50th CJI Chief Justice: ಡಿವೈ ಚಂದ್ರಚೂಡ್‌ ಹೆಸರು ಶಿಫಾರಸು ಮಾಡಿದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್‌!

Published : Oct 11, 2022, 12:23 PM ISTUpdated : Oct 11, 2022, 12:33 PM IST
50th CJI  Chief Justice:  ಡಿವೈ ಚಂದ್ರಚೂಡ್‌ ಹೆಸರು ಶಿಫಾರಸು ಮಾಡಿದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್‌!

ಸಾರಾಂಶ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯುಯು ಲಿಲಿತ್‌ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್‌ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಿದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಡಿವೈ ಚಂದ್ರಚೂಡ್‌ ದೇಶದ 50ನೇ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪ್ಪ ಹಾಗೂ ಮಗ ಇಬ್ಬರೂ ದೇಶದ ಸಿಜೆಐ ಆದ ಇತಿಹಾಸ ನಿರ್ಮಾಣವಾಗಲಿದೆ.  

ನವದೆಹಲಿ (ಅ.11): ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿಯಾಗಿರುವ ಉದಯ್‌ ಉಮೇಶ್‌ ಲಲಿತ್‌, ಕಾನೂನು ಸಚಿವ ಕಿರಣ್‌ ರಿಜಿಜು ಅವರಿಗೆ ಡಿವೈ ಚಂದ್ರಚೂಡ್‌ ಅವರನ್ನು ಮುಂದಿನ ಸಿಜಿಐ ಆಗಿ ಶಿಫಾರಸು ಮಾಡಿದ್ದಾರೆ. ಸಿಜೆಐ ಯುಯು ಲಲಿತ್‌ ಅವರು ನವೆಂಬರ್‌ 8 ರಂದು ನಿವೃತ್ತಿಯಾಗಲಿದ್ದಾರೆ. ನವೆಂಬರ್‌ 9 ರಂದು ಸಿಜೆಐ ಆಗಿ ಮಹಾರಾಷ್ಟ್ರದ ಡಿವೈ ಚಂದ್ರಚೂಡ್‌ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಸಮ್ಮುಖದಲ್ಲಿ ಸಿಜೆಐ ಲಲಿತ್ ಅವರು ತಮ್ಮ ಪತ್ರದ ಪ್ರತಿಯನ್ನು ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸಿದರು. ಡಿವೈ ಚಂದ್ರಚೂಡ್‌ ಅವರ ತಂದೆ ಯಶವಂತ್‌ ವಿಷ್ಣು ಚಂದ್ರಚೂಡ್‌ ಅವರು ದೇಶ್ 16ನೇ ಸಿಜಿಐ ಆಗಿ ನಿರ್ವಹಿಸಿದ್ದರು. 1978ರ ಫೆಬ್ರವರಿ 22 ರಿಂದ 1985ರ ಜುಲೈ 11ರವರೆಗೆ ಅಂದರೆ ಅಂದಾಜು ಏಳು ವರ್ಷಗಳ ಕಾಲ ವೈವಿ ಚಂದ್ರಚೂಡ್‌ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ತಂದೆಯ ನಿವೃತ್ತಿಯ 37 ವರ್ಷದ ಬಳಿಕ, ಡಿವೈ ಚಂದ್ರಚೂಡ್‌ ಈಗ ತಂದೆಯ ಸ್ಥಾನದಲ್ಲಿ ಕೂರಲಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ತಮ್ಮ ತಂದೆ ನೀಡಿದ್ದ ಎರಡು ಪ್ರಮುಖ ತೀರ್ಪುಗಳನ್ನು ರದ್ದುಗೊಳಿಸಿದ್ದಾರೆ. 

