ಸುರೇಶ್ ಅಂಗಡಿ ಕೊನೆ 5 ದಿನ, ಏಮ್ಸ್ ಸಿಬ್ಬಂದಿಗೆ ಕೇಂದ್ರ ಮಂತ್ರಿ ಎಂದೂ ತಿಳಿದಿರ್ಲಿಲ್ಲ!

By Suvarna News  |  First Published Sep 29, 2020, 12:16 PM IST

 ಪರಿಸ್ಥಿತಿ ಕೈ ಮೀರಿ ಹೋಗಿತ್ತು.ವೆಂಟಿಲೇಟರ್ ಗೆ ಹಾಕಿದ ನಂತರ ಸುರೇಶ ಅಂಗಡಿ ಉಳಿಯುವ ಸಾಧ್ಯತೆಗಳು ಕಡಿಮೆ ಕಡಿಮೆ ಆಗುತ್ತಾ ಹೋದವು.


-ಪ್ರಶಾಂತ್ ನಾತು, ಇಂಡಿಯಾ ಗೇಟ್

 ನವದೆಹಲಿ(ಸೆ.29): ಕೊರೋನಾ ಶುರು ಆದಾಗ ಕೇಂದ್ರ ಮಂತ್ರಿ ಮಂಡಲದಲ್ಲಿ ನಿತಿನ್ ಗಡ್ಕರಿ ಮತ್ತು ಸುರೇಶ್ ಅಂಗಡಿ ಇಬ್ಬರೇ ತಮ್ಮ ತಮ್ಮ ಊರುಗಳಾದ ನಾಗಪುರ ಮತ್ತು ಬೆಳಗಾವಿ ಯಲ್ಲಿದ್ದರು.ಪ್ರಹ್ಲಾದ ಜೋಶಿ ಸದಾನಂದ ಗೌಡರು 3 ತಿಂಗಳು ಕರ್ನಾಟಕಕ್ಕೆ ಬರದೇ ದಿಲ್ಲಿಯಲ್ಲೇ ಲಾಕ್ ಡೌನ್ ಆಗಿದ್ದರು.

Tap to resize

Latest Videos

ಸರಿಯಾಗಿ 20 ದಿನಗಳ ಹಿಂದೆ ಸುರೇಶ ಅಂಗಡಿ ಬೆಳಗಾವಿಯ ವಕೀಲ ರೊಬ್ಬರನ್ನು ತಮ್ಮ ದಿಲ್ಲಿ ಮನೆಯಲ್ಲಿ ಉಳಿಸಿಕೊಂಡಿದ್ದರು.ಹೇಗೋ ಏನೋ ಆ ವಕೀಲರಿಗೆ ಸೋಂಕು ತಗುಲಿತು. ಆದರೆ ಲಕ್ಷಣಗಳಿದ್ದರು ಅವರ ಜೊತೆ ಪ್ರವಾಸ ಮಾಡಿ ಬೆಂಗಳೂರಿಗೆ ಬಂದ ಅಂಗಡಿ ಅಲ್ಲಿ ವಕೀಲರ ಕೋವಿಡ್ ಟೆಸ್ಟ್ ಮಾಡಿಸಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿ ಬೆಳಗಾವಿಗೆ ಬಂದಿದ್ದಾರೆ.ಆದರೆ ಇಷ್ಟೆಲ್ಲ ವಕೀಲರ ಜೊತೆ ಸಂಪರ್ಕಕ್ಕೆ ಬಂದ ಮೇಲೆ ತಾವು ಟೆಸ್ಟ್‌ ಮಾಡಿಸಿಲ್ಲ ಕ್ವಾರಂಟೈನ್ ಕೂಡ ಆಗಿಲ್ಲ.

'ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು, ಮಾಸ್ಕ್‌ ಧರಿಸಿದ್ದರೆ ಅಂಗಡಿ ಬದುಕಿರುತ್ತಿದ್ದರು'

ಆದರೆ ಬೆಳಗಾವಿಗೆ ಬಂದ ಮೇಲೆ ಒಂದು ರಾತ್ರಿ ಜ್ವರ ಕಾಣಿಸಿಕೊಂದಾಗ ಸ್ವತಃ ವೈದ್ಯನಾಗಿರುವ ಅಳಿಯನಿಗೆ ಹಲ್ಲು ನೋವು ಇದೆ ಅದಕ್ಕೆ ಜ್ವರ ಇದೆ ಎಂದಾಗ ಅದಕ್ಕೆ ಮಾತ್ರೆ ತೆಗೆದು ಕೊಂಡಿದ್ದಾರೆ.ಆಗ ಹಿರಿಯ ಮಗಳು ಕೋವಿಡ್ ಟೆಸ್ಟ್ ಮಾಡಿಸೋಣ ಇಲ್ಲೇ ಎಂದಾಗ ಬೇಡ ದಿಲ್ಲಿಗೆ ಹೇಗೂ ಹೋಗುತ್ತೇನೆ ಅಲ್ಲಿ ಟೆಸ್ಟ್ ಮಾಡಿಸೋಣ ಎಂದು ದಿಲ್ಲಿಗೆ ಸಂಸತ್ ಅಧಿವೇಶನಕ್ಕೆ ಹೋಗಿದ್ದಾರೆ.

