ಕಂಗನಾ ಮನೆ ಧ್ವಂಸಗೈದ ಬಿಎಂಸಿ ನಡೆ ಬಗ್ಗೆ ಸಾಕಷ್ಟು ಅನುಮಾನ!

Published : Sep 29, 2020, 01:17 PM ISTUpdated : Sep 29, 2020, 01:19 PM IST
ಕಂಗನಾ ಮನೆ ಧ್ವಂಸಗೈದ ಬಿಎಂಸಿ ನಡೆ ಬಗ್ಗೆ ಸಾಕಷ್ಟು ಅನುಮಾನ!

ಸಾರಾಂಶ

ಕಂಗನಾ ಮನೆ ಧ್ವಂಸ: ಬಿಎಸಿ ನಡೆ ಸಾಕಷ್ಟು ಅನುಮಾನಸ್ಪದ: ಕೋರ್ಟ್‌|  ಬೃಹನ್ಮುಂಬೈ ಪಾಲಿಕೆಯ ನಡೆಯನ್ನು ಬಾಂಬೆ ಹೈಕೋರ್ಟ್‌ ಮತ್ತೊಮ್ಮೆ ಬಲವಾಗಿ ಶಂಕಿಸಿದೆ

ಮುಂಬೈ(ಸೆ.29): ನಟಿ ಕಂಗನಾ ರಾಣಾವತ್‌ಗೆ ಸೇರಿದ ಮನೆಯ ಅಕ್ರಮ ಭಾಗ ಧ್ವಂಸ ಪ್ರಕರಣದಲ್ಲಿ ಬೃಹನ್ಮುಂಬೈ ಪಾಲಿಕೆಯ ನಡೆಯನ್ನು ಬಾಂಬೆ ಹೈಕೋರ್ಟ್‌ ಮತ್ತೊಮ್ಮೆ ಬಲವಾಗಿ ಶಂಕಿಸಿದೆ.

ಮನೆ ಧ್ವಂಸ ಪ್ರಶ್ನಿಸಿ ಮತ್ತು ಅದಕ್ಕೆ 2 ಕೋಟಿ ಪರಿಹಾರ ಕೋರಿ ಕಂಗನಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರವೂ ಮುಂದುವರೆಸಿದ ನ್ಯಾಯಾಲಯ, ಪಾಲಿಕೆಯ ಈ ನಡವಳಿಕೆ ಅನುಮಾನಸ್ಪದವಾಗಿದೆ ಎಂದು ಹೇಳಿದೆ.

ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

ಮನೆ ಧ್ವಂಸ ವೇಳೆ ಬಿಎಂಸಿ ಪಾಲಿಸುವ ಕೆಲ ನಿಯಮಗಳನ್ನು ಈ ಪ್ರಕರಣದಲ್ಲಿ ಮುರಿಯಲಾಗಿದೆ ಎಂದು ಕೋರ್ಟ್‌ ಹೇಳಿದೆ. ಅಕ್ರಮವಾಗಿ ನಿರ್ಮಾಣ ಮಾಡಿದ ಕಟ್ಟಡಗಳ ಧ್ವಂಸಕ್ಕೂ ಮುನ್ನ ಫೋಟೋ ಸಹಿತ ನೀಡಲಾಗುವ ಕೆಲಸ ತಡೆ ನೋಟಿಸು, ಧ್ವಂಸಕ್ಕೂ ಮುನ್ನ ಕಾಲವಕಾಶ ನೀಡುವುದು ಮುಂತಾದ ಪದ್ಧತಿಯನ್ನು ಈ ಪ್ರಕರಣದಲ್ಲಿ ಪಾಲಿಸಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ ಎಂದು ಕೋರ್ಟ್‌ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?