ಹಿಂದೂ ಧರ್ಮ ಇರಲೇ ಇಲ್ಲ: ವಿವಾದ ಸೃಷ್ಟಿಸಿದ Kamal Haasan ಹೇಳಿಕೆ

By Kannadaprabha NewsFirst Published Oct 7, 2022, 11:52 AM IST
Highlights

ಹಿಂದೂ ಧರ್ಮ ಇರಲೇ ಇಲ್ಲ. ಅದು ಬ್ರಿಟಿಷರು ಸೃಷ್ಟಿಸಿರುವುದು ಅಷ್ಟೇ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ. ಇವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಹಿಂದು ಪದವನ್ನು ಸೃಷ್ಟಿಸಿಕೊಂಡಿದ್ದು ಅಷ್ಟೇ ಎಂದು ಖ್ಯಾತ ನಟ ಕಮಲ್‌ಹಾಸನ್‌ ಹೇಳಿದ್ದಾರೆ. ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲ ಎಂದು ಖ್ಯಾತ ತಮಿಳು ಸಿನಿಮಾ ನಿರ್ದೇಶಕ ವೆಟ್ರಿಮಾರನ್‌ ಹೇಳಿಕೆ ಸಮರ್ಥನೆ ವೇಳೆ ಕಮಲ್ ಹಾಸನ್‌ ಆಡಿದ ಮಾತುಗಳು ಭಾರಿ ವಿವಾದಕ್ಕೆ ಕಾರಣವಾಗಿದೆ. ರಾಜ ರಾಜ ಚೋಳನ ಚರಿತ್ರೆ ಆಧರಿಸಿದ, ಖ್ಯಾತ ನಿರ್ದೇಶನ ಮಣಿರತ್ನಂ ಅವರ ಐತಿಹಾಸಿಕ ಚಿತ್ರ ‘ಪೊನ್ನಿಯನ್‌ ಸೆಲ್ವನ್‌’ ಬಿಡುಗಡೆಯಾದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಸಮಾರಂಭವೊಂದರಲ್ಲಿ ಮಾತನಾಡಿದ್ದ ವೆಟ್ರಿಮಾರನ್‌, ‘ನಮ್ಮ ಹೆಗ್ಗುರುತುಗಳನ್ನು  ಒಂದಾದ ಮೇಲೊಂದರಂತೆ ನಮ್ಮಿಂದ ಕಿತ್ತುಕೊಳ್ಳಲಾಗುತ್ತಿದೆ. ಮೊದಲು ತಿರುವಳ್ಳುವರ್‌ ಅವರನ್ನು ಕೇಸರೀಕರಣಗೊಳಿಸುವ ಅಥವಾ ರಾಜ ರಾಜ ಚೋಳನನ್ನು ಹಿಂದೂ ಎಂದು ಕರೆಯುವ ರೀತಿಯ ಘಟನೆಗಳು ಪದೇಪದೇ ನಡೆಯುತ್ತಿವೆ’ ಎಂದು ಹೇಳಿದ್ದಾರೆ.
ತಂಜಾವೂರಿನ ಜಗತ್ಪ್ರಸಿದ್ಧ ಬೃಹದೀಶ್ವರ ದೇವಸ್ಥಾನವನ್ನು ನಿರ್ಮಿಸಿದ ರಾಜ ರಾಜ ಚೋಳ ಹಿಂದೂ ಅಲ್ಲ ಎಂದು ವೆಟ್ರಿಮಾರನ್‌ ಹೇಳಿರುವುದು ತೀಕ್ಷ್ಣ ಚರ್ಚೆ ಹುಟ್ಟುಹಾಕಿದೆ. 
ವೆಟ್ರಿಮಾರನ್‌ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕಮಲ್‌ ಹಾಸನ್‌, ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ವೈನವಂ, ಶಿವಂ ಮತ್ತು ಸಮನಂ ಮಾತ್ರ ಇತ್ತು. ಹಿಂದೂ ಎಂಬ ಪದವನ್ನು ಬ್ರಿಟಿಷರು ತಮ್ಮ ಲಾಭಕ್ಕಾಗಿ ಸೃಷ್ಟಿಸಿಕೊಂಡಿದ್ದರು ಎಂದು ಖ್ಯಾತ ನಟ ಕಮಲ್‌ಹಾಸನ್‌ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಮಲ್‌ ಹಾಸನ್‌ ಹೇಳಿಕೆಗೆ ತೀವ್ರ ಚರ್ಚೆ ಉಂಟಾಗುತ್ತಿದೆ. 

ಇದನ್ನು ಓದಿ: ಕಮಲ್ ಹಾಸನ್ ಸಿನಿಮಾದಲ್ಲಿ ಬ್ರಿಟನ್ ರಾಣಿ ಎಲಿಜಬೆತ್ II; 1.5 ಕೋಟಿ ಖರ್ಚು ಮಾಡಿದ್ದ ನಟ

ವೆಟ್ರಿ ಹೇಳಿಕೆಗೆ ಬಿಜೆಪಿ ಟೀಕೆ
ವೆಟ್ರಿಮಾರನ್‌ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ರಾಜ ರಾಜ ಚೋಳ ಹಿಂದೂ ರಾಜನೇ ಆಗಿದ್ದ. ಅವನು ತನ್ನನ್ನು ಶಿವಪಾದ ಶೇಖರ ಎಂದು ಕರೆದುಕೊಂಡಿದ್ದ. ಹಾಗಿದ್ದರೆ ಆತ ಹಿಂದೂ ಅಲ್ಲವೇ? ಅವನು ನಿರ್ಮಿಸಿದ ಒಂದು ಚರ್ಚ್‌ ಅಥವಾ ಮಸೀದಿ ತೋರಿಸಿ ನೋಡೋಣ’ ಎಂದು ಹೇಳಿದ್ದಾರೆ.  

ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಬಿಜೆಪಿ ನಡೆ ಡಬ್ಬಲ್‌ ಆಕ್ಟಿಂಗ್‌: ಕಮಲ್‌ ಹಾಸನ್‌

click me!