ಅಲ್ಲಿ ಅಧಿವೇಶನಕ್ಕಿಂತ ಮೊದಲು ಕಡ್ಡಾಯ ಟೆಸ್ಟ್ ಮಾಡಿಸಿದಾಗ ಕೋವಿಡ್ ಸೋಂಕು ತಗುಲಿದ್ದು ಖಾತ್ರಿಯಾಗಿದೆ.ಕೂಡಲೇ ಮನೆಯಲ್ಲಿ ಬೇಡ ಸ್ವಲ್ಪ ಕೆಮ್ಮು ಕೂಡ ಇದೆ ಎಂದು ಅಧಿಕಾರಿಗಳ ಮಾತು ಕೇಳಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ದ್ದಾರೆ.

ಏಮ್ಸ್ ಅಸ್ಪತ್ರೆಯೊ ರೋಗಿಗಳ ಸಮುದ್ರ.ಅಲ್ಲಿ ಬರುವವರು ಬಹುತೇಕ ವಿಐಪಿ ಗಳೇ.ಅಮಿತ್ ಶಾ ಕೂಡ ಆಗ ಕೋವಿಡ್ ವಾರ್ಡನಲ್ಲೇ ಇದ್ದರು.ಮೊದಲೆರಡು ದಿನ ನಾರ್ಮಲ್ ಆಗಿದ್ದ ಸುರೇಶ್ ಅಂಗಡಿ ಮೊಬೈಲ್ ನಲ್ಲಿ ಕುಟುಂಬಸ್ಥರು ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.ಆದರೆ ಏಮ್ಸ್ ನಲ್ಲಿ ಒಮ್ಮೆಯೂ ಎದೆ ಯ ಏಕ್ಸ್ರ್ ರೇ ಕೂಡ ತೆಗೆಯದೆ ವೈದ್ಯರು ಯಾವುದೋ ಮಾತ್ರೆ ಕೊಟ್ಟಿದ್ದಾರೆ.ಇವರು ತೆಗೆದು ಕೊಂಡಿದ್ದಾರೆ.

ಸುರೇಶ್ ಅಂಗಡಿಯವರಿಗೆ ಅಲ್ಲಿ ಕೊನೆಗೂ ಕೂಡಿ ಬರಲಿಲ್ಲ ಅದೃಷ್ಟ..!

ಮೂರನೇ ದಿನ ಸಂಜೆ ಏಕಾಏಕಿ ಅಂಗಡಿ ಸಾಹೇಬರ ಒಕ್ಸಿಜನ್ ಲೆವೆಲ್ 70 ಕ್ಕೆ ಇಳಿದಿದೆ. ಸಾಮಾನ್ಯ ಆರೋಗ್ಯವಂತ ಮನುಷ್ಯನಿಗೆ ಅದು ಕನಿಷ್ಠ 90 ಕ್ಕಿಂತ ಜಾಸ್ತಿ ಇರಬೇಕು.ಕೂಡಲೇ ಅಲ್ಲಿನ ವೈದ್ಯರು ಅಂಗಡಿ ಪತ್ನಿಗೆ ಫೋನಾಯಿಸಿ ಒಕ್ಸಿಜನ್ ಹಾಕುವ ಬಗ್ಗೆ ಹೇಳಿದಾಗ ವೈದ್ಯ ಅಳಿಯ ಏಮ್ಸ್ ಗೆ ಹೋಗಿ ಎಲ್ಲ ಪರೀಕ್ಷೆ ಮಾಡಿಸಿ ವೈದ್ಯರ ಜೊತೆ ಮಾತನಾಡಿದ ನಂತರ ಅಲ್ಲಿನ ಸಿಬ್ಬಂದಿಗೆ ಇವರು ಕೇಂದ್ರ ಮಂತ್ರಿ ಎಂದು ಗೊತ್ತಾಗಿದೆ.ಕುಟುಂಬದವರು ಹೇಳುವ ಪ್ರಕಾರ ಸುರೇಶ ಅಂಗಡಿ ಮಂತ್ರಿ ಆಗಿದ್ದರು ವಿಐಪಿ ನಿಗಾ ವ್ಯವಸ್ಥೆ ಏನು ಇರಲಿಲ್ಲ.

5 ನೇ ದಿನ ಬೆಳಿಗ್ಗೆ ಸುರೇಶ ಅಂಗಡಿ ಆರೋಗ್ಯ ಇನ್ನಷ್ಟು ಹಡೆಗೆಟ್ಟು ವೆಂಟಿಲೇಟರ್ ಹಾಕಲೇಬೇಕಾದ ಅನಿವಾರ್ಯತೆ ಸ್ರಷ್ಟಿಯಾಗಿದೆ.ಆಗ ಆಸ್ಪತ್ರೆಯಿಂದ ಪ್ರಧಾನಿ ಕಾರ್ಯಾಲಯಕ್ಕೆ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.ಆದರೆ ಅಲ್ಲಿಯವರೆಗೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು.ವೆಂಟಿಲೇಟರ್ ಗೆ ಹಾಕಿದ ನಂತರ ಸುರೇಶ ಅಂಗಡಿ ಉಳಿಯುವ ಸಾಧ್ಯತೆಗಳು ಕಡಿಮೆ ಕಡಿಮೆ ಆಗುತ್ತಾ ಹೋದವು.

ಕರ್ನಾಟಕ ಒಬ್ಬ ಕೆಲಸಗಾರ ಸಜ್ಜನ  ಜನ ಪ್ರತಿನಿಧಿಯನ್ನು ಕಳೆದುಕೊಂಡಿತು ಅಷ್ಟೇ.

click me!