ರೈತರನ್ನು ಉಗ್ರರಿಗೆ ಹೋಲಿಸಿದ ಕಂಗನಾ?; ಇಲ್ಲ ಎಂದ ಚಿತ್ರನಟಿ

Published : Sep 22, 2020, 10:44 AM ISTUpdated : Sep 22, 2020, 10:53 AM IST
ರೈತರನ್ನು ಉಗ್ರರಿಗೆ  ಹೋಲಿಸಿದ ಕಂಗನಾ?;  ಇಲ್ಲ ಎಂದ ಚಿತ್ರನಟಿ

ಸಾರಾಂಶ

 ಭಾನುವಾರ ರಾಜ್ಯಸಭೆಯಲ್ಲಿ ಅಂಗೀಕೃತವಾದ ಎರಡು ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ| ಪಂಜಾಬ್‌ ರೈತರನ್ನು ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ‘ಭಯೋತ್ಪಾದಕರು’ ಎಂದು ಕರೆದಿದ್ದಾರೆ , ಆರೋಪ| ಇಲ್ಲ ಎಂದ ಚಿತ್ರನಟಿ

ಜಲಂಧರ್(ಸೆ.22)‌: ಭಾನುವಾರ ರಾಜ್ಯಸಭೆಯಲ್ಲಿ ಅಂಗೀಕೃತವಾದ ಎರಡು ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಗೆ ಇಳಿದಿರುವ ಪಂಜಾಬ್‌ ರೈತರನ್ನು ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ‘ಭಯೋತ್ಪಾದಕರು’ ಎಂದು ಕರೆದಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಕಂಗನಾ ರಣಾವತ್ ಭೇಟಿ ಮಾಡಿದ ಸಂಚಾರಿ ವಿಜಯ್; 'ಎಷ್ಟು ಬೇಕಾದ್ರೂ ಫೋಟೋ ಹಿಡಿಯಿರಿ'!

ಪ್ರಧಾನಿಯವರು ರೈತರಿಗೆ ಮಸೂದೆ ಬಗ್ಗೆ ಭರವಸೆ ನೀಡಿದ್ದ ಟ್ವೀಟ್‌ವೊಂದನ್ನು ಉಲ್ಲೇಖಿಸಿರುವ ಕಂಗನಾ ‘ಪ್ರಧಾನಮಂತ್ರಿಗಳೇ ಮಲಗಿದ್ದವರನ್ನು ಎಬ್ಬಿಸಬಹುದು ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸುವುದು ಹೇಗೆ. ಸಿಎಎ ಯಾರ ಪೌರತ್ವವನ್ನು ಕಸಿಯದಿದ್ದರೂ ರಕ್ತಪಾತವನ್ನು ಬಯಸಿದ್ದ ಅದೇ ಭಯೋತ್ಪಾದಕರಿವರು’ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಅವರ ಟ್ವೀಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ ತಾವು ರೈತರನ್ನು ಭಯೋತ್ಪಾದಕರು ಎಂದು ಕರೆದಿಲ್ಲ. ಅದನ್ನು ಸಾಬೀತುಪಡಿಸಿದರೆ ಕ್ಷಮಾಪಣೆ ಕೇಳಿ, ಟ್ವೀಟರ್‌ ತ್ಯಜಿಸುವೆ ಎಂದು ಕಂಗನಾ ಸವಾಲು ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ ರಣ್‌ವೀರ್‌ ಸಿಂಗ್‌ ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