ಸೈಕಲ್ ಓಡಿಸೋ ವಯಸ್ಸಲ್ಲಿ ವಿಮಾನ ಹಾರಿಸಿದ ಬಾಲೆ ಈಗ ದೇಶದ ಅತ್ಯಂತ ಕಿರಿಯ ಪೈಲಟ್

Published : Dec 05, 2024, 11:41 AM ISTUpdated : Dec 05, 2024, 12:00 PM IST
ಸೈಕಲ್ ಓಡಿಸೋ ವಯಸ್ಸಲ್ಲಿ ವಿಮಾನ ಹಾರಿಸಿದ ಬಾಲೆ ಈಗ ದೇಶದ ಅತ್ಯಂತ ಕಿರಿಯ ಪೈಲಟ್

ಸಾರಾಂಶ

ವಿಜಯಪುರದ 18 ವರ್ಷದ ಸಮೈರಾ ಹುಲ್ಲೂರು ಕಮರ್ಷಿಯಲ್ ವಿಮಾನ ಹಾರಾಟದ ಪರವಾನಗಿ ಪಡೆದ ದೇಶದ ಅತ್ಯಂತ ಕಿರಿಯ ಪೈಲಟ್ ಎನಿಸಿಕೊಂಡಿದ್ದಾರೆ. ಕೇವಲ ಒಂದೂವರೆ ವರ್ಷದ ತರಬೇತಿಯಲ್ಲಿ ಆರು ಪರೀಕ್ಷೆಗಳನ್ನು ಪಾಸು ಮಾಡಿ 200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.

ವಿಜಯಪುರ: 18 ವರ್ಷ ಅನೇಕರಿಗೆ ವಿಮಾನ ಹರಿಸುವುದಿರಲಿ ಸೈಕಲ್ ದ್ವಿಚಕ್ರವಾಹನವನ್ನೂ ಓಡಿಸುವುದಕ್ಕೂ ಬರುವುದಿಲ್ಲ, ಆದರೆ ರಾಜ್ಯದ ವಿಜಯಪುರ ಜಿಲ್ಲೆಯ 18 ವರ್ಷದ ಹುಡುಗಿಯೊಬ್ಬರು ಕಮರ್ಷಿಯಲ್ ವಿಮಾನ ಹಾರಾಟದ ಲೈಸೆನ್ಸ್‌ ಪಡೆದಿದ್ದು, ದೇಶದ ಅತ್ಯಂತ ಕಿರಿಯ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ವಿಜಯಪುರ ಜಿಲ್ಲೆಯ ಸಮೈರಾ ಹುಲ್ಲೂರು ಎಂಬುವವರೇ ಈ ಸಾಧನೆ ಮಾಡಿದ ಸಾಧಕಿ. ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವೂ ನಡೆಸುವ ಒಟ್ಟು ಆರು ಪರೀಕ್ಷೆಗಳನ್ನು ಸಮೈರಾ ಹುಲ್ಲೂರು ಪಾಸು ಮಾಡಿದ್ದು, ಜೊತೆಗೆ 200 ಗಂಟೆಗಳ ವಿಮಾನ ಹಾರಾಟದ ಅನುಭವವನ್ನು ಕೂಡ ಹೊಂದಿದ್ದಾರೆ. ಕೇವಲ ಒಂದೂವರೆ ವರ್ಷದ ತರಬೇತಿಯಲ್ಲಿ ಇವರು ಎಲ್ಲಾ ಪರೀಕ್ಷೆಗಳನ್ನು ಪಾಸು ಮಾಡಿದ್ದು, ದೇಶದ ಅತ್ಯಂತ ಕಿರಿಯ ಕಮರ್ಷಿಯಲ್ ಪೈಲಟ್ ಎನಿಸಿದ್ದಾರೆ. 

ದೆಹಲಿಯ ವಿಜಯ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ ಸಮೈರಾ ನಂತರ ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಕಾರ್ವರ್ ಏವಿಯೇಷನ್ ​​​​ಅಕಾಡೆಮಿಯಲ್ಲಿ ಸುಧಾರಿತ ಹಾರಾಟದ ತರಬೇತಿಯನ್ನು ಕೂಡ ಪೂರೈಸಿದರು. ವಿಜಯಪುರದ ಸೈನಿಕ ಶಾಲೆಯಲ್ಲಿ ಸಮೀರಾ ಅವರು ಆರಂಭಿಕ ಶಿಕ್ಷಣ ಪಡೆದಿದ್ದು, ನಂತರ ಕೇಂದ್ರೀಯ ವಿದ್ಯಾಲಯದಲ್ಲಿ ವಿಜ್ಞಾನ ಅಧ್ಯಯನ ನಡೆಸಿದ್ದಾರೆ. ಈ ಶಿಕ್ಷಣವೇ ಅವರ  ಮಹತ್ವಾಕಾಂಕ್ಷೆಗಳಿಗೆ ಭದ್ರ ಬುನಾದಿ ಹಾಕಿದೆ. 

