* ಮನ್‌ಸುಖ್ ಮಾಂಡವೀಯ ಭೇಟಿಯಾದ ಸಿಎಂ ಬೊಮ್ಮಾಯಿ
* ಮನ್‌ಸುಖ್ ಮಾಂಡವೀಯ ಕೇಂದ್ರ ಆರೋಗ್ಯ ಸಚಿವ
* ಹೆಚ್ವಿನ ಕೊರೋನಾ ಲಸಿಕೆ ಮತ್ತು ಸದ್ಯದ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಚರ್ಚೆ
ಬೆಂಗಳೂರು(ಆ.26): ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡನೇ ದಿನದ ದೆಹಲಿ ಪ್ರವಾಸದಲ್ಲಿದ್ದಾರೆ. ಹೀಗಿರುವಾಗ ಸಿಎ ಬೊಮ್ಮಾಯಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯರನ್ನು ಭೇಟಿಯಾದ ಸಿಎಂ ಬೊಮ್ಮಾಯಿ, ಹೆಚ್ವಿನ ಕೊರೋನಾ ಲಸಿಕೆ ಮತ್ತು ಸದ್ಯದ ಕೊರೋನಾ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿಎಂಗೆ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಸುಧಾಕರ್, ಸಂಸದ ಶಿವಕುಮಾರ್ ಉದಾಸಿ ಸಾಥ್ ನೀಡಿದ್ದಾರೆ.
ಲಸಿಕೆ ಪೂರೈಕೆ ಕಡಿಮೆ ಇದ್ದರೂ, ಕೊರೋನಾ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂಬುವುದು ಉಲ್ಲೇಖನೀಯ.
ಬೆಂಗಳೂರಿನಲ್ಲಿ 7 ತಿಂಗಳಲ್ಲಿ 1 ಕೋಟಿ ಜನರಿಗೆ ಕೋವಿಡ್ ಲಸಿಕೆ
ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಕೇವಲ 7 ತಿಂಗಳುಗಳಲ್ಲಿ 1 ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಖಾಸಗಿ ಮತ್ತು ಸರ್ಕಾರಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಹೋರಾಟಗಾರರು, 45 ವರ್ಷ ಮತ್ತು 18-44 ವಯೋಮಾನದವರು ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ಮೊದಲ ಮತ್ತು ಎರಡನೆಯ ಡೋಸ್ ಪಡೆದವರು ಇದರಲ್ಲಿ ಸೇರಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,00,34,598 ಮಂದಿ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರು 24,43,914 ಮಂದಿ ಹಾಗೂ ಒಂದು ಡೋಸ್ ಮಾತ್ರ ಪಡೆದವರ ಸಂಖ್ಯೆ 75,90,684.