ಶ್ರೀಶೈಲದಲ್ಲಿ ಘರ್ಷಣೆ: ಕರ್ನಾಟಕದ ಭಕ್ತನಿಗೆ ಕೊಡಲಿಯೇಟು, ರಾಜ್ಯದ 200ಕ್ಕೂ ಹೆಚ್ಚು ವಾಹನಗಳ ಧ್ವಂಸ

Published : Apr 01, 2022, 04:00 AM IST
ಶ್ರೀಶೈಲದಲ್ಲಿ ಘರ್ಷಣೆ: ಕರ್ನಾಟಕದ ಭಕ್ತನಿಗೆ ಕೊಡಲಿಯೇಟು, ರಾಜ್ಯದ  200ಕ್ಕೂ ಹೆಚ್ಚು ವಾಹನಗಳ ಧ್ವಂಸ

ಸಾರಾಂಶ

ಯುಗಾದಿ ಜಾತ್ರೆಗೆ ಹೋಗಿದ್ದ ಕರ್ನಾಟಕ ಭಕ್ತರು, ಸ್ಥಳೀಯರ ನಡುವೆ ಗಲಾಟೆ ನೀರಿನ ಬಾಟಲಿ ಖರೀದಿಗೆ ಕರ್ನಾಟಕ ಭಕ್ತ ಹೋದಾಗ ಜಗಳ ಆಗ ಸ್ಥಳೀಯರಿಂದ ಕರ್ನಾಟಕದ ಭಕ್ತನಿಗೆ ಕೊಡಲಿಯೇಟು ಆಗ ಉದ್ರಿಕ್ತ ಭಕ್ತರಿಂದ ನೂರಾರು ಅಂಗಡಿಗಳು, ವಾಹನ ನಾಶ

ಶ್ರೀಶೈಲಂ (ಆಂಧ್ರಪ್ರದೇಶ): ಶ್ರೀಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕ ಮೂಲದ ಭಕ್ತರು (devotees) ಹಾಗೂ ಸ್ಥಳೀಯ ಅಂಗಡಿ ಮಾಲೀಕರ ಮಧ್ಯೆ ಬುಧವಾರ ರಾತ್ರಿ ಭಾರೀ ಘರ್ಷಣೆ ನಡೆದಿದೆ. ಈ ವೇಳೆ ಕರ್ನಾಟಕದ ಭಕ್ತನೊಬ್ಬ ಕೊಡಲಿಯಿಂದ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಇದೇ ವೇಳೆ ಉದ್ರಿಕ್ತ ಭಕ್ತರು ನೂರಾರು ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ ಹಾಗೂ ಕರ್ನಾಟಕದ 200ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಯುಗಾದಿ ಕಾರಣ ಶ್ರೀಶೈಲದಲ್ಲಿ(ShriSailam) ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕೆ (Bhramarambike) ದರ್ಶನಕ್ಕೆ ಸಾವಿರಾರು ಜನರು ಹೋಗುತ್ತಾರೆ. 2 ವರ್ಷ ಕೊರೋನಾ (Covid) ಕಾರಣ ಯುಗಾದಿ (Ugadi) ಉತ್ಸವ ನಡೆದಿರಲಿಲ್ಲ. ಹೀಗಾಗಿ ವಾಡಿಕೆಯಂತೆ 3 ಲಕ್ಷ ಭಕ್ತರ ಬದಲು ಉತ್ತರ ಕರ್ನಾಟಕದ ಪಾದಯಾತ್ರಿಗಳು ಸೇರಿ ಸುಮಾರು 6 ಲಕ್ಷ ಯಾತ್ರಿಕರು ಶ್ರೀಶೈಲಕ್ಕೆ ಈ ಸಲ ತೆರಳಿದ್ದು, ಕ್ಷೇತ್ರದಲ್ಲಿ ಭಾರೀ ಜನಸಂದಣಿ ಏರ್ಪಟ್ಟಿದೆ. ಇದೇ ಕಾರಣಕ್ಕೆ ಸ್ಪರ್ಶ ದರ್ಶನ ಬದಲು ಸಾಮಾನ್ಯ ದರ್ಶನಕ್ಕಷ್ಟೇ ಅವಕಾಶ ನೀಡಲಾಗಿದೆ.