ವಿಜಯಪುರ ಜಿಲ್ಲಾಡಳಿತವೂ ನಡೆಸುವ ವಿಜಯಪುರ ಉತ್ಸವಕ್ಕೆ ಆಗಮಿಸಿದ ಆಕೆ ಅಲ್ಲಿ ಹೆಲಿಕಾಪ್ಟರ್‌ ರೈಡ್ ನೋಡಿದ್ದರು, ಇದರಿಂದಲೇ ಮುಂದೆ ತಾನೂ ಹೀಗೆ ವಿಮಾನ, ಹೆಲಿಕಾಪ್ಟರ್ ಹಾರಾಟ ನಡೆಸಬೇಕು ಎಂಬ ಕನಸು ಸಮೈರಾಳಲ್ಲಿ ಚಿಗುರೊಡೆಯಿತು. ಈಕೆಯ ಈ ಕನಸಿಗೆ ಇಂಟಿರಿಯರ್ ಡಿಸೈನರ್‌ ಆಗಿ ಕೆಲಸ ಮಾಡುವ ತಂದೆ ಅಮೀರ್ ಹುಲ್ಲೂರು ಪ್ರೋತ್ಸಾಹ ನೀಡಿದ್ದು ಮುಂದೆ ಸಮೀರಾ ವಾಯುಯಾನ ಕ್ಷೇತ್ರದಲ್ಲಿ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. 

ಕೇವಲ 17 ವರ್ಷದವಳಿದ್ದಾಗಲೇ ಡಿಜಿಸಿಎ ನಡೆಸುವ 6 ಪರೀಕ್ಷೆಗಳಲ್ಲಿ 5 ಪರೀಕ್ಷೆಗಳನ್ನು ಸಮೈರಾ ಪಾಸು ಮಾಡಿದ್ದರು. ಆದರೆ ಕೊನೆಯ ಪರೀಕ್ಷೆ ರೆಡಿಯೋ ಟ್ರಾನ್ಸ್‌ಮಿಷನ್ ಟೆಕ್ನಾಲಾಜಿಯನ್ನು ಒಳಗೊಂಡಿದ್ದು, ಅದನ್ನು ಬರೆಯುವುದಕ್ಕೆ ಕನಿಷ್ಠ ವಯಸ್ಸು 18 ವರ್ಷ ಕಡ್ಡಾಯವಾಗಿತ್ತು. ಹೀಗಾಗಿ 18 ತುಂಬುತ್ತಿದ್ದಂತೆ ಸಮೈರಾ ಈ ಪರೀಕ್ಷೆಯನ್ನು ಕೂಡ ಪಾಸು ಮಾಡಿದ್ದು, ಈಗ ದೇಶದ ಅತ್ಯಂತ ಕಿರಿಯ ವಯಸ್ಸಿನ ಕಮರ್ಷಿಯಲ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಸಮೈರಾ ಅವರ ತರಬೇತಿಯು ರಾತ್ರಿ ವಿಮಾನ ಹಾರಾಟ, ಬಹು-ಎಂಜಿನ್‌ಗಳಿರುವ ವಿಮಾನಗಳ ಕಾರ್ಯಾಚರಣೆಯನ್ನು ಕೂಡ ಒಳಗೊಂಡಿತ್ತು, ಅವರ 200 ಗಂಟೆಗಳ ಹಾರಾಟದ ಅನುಭವದ ಬಹಳ ಮಹತ್ವದ್ದಾಗಿದ್ದು, ತನ್ನ ಈ ಸಾಧನೆಗೆ ಆಕೆ ತನ್ನ ತರಬೇತುದಾರರಾದ ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್‌ಗೆ ಧನ್ಯವಾದ ಹೇಳಿದ್ದು, ಜೊತೆಗೆ ಪೋಷಕರ ಅಚಲ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!