ಟಿಕೆಟ್ ವಿವಾದದಿಂದ ರಾಜೀನಾಮೆ ನೀಡಿದ ಮಹಿಳಾ ಬಸ್ ಡ್ರೈವರ್‌ಗೆ ಕಮಲ್ ಹಾಸನ್ ಕಾರು ಗಿಫ್ಟ್!

Published : Jun 26, 2023, 03:48 PM IST
ಟಿಕೆಟ್ ವಿವಾದದಿಂದ ರಾಜೀನಾಮೆ ನೀಡಿದ ಮಹಿಳಾ ಬಸ್ ಡ್ರೈವರ್‌ಗೆ ಕಮಲ್ ಹಾಸನ್ ಕಾರು ಗಿಫ್ಟ್!

ಸಾರಾಂಶ

ಡಿಎಂಕೆ ಸಂಸದೆ ಕನಿಮೋಳಿಗೆ ಟಿಕೆಟ್ ತೆಗೆದುಕೊಳ್ಳುವಂತೆ ತಾಕೀತು ಮಾಡಿದ ವಿವಾದದ ಬಳಿಕ ಮಹಿಳಾ ಬಸ್ ಡ್ರೈವರ್ ರಾಜೀನಾಮೆ ನೀಡಿದ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಮಹಿಳಾ ಬಸ್ ಡ್ರೈವರ್‌ಗೆ ನಟ ಕಮಲ್ ಹಸನ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.   

ಚೆನ್ನೈ(ಜೂ.26) ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ್ ಬಸ್ ಪ್ರಯಾಣವಾದರೆ, ತಮಿಳುನಾಡಿನಲ್ಲಿ ಬಸ್ ಟಿಕೆಟ್ ವಿವಾದ ಭಾರಿ ಸದ್ದು ಮಾಡುತ್ತಿದೆ. ಡಿಎಂಕೆ ಸಂಸದೆ ಕನಿಮೋಳಿಗೆ ಟಿಕೆಟ್ ತೆಗೆದುಕೊಳ್ಳುವಂತೆ ಸೂಚಿಸಿದ ಕಂಡಕ್ಟರ್ ಹಾಗೂ ಬಸ್ ಡ್ರೈವರ್ ಜೊತೆ ನಡೆದಿರುವ ವಿವಾದ ಹಲವು ರಾಜಕೀಯ ತಿರುವು ಪಡೆದುಕೊಂಡಿದೆ. ಈ ವಿವಾದದ ಬಳಿಕ ಮಹಿಳಾ ಬಸ್ ಡ್ರೈವರ್ ಶರ್ಮಿಳಾ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಮಹಿಳಾ ಬಸ್ ಡ್ರೈವರ್‌ ನಡೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ.ಇದರ ನಡುವೆ ರಾಜಕಾರಣ ಕಮಲ್ ಹಸನ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಮಹಿಳಾ ಬಸ್ ಡ್ರೈವರ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕಮಲ್ ಹಸನ್ ಹೇಳಿದ್ದಾರೆ. ಸಂಸದೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಂಡಕ್ಟರ್ ಹಾಗೂ ಡ್ರೈವರ್ ನಡುವಿನ ಕಿತ್ತಾಟ ಸರಿಯಲ್ಲ. ಮಹಿಳಾ ಬಸ್ ಡ್ರೈವರ್ ತಮ್ಮ ನಿರ್ಧಾರವನ್ನು ಹೇಳಿದ್ದಾರೆ.  ಈ ಘಚನೆಯಿಂದ ನೋವಾಗಿದೆ ಎಂದಿರುವ ಕಮಲ್ ಹಸನ್ ಕಾರೊಂದನ್ನು ಶರ್ಮಿಳಾಗೆ ಉಡುಗೊರೆಯಾಗಿ ನೀಡಿದ್ದಾರೆ. ಶರ್ಮಿಳಾ ಬಸ್ ಡ್ರೈವರ್ ಆಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಕಾರು ಉಡುಗೊರೆಯಾಗಿ ನೀಡಿದ್ದೇನೆ. ಇನ್ನು ಮುಂದೆ ಶರ್ಮಿಳಾ ಸ್ವಂತ ಉದ್ಯಮ ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಕಾರಿನ ಮೂಲಕ ತಮ್ಮ ಉದ್ಯಮ ಆರಂಭಿಸಲಿ ಎಂದು ಕಮಲ್ ಹಸನ್ ಹೇಳಿದ್ದಾರೆ. 

