ಬೊಮ್ಮಾಯಿ ಎದುರು ಸಚಿವ ಸಂಸದರ ಕಿತ್ತಾಟ, ಟೀಂ ಇಂಡಿಯಾಗೆ ರಾಹುಲ್ ನಾಯಕ; ಜ.3ರ Top 10 News!

By Suvarna News  |  First Published Jan 3, 2022, 5:07 PM IST

CM ಬೊಮ್ಮಾಯಿ‌ ಎದುರೇ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ  ಡಿ.ಕೆ.‌ ಸುರೇಶ್ ಕಿತ್ತಾಡಿದ ಘಟನೆ ನಡೆದಿದೆ. ಇತ್ತ ಹೊಸ ವರ್ಷದ ಮೊದಲ ದಿನ ಕಾಶಿ ವಿಶ್ವನಾಥ ಧಾಮಕ್ಕೆ 5 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿದೆ. ಗಲ್ವಾಣ್ ಕಣಿವೆಯಲ್ಲಿ ಚೀನಾ ಪ್ರಾಬಲ್ಯಕ್ಕೆ ಕಿಡಿ ಕಾರಿದ ರಾಹುಲ್ ಗಾಂಧಿ, ಮಲೈಕಾ ಆದಾಯ ಸೇರಿದಂತೆ ಜನವರಿ 3 ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


Telangana BJP Chief ಬಂಡಿ ಸಂಜಯ್‌ ಅರೆಸ್ಟ್, ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ನಡ್ಡಾ!

Latest Videos

undefined

 ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಸಂಜಯ್ ಕುಮಾರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೋವಿಡ್‌ ನಿಯಮ ಉಲ್ಲಂಘಿಸಿದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭಾನುವಾರ ಬಂಧಿಸಲಾಗಿತ್ತು. ಸೋಮವಾರ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಿ. ಸಂಜಯ್ ಕುಮಾರ್ ಬಂಧನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

New Year: ಗಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜ, ಸರ್ಕಾರದ ವಿರುದ್ಧ ರಾಹುಲ್ ಕಿಡಿ!

ಹೊಸ ವರ್ಷದ ಸಂದರ್ಭದಲ್ಲಿ ಚೀನಾ ಜತೆಗಿನ ಬಾಂಧವ್ಯವನ್ನು ಸಾಮಾನ್ಯಗೊಳಿಸುವ ನಿರೀಕ್ಷೆಯಲ್ಲಿದ್ದ ಭಾರತ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ಚೀನಾ ಮತ್ತೊಮ್ಮೆ ತನ್ನ ಗಾಲ್ವಾನ್ ಕಣಿವೆಯನ್ನು ತನ್ನದಾಗಿಸಿಕೊಂಡಿದೆ. 1 ಜನವರಿ 2022 ರಂದು, ಪ್ರಚೋದನಕಾರಿ ನಡೆ ಅನುಸರಿಸಿದ್ದು, ಚೀನಾ ತನ್ನ ರಾಷ್ಟ್ರಧ್ವಜವನ್ನು ಗಾಲ್ವಾನ್ ಕಣಿವೆಯಲ್ಲಿ ಹಾರಿಸಿತು. ಇದರ ನಂತರ, ಚೀನಾದ ಸಾರ್ವಜನಿಕ ಮಾಧ್ಯಮಗಳು, ಅದರ ಪ್ರಚಾರ ಯಂತ್ರ ಸೇರಿದಂತೆ, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪಬ್ಲಿಷ್ ಮಾಡಿದೆ.

5 Lakh Devotees Visits Kashi: ಕಾಶಿ ವಿಶ್ವನಾಥ ಧಾಮಕ್ಕೆ ದಾಖಲೆಯ 5 ಲಕ್ಷ ಜನರ ಭೇಟಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ ಕಾಶಿ ವಿಶ್ವನಾಥ ಧಾಮಕ್ಕೆ ಹೊಸವರ್ಷದ ಮೊದಲನೇ ದಿನ 5 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿಕೊಟ್ಟಿದ್ದು ಹೊಸ ದಾಖಲೆಯಾಗಿದೆ. ಹಿಂದೂಗಳಿಗೆ ಪ್ರಮುಖ ಹಬ್ಬವಾದ ಶಿವರಾತ್ರಿಯಂದು ಕೂಡಾ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೆಂದೂ 2.5 ಲಕ್ಷಕ್ಕೆ ಮೀರಿಲ್ಲ. ಹಬ್ಬವಲ್ಲದ ದಿನದಲ್ಲೂ ಭಾರೀ ಪ್ರಮಾಣದ ಜನಸ್ತೋಮ ದೇವಾಲಯಕ್ಕೆ ಆಗಮಿಸಿದ್ದು ಇದೇ ಮೊದಲ ಬಾರಿಯಾಗಿದೆ. ಹೀಗಾಗಿ ಭಾರೀ ಪ್ರಮಾಣದ ಜನಸಮೂಹವನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

Ind vs SA: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಕೆ.ಎಲ್. ರಾಹುಲ್ ಟೀಂ ಇಂಡಿಯಾ ನಾಯಕ..!

