿಡವಿಟ್‌ಗಳಲ್ಲಿ ನೀಡಿರುವ ಮಾಹಿತಿ ಆಧರಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾಮ್ಸ್‌ರ್‍ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಎಂಬ ಎರಡು ಸಂಸ್ಥೆಗಳು ನಡೆಸಿದ ಅಧ್ಯಯನ ವರದಿ ಈ ಮಾಹಿತಿ ನೀಡಿದೆ.

ವರದಿಯ ಅನ್ವಯ ಶಾಸಕರ ಆಸ್ತಿಯ ರಾಷ್ಟ್ರೀಯ ಸರಾಸರಿ 13.63 ಕೋಟಿ ರು.ನಷ್ಟಿದೆ. ಇನ್ನು ತಮ್ಮ ಮೇಲೆ ಕ್ರಿಮಿನಲ್‌ ಪ್ರಕರಣಗಳಿದೆ ಎಂದು ಘೋಷಿಸಿಕೊಂಡ ಶಾಸಕರ ಸರಾಸರಿ ಆಸ್ತಿ 16.36 ಕೋಟಿ ರು.ನಷ್ಟಿದ್ದರೆ, ಯಾವುದೇ ಕ್ರಿಮಿನಲ್‌ ಹಿನ್ನೆಲೆ ಹೊಂದಿರದ ಶಾಸಕರ ಸರಾಸರಿ ಆಸ್ತಿ ಪ್ರಮಾಣ 11.45 ಕೋಟಿ ರು.ನಷ್ಟಿದೆ.

Tap to resize

Latest Videos

ಲೋಕಸಭಾ ಚುನಾವಣೆ: ತೇಜಸ್ವಿ ಸೂರ್ಯ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟ ಸೋಮಣ್ಣ

ಕರ್ನಾಟಕ ನಂ.1: ಕರ್ನಾಟಕದ 223 ಶಾಸಕರ ಸರಾಸರಿ ಆಸ್ತಿ 64.39 ಕೋಟಿ ರು.ನಷ್ಟಿದೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (22.24 ಕೋಟಿ ರು.), ಮಹಾರಾಷ್ಟ್ರ (23.51 ಕೋಟಿ ರು.) ರಾಜ್ಯಗಳಿವೆ ಎಂದು ವರದಿ ಹೇಳಿದೆ. ಇನ್ನು ಅತಿ ಕಡಿಮೆ ಆಸ್ತಿ ಹೊಂದಿರುವ ರಾಜ್ಯಗಳ ಪೈಕಿ ತ್ರಿಪುರಾ ಮೊದಲ ಸ್ಥಾನದಲ್ಲಿದೆ. ಇಲ್ಲಿನ 59 ಶಾಸಕರ ಸರಾಸರಿ ಆಸ್ತಿ 1.54 ಕೋಟಿ ರು.ನಷ್ಟಿದೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ 2.80 ಕೋಟಿ ರು., ಕೇರಳ 3.15 ಕೋಟಿ ರು.ನಷ್ಟಿದೆ ಎಂದು ವರದಿ ಹೇಳಿದೆ.

ಬಿಲಿಯನೇರ್‌: 4001 ಶಾಸಕರ ಪೈಕಿ 88 ಅಂದರೆ ಶೇ.2ರಷ್ಟುಶಾಸಕರು ಬಿಲಿಯನೇರ್‌ಗಳು (100 ಕೋಟಿ ರು.ಗಿಂತ ಹೆಚ್ಚು). ಇದರಲ್ಲಿ ಕರ್ನಾಟಕದ 223 ಶಾಸಕರ ಪೈಕಿ 32 ಶಾಸಕರು (ಶೇ.14) 100 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದುವ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಅರುಣಾಚಲಪ್ರದೇಶ 59ರಲ್ಲಿ 4 (ಶೇ.7), ಆಂಧ್ರಪ್ರದೇಶ 174ರಲ್ಲಿ 10 (ಶೇ.6) ರಾಜ್ಯಗಳಿವೆ. ಉಳಿದಂತೆ ಮಹಾರಾಷ್ಟ್ರ, ಹಿಮಾಚಲಪ್ರದೇಶ, ಗುಜರಾತ್‌ ಮತ್ತು ಮಧ್ಯಪ್ರದೇಶ ರಾಜ್ಯಗಳು ಕೂಡಾ 100 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಇರುವ ಶಾಸಕರನ್ನು ಹೊಂದಿವೆ ಎಂದು ವರದಿ ಹೇಳಿದೆ. ದೇಶದಲ್ಲಿ ಕಾಂಗ್ರೆಸ್‌ನ 33, ಬಿಜೆಪಿಯ 24 ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ನ 8 ಜನರು ತಲಾ 100 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಸಾಲ ಹೊಂದಿರುವ ಶಾಸಕರು
ನಂ.1 ಪ್ರಿಯಾಕೃಷ್ಣ 881 ಕೋಟಿ ರು.
ನಂ.3 ಡಿ.ಕೆ.ಶಿವಕುಮಾರ್‌ 265 ಕೋಟಿ ರು.

ಅತಿ ಕಡಿಮೆ ಆಸ್ತಿ ಹೊಂದಿದವರು
ನಿರ್ಮಲ್‌ಕುಮಾರ್‌ ಬಿಜೆಪಿ 1700 ರು.
ಮಕ್ರಾನಂದ ಮುದಳಿ ಪಕ್ಷೇತರ 15000 ರು.
ನರಿಂದರ್‌ ಪಾಲ್‌ ಆಪ್‌ 18370 ರು.

ಪುಷ್ಪ ಚಿತ್ರದ ಸ್ಟೈಲ್‌ನಲ್ಲಿ ಗಾಂಜಾ ಸಾಗಣೆ: ಮೂವರು ವಿದ್ಯಾರ್ಥಿಗಳ ಬಂಧನ

ಭಾರತೀಯ ಶಾಸಕರು ಇಷ್ಟು ಶ್ರೀಮಂತರು
1000 ಕೋಟಿ ಮೇಲ್ಪಟ್ಟು 03
500- 1000 ಕೋಟಿ ರು. 06
100- 500 ಕೋಟಿ ರು. 79
10- 100 ಕೋಟಿ ರು. 858
1- 10 ಕೋಟಿ ರು. 2271
10 ಲಕ್ಷ- 1 ಕೋಟಿ ರು. 713
1 ಲಕ್ಷ - 10 ಲಕ್ಷ ರು. 55
1 ಲಕ್ಷ ರು.ಗಿಂತ ಕಡಿಮೆ 16

click me!