ಕನಿಮೋಳಿಗೆ ಬಸ್‌ ಟಿಕೆಟ್‌ ತೆಗೆದುಕೊಳ್ಳಲು ಕಂಡಕ್ಟರ್‌ ಒತ್ತಾಯ: ತಮಿಳುನಾಡಿನ ಮೊದಲ ಬಸ್‌ ಚಾಲಕಿ ರಾಜೀನಾಮೆ!

ಶರ್ಮಿಳಾ 2021ರಲ್ಲಿ ಕೊಯಂಬತ್ತೂರ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ನಾಯಕಿ ವನತಿ ಶ್ರೀನಿವಾಸ್ ವಿರುದ್ಧ ಸೋಲು ಅನುಭವಿಸಿದ್ದರು. ಡಿಎಂಕೆ ನಾಯಕಿಯಾಗಿರುವ ಶರ್ಮಿಳಾ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ. ಹೀಗಾಗಿ ಡಿಎಂಕೆ ರಾಜಕಾರಣಗಳಳನ್ನು ಬಸ್‌ನಲ್ಲಿ ಕರೆಸಿ ಪ್ರಚಾರ ಶರುಮಾಡಿದ್ದಾರೆ. ಶರ್ಮಿಳಾ ಈ ನಡೆ ಕಂಡಕ್ಟರ್ ಪಿತ್ತ ನೆತ್ತಿಗೇರಿಸಿದೆ. ಹೀಗಾಗಿ ಕನಿಮೋಳಿಗೆ ಟಿಕೆಟ್ ಹರಿದು ನೀಡಿದ್ದಾರೆ. ತಮ್ಮ ನಾಯಕಿಗೆ ಟಿಕೆಟ್ ನೀಡಿರುವುದನ್ನು ಆಕ್ಷೇಪಿಸಿ ವಾಗ್ವಾದವೇ ನಡೆದಿದೆ. ಈ ಘಟನೆ ಬಳಿಕ ಬಸ್ ಡ್ರೈವರ್ ಶರ್ಮಿಳಾ ರಾಜೀನಾಮೆ ನೀಡಿದ್ದರು.

ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಬಸ್‌ ಟಿಕೆಟ್‌ ತೆಗದುಕೊಳ್ಳುವಂತೆ ಸೂಚಿಸಿದ್ದಕ್ಕೆ ಕಂಡ್ಟರ್‌ ಜೊತೆ ಉಂಟಾದ ವಿವಾದದ ಬಳಿಕ ತಮಿಳುನಾಡಿನ ಮೊದಲ ಮಹಿಳಾ ಬಸ್‌ ಚಾಲಕಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬಸ್‌ನಲ್ಲಿ ಪ್ರಯಾಣಿಸುವ ಇಚ್ಛೆ ವ್ಯಕ್ತ ಪಡಿಸಿದ ಸಂಸದೆ ಕನಿಮೊಳಿ ಬಸ್‌ ಹತ್ತಿದ್ದರು. ಈ ವೇಳೆ ಟಿಕೆಟ್‌ ತೆಗೆದುಕೊಳ್ಳುವಂತೆ ಕಂಡಕ್ಟರ್‌ ಸೂಚಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶರ್ಮಿಳಾ ಹಾಗೂ ಕಂಡಕ್ಟರ್‌ ನಡುವೆ ವಾದ ನಡೆದಿದ್ದು, ‘ಸಂಸದೆಗೆ ಟಿಕೆಟ್‌ ತೆಗೆದುಕೊಳ್ಳುವಂತೆ ಮಾಡಿದ್ದು ಅವಮಾನ’ ಎಂದು ಕಿಡಿ​ಕಾರಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. 

Kamal Hassan ಮದುವೆಯಾದ ದಿನವೇ ಮದುವೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಕಮಲ್ ಹಾಸನ್; ಏನಿದು ವಿಚಾರ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್