Dr. Ambedkar Portrait Removal Row : ಜಡ್ಜ್‌ ವಿರುದ್ಧ ಪ್ರೊಟೆಸ್ಟ್, ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಘರ್ಷಣೆ

ಇಂಥ ಸಂದರ್ಭದಲ್ಲಿ ಬುಧವಾರ ರಾತ್ರಿ ಚಹಾ ಅಂಗಡಿಯೊಂದಕ್ಕೆ ನೀರಿನ ಬಾಟಲಿ (water Bottle) ಖರೀದಿಸಲು ಕರ್ನಾಟಕದ ಭಕ್ತನೊಬ್ಬ ತೆರಳಿದಾಗ, ಅಂಗಡಿಕಾರ ಸಮೇಲು ಎಂಬುವನಿಗೂ ಈ ಭಕ್ತನಿಗೂ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ. ಆಗ ಕರ್ನಾಟಕದ ಭಕ್ತರು ಅಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಜಗಳ ತೀವ್ರಗೊಂಡಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಉದ್ರಿಕ್ತ ಭಕ್ತರು ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಆಗ ಕೋಪಗೊಂಡ ಅಂಗಡಿಕಾರ ಹಾಗೂ ಸ್ಥಳೀಯರು, ನೀರು ಖರೀದಿಸಲು ಬಂದಿದ್ದ ಭಕ್ತನ ಮೇಲೆ ಕೊಡಲಿಯಿಂದ ದಾಳಿ ನಡೆಸಿದರು ಎಂದು ತಿಳಿದುಬಂದಿದೆ. ಗಾಯಾಳು ಭಕ್ತನನ್ನು ಸುನ್ನಿಪೆಂಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಹೆಸರು ಹಾಗೂ ಇತರ ಮಾಹಿತಿ ದೃಢೀಕರಿಸಲಾಗುತ್ತಿದೆ ಎಂದು ಆತ್ಮಕೂರು ಎಡಿಜಿ ಶ್ರುತಿ ಯೆರ್ರಗುಂಟ ಹೇಳಿದ್ದಾರೆ.

ಇದಾದ ನಂತರ ಭಕ್ತರು ಹಾಗೂ ಸ್ಥಳೀಯರ ನಡುವೆ ಇನ್ನಷ್ಟುಘರ್ಷಣೆ ನಡೆದಿದೆ. ಮಲ್ಲಿಕಾರ್ಜುನ ದೇಗುಲ ಸಮೀಪದ ಪರಳ ಗಂಗಾ (Parala Ganga River) ನಂದಿ ವೃತ್ತದಲ್ಲಿನ ನೂರಾರು ತಾತ್ಕಾಲಿಕ ಅಂಗಡಿಗಳು, 200ಕ್ಕೂ ಹೆಚ್ಚು ದ್ವಿಚಕ್ರ ವಾಹನ, ಕಾರು ಹಾಗೂ ಇತರ ವಾಹನಗಳನ್ನು ನಜ್ಜುಗುಜ್ಜು ಮಾಡಲಾಗಿದೆ. ಕರ್ನಾಟಕದ ವಾಹನಗಳೂ ಇದರಲ್ಲಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ, ಕರ್ನಾಟಕದ ಭಕ್ತರು ಪಾನಮತ್ತರಾಗಿದ್ದರು ಎಂದು ದೇವಾಲಯದ ಮೂಲಗಳನ್ನು ಉಲ್ಲೇಖಿಸಿ ಕೆಲ ವರದಿಗಳು ಹೇಳಿವೆ.

ತಮಿಳುನಾಡು ಸರಕಾರದ ಜೊತೆ ಘರ್ಷಣೆ, ನೀಟ್ ಮಸೂದೆ ಹಿಂದಿರುಗಿಸಿದ ರಾಜ್ಯಪಾಲ

ಲಾಠಿ ಹಾಗೂ ಮಾರಕಾಸ್ತ್ರ ಹಿಡಿದು ಹೊಡೆದಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social media)ವೈರಲ್ ಆಗಿವೆ (Viral video). ಗಲಾಟೆಯಲ್ಲಿ ಕರ್ನಾಟಕ ಮೂಲ‌ದ ಅಂದಾಜು ಇನ್ನೂರು ವಾಹನಗಳ ಗಾಜುಗಳನ್ನು ಪುಡಿ ಮಾಡಲಾಗಿದೆ ಎನ್ನಲಾಗಿದೆ. ಕರ್ನಾಟಕ ಮೂಲದ ಕೆಲವೂ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ (shrishaila temple fight).  ಬೆಳಗಾವಿ ಮೂಲದ ಭಕ್ತರಿಗೆ ಗಾಯಗಳಾಗಿವೆ ಎನ್ನುವ ಬಗ್ಗೆ ಮಾಹಿತ್ತಿ ಲಭ್ಯವಾಗಿದೆ.  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

ಶ್ರೀಶೈಲಂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲವಣ್ಣ (Lavanna) ಅವರು ಈ ಬಗ್ಗೆ ಶ್ರೀಶೈಲ ಪೀಠದ ಕರ್ನಾಟಕ ಮೂಲದ ಜಗದ್ಗುರು ಚೆನ್ನ ಸಿದ್ದರಾಮ (Chen Siddaramaiah) ಪಂಡಿತಾರಾಧ್ಯ ಶಿವಾಚಾರ್ಯರೊಂದಿಗೆ ಮಾತನಾಡಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!