ತೆಲಂಗಾಣ ಸರ್ಕಾರವು ಹೈದರಾಬಾದ್ ವಿವಿಯ ಬಳಿ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿದೆ. ಇದೇ ವೇಳೆ ವಿವಿ ಆವರಣದಲ್ಲಿ ನಾಯಿಗಳು ಜಿಂಕೆಯನ್ನು ಕೊಂದಿವೆ.
ಹೈದರಾಬಾದ್ (ಏ.5): ಸುಪ್ರೀಂ ಕೋರ್ಟ್ ಆದೇಶದ ನಡುವೆಯೂ ಮಾನಗೇಡಿಯ ರೀತಿ ವರ್ತನೆ ಮಾಡುತ್ತಿರುವ ತೆಲಂಗಾಣದ ಕಾಂಗ್ರೆಸ್ ಸರ್ಕಾರ, ಈಗಲೂ ಕೂಡ ಕೆಲವು ಜೆಸಿಬಿ ಬಳಸಿ ಹೈದರಬಾದ್ ವಿವಿಗೆ ತಾಗಿಕೊಂಡೇ ಇರುವ ಕಾಂಚ ಕಚ್ಚಿಬೌಲಿ ಅರಣ್ಯಪ್ರದೇಶದಲ್ಲಿ ಮರಗಳ ಮಾರಣಹೋಮ ನಡೆಸುತ್ತಿದೆ. ಈ ಅರಣ್ಯಪ್ರದಶದಲ್ಲಿದ್ದ ಜೀವವೈವಿಧ್ಯ್ಕೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿರುವ ಸೂಚನೆಗಳು ಸಿಕ್ಕಿರುವಂತೆ, ಶುಕ್ರವಾರ ಹೈದರಾಬಾದ್ ವಿವಿಯ ವಿದ್ಯಾರ್ಥಿ ವಸತಿ ನಿಲಯದ ದಕ್ಷಿಣ ಕ್ಯಾಂಪಸ್‌ನಲ್ಲಿ ಬೀದಿ ನಾಯಿಗಳು ಗಾಯಗೊಂಡ ಜಿಂಕೆಯ ಮೇಲೆ ದಾಳಿ ನಡೆಸಿ ಅದನ್ನು ಸಾಯಿಸಿರುವ ಘಟನೆ ನಡೆದಿದೆ.
ಕಾಂಚ ಗಚಿಬೌಲಿಯ 400 ಎಕರೆ ಭೂಮಿಯಲ್ಲಿ ಮರಗಳನ್ನು ಕಡಿಯುವ ಬಗ್ಗೆ ಭಾರಿ ಗದ್ದಲದ ನಡುವೆ ವಿದ್ಯಾರ್ಥಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಾಗ, ಶುಕ್ರವಾರ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆವರಣದಲ್ಲಿ ಬೀದಿ ನಾಯಿಗಳು ದಾಳಿ ಮಾಡಿ ಚುಕ್ಕೆ ಜಿಂಕೆಯೊಂದು ಸಾವನ್ನಪ್ಪಿದೆ.
ದಕ್ಷಿಣ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಬಳಿ ಈ ಘಟನೆ ನಡೆದಿದ್ದು, ನಾಯಿಗಳು ಜಿಂಕೆಯ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಯುಒಎಚ್‌ನ ಭದ್ರತಾ ಸಿಬ್ಬಂದಿ ಮತ್ತು ಕೆಲವು ವಿದ್ಯಾರ್ಥಿಗಳು ಪ್ರಾಣಿಯನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಜಿಂಕೆ ಸತ್ತಿದೆ ಎಂದು ಘೋಷಿಸಲಾಗಿದೆ. ಜಿಂಕೆಯ ಮೇಲೆ ನಾಯಿ ಕಚ್ಚಿದ ಗುರುತುಗಳಿವೆ ಎಂದು ಅಧಿಕಾರಿ ಹೇಳಿದರು. ವಿಶ್ವವಿದ್ಯಾನಿಲಯದ ಮೂಲದ ಪ್ರಕಾರ, ಪ್ರತಿ ವರ್ಷ ಬೇಸಿಗೆಯಲ್ಲಿ, ಜಿಂಕೆಗಳು ನೀರು ಮತ್ತು ಆಹಾರವನ್ನು ಹುಡುಕುತ್ತಾ ಕ್ಯಾಂಪಸ್‌ನಲ್ಲಿರುವ ಕಟ್ಟಡಗಳ ಬಳಿ ಹೋಗುತ್ತವೆ, ಅಲ್ಲಿ ಬೀದಿ ನಾಯಿಗಳು ಅವುಗಳ ಮೇಲೆ ದಾಳಿ ಮಾಡುತ್ತವೆ.
