ಅಯೋಧ್ಯೆ ತೀರ್ಪು ಪ್ರಕಟಿಸಿದ ಮಂಗಳೂರಿನ ನ್ಯಾ| ನಜೀರ್‌ಗೆ ಝಡ್‌ ಭದ್ರತೆ!

By Web Desk  |  First Published Nov 18, 2019, 10:53 AM IST

ಅಯೋಧ್ಯೆ ತೀರ್ಪು ಪ್ರಕಟಿಸಿದ ನ್ಯಾ| ನಜೀರ್‌ಗೆ ಝಡ್‌ ಭದ್ರತೆ| ಕರ್ನಾಟಕದಲ್ಲಿರುವ ಕುಟುಂಬ ಸದಸ್ಯರಿಗೂ ಸೆಕ್ಯುರಿಟಿ


ನವದೆಹಲಿ[ನ.18]: ಅಯೋಧ್ಯಾ ಪ್ರಕರಣದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಪೀಠದ ಸದಸ್ಯರಾದ ನ್ಯಾ| ಎಸ್‌. ಅಬ್ದುಲ್‌ ನಜೀರ್‌ ಅವರ ಕುಟುಂಬ ಸದಸ್ಯರಿಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯಿಂದ ಜೀವ ಬೆದರಿಕೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನ್ಯಾ| ಅಬ್ದುಲ್‌ ನಜೀರ್‌ ಅವರಿಗೆ ‘ಝಡ್‌’ ಶ್ರೇಣಿಯ ಭದ್ರತೆ ಕಲ್ಪಿಸಲು ನಿರ್ಧರಿಸಿದೆ.

ಅಯೋಧ್ಯೆ ಹೊರ ಭಾಗದಲ್ಲಿ ಮಸೀದಿಗೆ ಜಾಗ ನೀಡಿ, ಸರ್ಕಾರಕ್ಕೆ ವಿಹಿಂಪ ಒತ್ತಾಯ!

Tap to resize

Latest Videos

undefined

ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಮತ್ತು ಸ್ಥಳೀಯ ಪೊಲೀಸರಿಗೆ ನ್ಯಾ| ನಜೀರ್‌ ಮತ್ತು ಕರ್ನಾಟಕದಲ್ಲಿ ಇರುವ ಅವರ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸುವಂತೆ ಗೃಹ ಸಚಿವಾಲಯ ಸೂಚನೆ ನೀಡಿದೆ.

ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ರೂಪುರೇಷೆ

ನಜೀರ್‌ ಅವರು ಬೆಂಗಳೂರು, ಮಂಗಳೂರು ಹಾಗೂ ಇತರ ಕಡೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟದ ಕೋಟಾದಿಂದ ‘ಝಡ್‌’ ಶ್ರೇಣಿಯ ಭದ್ರತೆ ನೀಡಲಾಗುತ್ತದೆ. ಅದೇ ರೀತಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ನೆಲೆಸಿರುವ ಅವರ ಕುಟುಂಬ ಸದಸ್ಯರಿಗೂ ಭದ್ರತೆ ವಿಸ್ತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಝಡ್‌ ಶ್ರೇಣಿಯ ಭದ್ರತೆಯಲ್ಲಿ ಅರೆ ಮಿಲಿಟರಿ ಪಡೆಯ 22 ಸಿಬ್ಬಂದಿ ಹಾಗೂ ಪೊಲೀಸ್‌ ಬೆಂಗಾವಲು ನೀಡಲಾಗುತ್ತದೆ.

click me!