ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಕೋರುವ ಸಂಬಂಧ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೋಮವಾರ ವಿಶೇಷ ಸಂಪುಟ ಸಭೆ ಕರೆದಿದ್ದಾರೆ.
ಪಣಜಿ (ಜ.2): ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಕೋರುವ ಸಂಬಂಧ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೋಮವಾರ ವಿಶೇಷ ಸಂಪುಟ ಸಭೆ ಕರೆದಿದ್ದಾರೆ.
ಈ ವೇಳೆ ಕರ್ನಾಟಕ(Karnfataka)ಕ್ಕೆ ನೀಡಿದ ಅನುಮತಿ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಬಹುದು ಅಥವಾ ಅನುಮತಿ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ(Suprreme court) ಹೋಗುವ ಚರ್ಚೆ ನಡೆಯಬಹುದು ಎಂದು ಹೇಳಲಾಗಿದೆ.
ಕಳಸಾ ಬಂಡೂರಿ, ನಾವು ನುಡಿದಂತೆ ನಡೆದುಕೊಂಡಿದ್ದೇವೆ: ಸಿಎಂ ಬೊಮ್ಮಾಯಿ
ಮಹದಾಯಿ ಯೋಜನೆ(Mahadayi project)ಯ ವಿಸ್ತೃತ ಯೋಜನಾ ವರದಿಗೆ ಇತ್ತೀಚೆಗೆ ಕೇಂದ್ರವು ಅನುಮೋದನೆ ನೀಡಿತ್ತು. ಬಳಿಕ ಮಾತನಾಡಿದ್ದ ಸಾವಂತ್ ಅವರ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್(gajendra singh shekhawat) ಹಾಗೂ ಗೃಹ ಸಚಿವ ಅಮಿತ್ ಶಾ(Amit shah) ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದರು. ಅಲ್ಲದೆ, ಮಹದಾಯಿ ನದಿ ಪ್ರದೇಶದಲ್ಲಿ ಕರ್ನಾಟಕ ಸರ್ಕಾರದ ಅಕ್ರಮಗಳನ್ನು ತಡೆಗಟ್ಟಲು ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿದ್ದರು. ಮಹದಾಯಿ ಕುರಿತ ವಿಚಾರದಲ್ಲಿ ಸಾವಂತ್ ವಿರುದ್ಧ ಗೋವಾದ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಜಿಎಫ್‌ಪಿ ಈಗಾಗಲೇ ಸಿಡಿದೆದ್ದಿವೆ.
ಇಂದು ಹುಬ್ಬಳ್ಳೀಲಿ ಕಾಂಗ್ರೆಸ್ ಬೃಹತ್ ಜಲಾಂದೋಲನ
ಕಳಸಾ- ಬಂಡೂರಿ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸಮರ ತಾರಕ್ಕೇರಿದೆ. ಡಿಪಿಆರ್‌ಗೆ ಕೇಂದ್ರ ಅನುಮೋದನೆ ನೀಡಿರುವುದನ್ನು ಸ್ವಾಗತಿಸಿ ಬಿಜೆಪಿ ವಿಜಯೋತ್ಸವ ಆಚರಿಸಿದÜ ಬೆನ್ನಲ್ಲೇ ಬಿಜೆಪಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಬೃಹತ್ ಜಲ ಜನಾಂದೋಲವನ್ನು ಜ. 2ರಂದು ಹಮ್ಮಿಕೊಂಡಿದೆ. 1 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇಲ್ಲಿನ ನೆಹರು ಮೈದಾನದಲ್ಲಿ ಜ. 2ರಂದು ಮಧ್ಯಾಹ್ನ 3 ಗಂಟೆಗೆ ಈ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಸೇರಿದಂತೆ ಗಣ್ಯಾತಿಗಣ್ಯರ ದಂಡು ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ.