ಪ್ರತಿಭಟನೆ ನಿಲ್ಲಿಸಿದ ವಿದ್ಯಾರ್ಥಿಗಳು: ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಯಾವುದೇ ಚಟುವಟಿಕೆಗೆ ತಡೆ ನೀಡಿದ ನಂತರ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (UoHSU) ಗುರುವಾರ ವಿಶ್ವವಿದ್ಯಾಲಯದ ಭೂಮಿಯ ಗಡಿಯಲ್ಲಿರುವ 400 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸುವ ತೆಲಂಗಾಣ ಸರ್ಕಾರದ ಯೋಜನೆಗಳ ವಿರುದ್ಧ ಅನಿರ್ದಿಷ್ಟ ಪ್ರತಿಭಟನೆ ಮತ್ತು ತರಗತಿಗಳನ್ನು ಬಹಿಷ್ಕರಿಸುವುದಾಗಿ ನೀಡಿದ್ದ ಘೋಷಣೆಯನ್ನು ವಾಪಾಸ್ ತೆಗೆದುಕೊಂಡಿದೆ.
ಪರಿಸರ ಸಂರಕ್ಷಣೆಯ ಕಾಳಜಿಯನ್ನು ಉಲ್ಲೇಖಿಸಿ, ಕಾಂಚ ಗಚಿಬೌಲಿಯಲ್ಲಿ 400 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸುವ ರಾಜ್ಯ ಸರ್ಕಾರದ ಯೋಜನೆಯನ್ನು ವಿರೋಧಿಸಿ, ಯುಒಎಚ್‌ಎಸ್‌ಯು ಮತ್ತು ಅದರೊಂದಿಗೆ ಹೊಂದಿಕೊಂಡ ಇತರ ಒಕ್ಕೂಟಗಳು ಏಪ್ರಿಲ್ 1 ರಿಂದ ಅನಿರ್ದಿಷ್ಟ ಪ್ರತಿಭಟನೆಯನ್ನು ಪ್ರಾರಂಭಿಸಿದ್ದವು ಮತ್ತು ತರಗತಿಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದವು.
Viral Video: 400 ಎಕರೆ ಗುಳುಂ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ, ಪ್ರಾಣಿ-ಪಕ್ಷಿಗಳ ಆರ್ತನಾದ ಕೇಳಿ ಮರುಗಿದ ಜನ!
ಹೈದರಾಬಾದ್ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಭೂಮಿಯಲ್ಲಿ ದೊಡ್ಡ ಮರಗಳನ್ನು ತೆರವುಗೊಳಿಸುವ "ಬಲವಾದ ತುರ್ತು" ವನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ತೆಲಂಗಾಣ ಸರ್ಕಾರವನ್ನು ಕೇಳಿದೆ ಮತ್ತು ಮುಂದಿನ ಆದೇಶದವರೆಗೆ ಯಾವುದೇ ಭವಿಷ್ಯದ ಚಟುವಟಿಕೆಯನ್ನು ತಡೆಹಿಡಿದಿದೆ.
ತೆಲಂಗಾಣ: ಅರಣ್ಯನಾಶ ಬೆನ್ನಲ್ಲೇ ಮತ್ತೊಂದು ಕಡೆ 30 ಎಕರೆ ಉದ್ಯಾನವನಕ್ಕೆ ಬೆಂಕಿ, ಬೆಲೆಬಾಳುವ ಮರಗಳು ಭಸ್ಮ!