'ಡಬಲ್ ಎಂಜಿನ್ ಸರ್ಕಾರ ಮೇಕೆದಾಟು ಶುರು ಮಾಡಲಿ'

By Suvarna NewsFirst Published Jul 13, 2021, 9:10 PM IST
Highlights

* ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ
* ಮೇಕೆದಾಟು ಯೋಜನೆಹೆ ಸಿಎಂ ಶುಭಗಳಿಗೆ ಫಿಕ್ಸ್ ಮಾಡಲಿ
*  ಗುದ್ದಲಿ ಪೂಜೆ ಆರಂಭಿಸಲಿ.. ಕೆಲವೊಮ್ಮೆ ಟೆಂಡರ್ ಕರೆಯದೇ ಗುದ್ದಲಿ ಪೂಜೆ ಮಾಡಿದ ಉದಾರಣೆಗಳಿವೆ
* ಡಬಲ್ ಎಂಜಿನ್ ಸರ್ಕಾರ ಮೊದಲು ಕೆಲಸ ಮಾಡಲಿ

ಬೆಂಗಳೂರು(ಜು. 13 ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ರಾಜ್ಯಕ್ಕೆ ಬಂದಿದ್ದಾರೆ. ಸಿಎಂ ಜೊತೆ ಮಾತನಾಡಿದ್ದಾರೆ. ಮೇಕೆದಾಟು ಯೋಜನೆಗೆ ಸಿಎಂ ಶುಭಗಳಿಗೆ ಫಿಕ್ಸ್ ಮಾಡಲಿ. ಟೆಂಡರ್ ಕೊಟ್ಟು ಕೆಲಸ ಆರಂಭ ಮಾಡಲಿ  ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಗುದ್ದಲಿ ಪೂಜೆ ಆರಂಭಿಸಲಿ.. ಕೆಲವೊಮ್ಮೆ ಟೆಂಡರ್ ಕರೆಯದೇ ಗುದ್ದಲಿ ಪೂಜೆ ಮಾಡಿದ ಉದಾರಣೆಗಳಿವೆ... ಏನು ಅಡೆ ತಡೆ ಇದ್ರು ಅದನ್ನು ಬಗೆಹರಿಸಲಿ. ಆದಷ್ಟು ಬೇಗ ಭೂಮಿ‌ ಪೂಜೆ ಮಾಡಲಿ ಎಂದು ಆಗ್ರಹಿಸಿದರು.

ಹದಿನೇಳು ಜನರ ಬಗ್ಗೆ ಡಿಕೆಶಿ ಹೇಳಿದ್ದೇನು?

ಉತ್ತರ ಪ್ರದೇಶ ಮಾದರಿ ಜನಸಂಖ್ಯೆ ‌ನಿಯಂತ್ರಣ ಕಾಯ್ದೆಯನ್ನು  ರಾಜ್ಯದಲ್ಲಿ ಜಾರಿ ಮಾಡ್ತೆವಿ ಅಂತ ಸಿಟಿ ರವಿ ಹೇಳಿಕೆಗೆ ಡಿಕೆಶಿ ವ್ಯಂಗ್ಯವಾಡಿದರು. ಸಿ.ಟಿ ರವಿ ರಾಷ್ಟ್ರೀಯ ನಾಯಕರು. ತುಂಬಾ ದೊಡ್ಡವರು.. ದೇಶದ ಬಗ್ಗೆ ದೊಡ್ಡ ದೊಡ್ಡ ಮಾತಾಡ್ತಾರೆ. ನಾನು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ. ಅವರು ಏನ್ ಹೇಳಿದ್ರು ನಡೆಯುತ್ತೆ. ಜನಸಂಖ್ಯೆ ನಿಯಂತ್ರಣ ಕಾಯ್ದೆ ಮೊದಲು ಅಸೆಂಬ್ಲಿಯಲ್ಲಿ ಮಂಡನೆ ಮಾಡಲಿ. ಅಲ್ಲಿ ಅದಕ್ಕೆ ಉತ್ತರ ಕೊಡ್ತೇವೆ ಎಂದರು.

ಡಬಲ್ ಇಂಜಿನ್ ಸರ್ಕಾರ ಅಂತಾರೆ. ಮೇಕೆದಾಟು ಯೋಜನೆ ಜಾರಿ ಮಾಡುವಲ್ಲಿ ಡಬಲ್ ಇಂಜಿನ್ ತೋರಿಸಲಿ. ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿದ್ದಾರೆ. ಬೇರೆ ರಾಜ್ಯಗಳಿಗೆ ಮಾಡಿದ ಕೆಲಸ ಕೇಂದ್ರ ಮಾಡಲಿ. ಬಿಜೆಪಿ ಸಂಸದರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದರು.

click me!