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್‌ (KL Rahul) ತಂಡವನ್ನು ಮುನ್ನಡೆಸಲಿದ್ದಾರೆ. 2021-22ನೇ ಸಾಲಿನ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯಲ್ಲಿ (Freedom Trophy) ಈಗಾಗಲೇ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

Celebrity Income : ಐಟಂ ಸಾಂಗ್‌ನಿಂದ ಹೆಸರು ಮಾಡಿದ ಮಲೈಕಾ ನಿವ್ವಳ ಆದಾಯ ಕೇಳಿದ್ರೆ ದಂಗಾಗ್ತೀರಿ!

ಬಾಲಿವುಡ್ (Bollywood) ನಟಿ ಮಲೈಕಾ ಅರೋರಾ (Malaika Aurora )ತನ್ನ ಫಿಟ್‌ನೆಸ್ (Fitness) ಮತ್ತು ಫ್ಯಾಶನ್ (Fashion) ಸೆನ್ಸ್ ನಿಂದ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದಿದ್ದಾರೆ. 

Political Fight: ಮುಖ್ಯಮಂತ್ರಿ ಎದುರೇ ಹೊಡೆದಾಟಕ್ಕೆ ಮುಂದಾದ ಸಂಸದ-ಮಿನಿಸ್ಟರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಎದುರೇ ಸಚಿವ  ಡಾ. ಸಿ.ಎನ್. ಅಶ್ವತ್ಥನಾರಾಯಣ(Dr CN Ashwath Narayan) ಹಾಗೂ ಸಂಸದ‌ ಡಿ.ಕೆ.‌ ಸುರೇಶ್ (DK Suresh) ಹೊಡೆದಾಟಕ್ಕೆ (Fight) ಮುಂದಾದ‌ ಪ್ರಸಂಗ ನಡೆದಿದೆ.

UPI payment fraud ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ವಹಿವಾಟುಗಳು ವೇಗವಾಗಿ ಬೆಳೆದಿವೆ ಮತ್ತು ಈಗ ನಮ್ಮ ಸೆಲ್‌ಫೋನ್‌ಗಳಲ್ಲಿ ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಅನ್ನು ಸುಲಭವಾಗಿ ಬಳಸಿಕೊಳ್ಳುತ್ತಿದ್ದೇವೆ. ಇದರಿಂದ ಡಿಜಿಟಲ್ ವ್ಯವಹಾರ ಸುಲಭವಾಗಿ ಮಾಡಲು ಸಾಧ್ಯವಾಗುತ್ತಿದೆ. 

Business Ideas : ಹಳ್ಳಿಯಲ್ಲಿರುವ ಮಹಿಳೆಯರಿಗೆ ಕೈ ತುಂಬಾ ಹಣ ಬರೋ ಬ್ಯುಸಿನೆಸ್ ಟಿಪ್ಸ್

ಮಹಿಳೆ (Woman)ಯರು ಆರ್ಥಿಕವಾಗಿ ಸದೃಢವಾಗಿರುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿದ್ದಾರೆ ನಿಜ,ಆದ್ರೂ ಪುರುಷ (Male)ರಿಗೆ ಹೋಲಿಸಿದ್ರೆ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. 

Upcoming Tata Car ಟಾಟಾ ಟಿಯಾಗೋ CNG ಕಾರಿನ ಡೀಲರ್‌ಶಿಪ್ ಬುಕಿಂಗ್ ಆರಂಭ, ಶೀಘ್ರದಲ್ಲೇ ಬಿಡುಗಡೆ!

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ(Electric Cars) ಜೊತೆಗೆ CNG ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಮಾರುತಿ ಸುಜುಕಿ ಹಾಗೂ ಹ್ಯುಂಡೈ CNG ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಈ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಮೋಟಾರ್ಸ್(Tata Motors) ಟಿಯಾಗೋ CNG ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಡೀಲರ್‌ಶಿಪ್ ಬುಕಿಂಗ್ ಆರಂಭಗೊಂಡಿದೆ. 

click me!