ಈಗಾಗಲೇ ಮಾಜಿ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹುಬ್ಬಳ್ಳಿಯಲ್ಲೇ ಠಿಕಾಣಿ ಹೂಡಿ ಸಮಾವೇಶದ ತಯಾರಿ ನಡೆಸಿದ್ದಾರೆ. ಕಳಸಾ-ಬಂಡೂರಿ ಯೋಜನೆಯ ವ್ಯಾಪ್ತಿಯ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಂದ 1 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಸಿದ್ಧತೆ ನಡೆದಿದೆ. ಅವರಿಗೆ ಊಟ, ನೀರು ಪೂರೈಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉದ್ದೇಶವೇನು?:
ಕಳಸಾ-ಬಂಡೂರಿ ವಿಷಯವಾಗಿ ಜ. 2ರಂದು ಜಲಜನಾಂದೋಲನ ಏರ್ಪಡಿಸಲು ಕಾಂಗ್ರೆಸ್ ಮುಂಚೆಯೇ ಸಿದ್ಧತೆ ಮಾಡಿಕೊಂಡಿತ್ತು. ಅಷ್ಟರೊಳಗೆ ಬಿಜೆಪಿ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದ ಜಲಶಕ್ತಿ ಆಯೋಗದಿಂದ ಅನುಮೋದನೆ ದೊರೆತಿದೆ ಎಂದು ಸ್ಪಷ್ಟಪಡಿಸಿತು.
ಆದರೆ ಕೊಟ್ಟಿರುವ ಆದೇಶ ಪತ್ರದಲ್ಲಿ ದಿನಾಂಕವೇ ನಮೂದಿಲ್ಲ. ಇದೊಂದು ನಿರ್ಗತಿಕ ದಾಖಲೆ. ಬಿಜೆಪಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ. ಹೀಗಾಗಿ ಬಿಜೆಪಿ ಸರ್ಕಾರ ಬಂದ ಮೇಲೆ ಏನೆಲ್ಲ ಜನರ ಹಾದಿ ತಪ್ಪಿಸುವ ಕೆಲಸ ಮಾಡಿದೆ ಎಂಬ ಬಗ್ಗೆ ಜನರ ಮುಂದಿಡುವ ಪ್ರಯತ್ನ ಕಾಂಗ್ರೆಸ್ ಈ ಸಮಾವೇಶದ ಮೂಲಕ ಮಾಡಲಿದೆ. ಬಿಜೆಪಿ ಹೇಳುತ್ತಿರುವುದೆಲ್ಲ ಸುಳ್ಳು. ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಬೇಕೆಂದರೆ ಏನೆಲ್ಲ ಆಗಬೇಕು. ಬಿಜೆಪಿ ಸರ್ಕಾರ ಏನೇನು ಮಾಡಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುತ್ತೇವೆ. ಅರಣ್ಯ ಇಲಾಖೆ ಪರವಾನಗಿ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ. ಇದನ್ನೆಲ್ಲ ಜನರಿಗೆ ತಿಳಿಸುತ್ತೇವೆ. ಅದಕ್ಕಾಗಿ ಈ ಸಮಾವೇಶ ಎಂಬುದು ಕಾಂಗ್ರೆಸ್ಸಿಗರ ಅಂಬೋಣ.
ಮಹದಾಯಿ ಅನುಮತಿ ರದ್ದತಿಗಾಗಿ ಮೋದಿಗೆ ಮನವಿ: ಗೋವಾ ಸಿಎಂ ಸಾವಂತ್
ಬೈಕ್ Rally
ಈ ನಡುವೆ ಜಲಜನಾಂದೋಲನದ ಹಿನ್ನೆಲೆಯಲ್ಲಿ ಇಲ್ಲಿನ ಜೆ.ಕೆ. ಸ್ಕೂಲ್ ಹತ್ತಿರದ ಮೈದಾನದಿಂದ ರಾಣಿ ಚೆನ್ನಮ್ಮ ವೃತ್ತದ ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರಾರಯಲಿಯನ್ನೂ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ರಾರಯಲಿಗೆ ಚಾಲನೆ ನೀಡಿದರು. ರಜತ್ ಉಳ್ಳಾಗಡ್ಡಿಮಠ, ಸುನೀಲ ಮಠಪತಿ, ಜಗದೀಶ ನೆಲಗುಡ್ಡ, ರಾಜೇಂದ್ರ ಪಾಟೀಲ ಸೇರಿದಂತೆ ಹಲವರು ರಾರಯಲಿಯಲ್ಲಿದ್ದರ