ಡಿವೈ ಚಂದ್ರಚೂಡ್‌ ಅವರು ಅವರು ತಮ್ಮ ಕಠಿಣ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದಾರೆ. ಡಿವೈ ಚಂದ್ರಚೂಡ್‌ ಅವರ ಅವಧಿ ಎರಡು ವರ್ಷ ಇರಲಿದ್ದು, 2022ರ ನವೆಂಬರ್‌ 9 ರಿಂದ 2024ರ ನವೆಂಬರ್‌ 10ರ ವರೆಗೆ ಅಧಿಕಾರದಲ್ಲಿದ್ದಾರೆ. ಕೇಂದ್ರ ಕಾನೂನು ಸಚಿವ (Law Minister) ಕಿರಣ್‌ ರಿಜಿಜು (Kiran Rijiju) ಅಕ್ಟೋಬರ್‌ 7 ರಂದು ಸಿಜೆಐಗೆ ಪತ್ರಬರೆದು ಮುಂದಿನ ಮುಖ್ಯ ನ್ಯಾಯಮೂರ್ತಿಯ ಹೆಸರು ಸೂಚಿಸುವಂತೆ ಕೇಳಿಕೊಂಡಿದ್ದರು. ಪ್ರಸ್ತುತ ಸಿಜೆಐ (CJI UU Lalit) ಅವರು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಕಾನೂನು ಸಚಿವಾಲಯದಿಂದ ವಿನಂತಿಸಿದಾಗ ಮಾತ್ರ ಶಿಫಾರಸು ಮಾಡುತ್ತಾರೆ ಎಂಬುದು ಸಂಪ್ರದಾಯವಾಗಿದೆ.

ತಂದೆ ನೀಡಿದ್ದ ಎರಡು ತೀರ್ಪನ್ನು ರದ್ದು ಮಾಡಿದ್ದ ಡಿವೈ ಚಂದ್ರಚೂಡ್‌

ನ್ಯಾಯಮೂರ್ತಿ ಚಂದ್ರಚೂಡ್ ಅವರು 2017-18ರಲ್ಲಿ ತಮ್ಮ ತಂದೆ ನೀಡಿದ್ದ ಎರಡು ತೀರ್ಪುಗಳಾದ ವ್ಯಭಿಚಾರ ಕಾನೂನು ಮತ್ತು ಶಿವಕಾಂತ್ ಶುಕ್ಲಾ Vs ಎಡಿಎಂ ಜಬಲ್ಪುರ್ ಅನ್ನು ರದ್ದುಗೊಳಿಸಿದರು.

ಮುಂದಿನ ಸಿಜೆಐ ಬಗ್ಗೆ ನಿರ್ಧರಿಸಿ, ಮುಖ್ಯ ನ್ಯಾಯಮೂರ್ತಿಗೆ ಕೇಂದ್ರ ಸರ್ಕಾರದ ಪತ್ರ

1. 1985 ರಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ವೈವಿ ಚಂದ್ರಚೂಡ್ (YV Chandrachud) ಅವರ ಪೀಠ ಸೌಮಿತ್ರ ವಿಷ್ಣು (Soumitra Vishnu) ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 497 ಅನ್ನು ಎತ್ತಿ ಹಿಡಿದಿತ್ತು. ಆ ಸಮಯದಲ್ಲಿ, ಪೀಠವು ತನ್ನ ತೀರ್ಪಿನಲ್ಲಿ, 'ಸಂಬಂಧವನ್ನು ಹೊಂದಲು ಪ್ರಲೋಭನೆಗೆ ಒಳಗಾಗುವುದು ಪುರುಷನೇ ಹೊರತು ಮಹಿಳೆಯಲ್ಲ' ಎನ್ನುವುದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ ಎಂದಿದ್ದರು.
2018ರಲ್ಲಿ ಈ ತೀರ್ಪನ್ನು ರದ್ದು ಮಾಡಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ (DY Chandrachud), 'ವ್ಯಭಿಚಾರ ಕಾನೂನು ಪಿತೃಪ್ರಭುತ್ವದ ಕ್ರೋಡೀಕೃತ ನಿಯಮವಾಗಿದೆ. ಲೈಂಗಿಕ ಸ್ವಾಯತ್ತತೆಗೆ ಪ್ರಾಮುಖ್ಯತೆ ನೀಡಬೇಕು' ಎಂದು ಹೇಳಿದ್ದರು.

ನೀವು ವೀರ್‌ ಆಗಿರಬಹುದು, ಅಗ್ನಿವೀರ್‌ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್‌!

2. 1976ರಲ್ಲಿ ಶಿವಕಾಂತ್ ಶುಕ್ಲಾ ವಿರುದ್ಧ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ (Supreme Court) ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಿಲ್ಲ. ಆ ಪೀಠದಲ್ಲಿ ಮಾಜಿ ಸಿಜೆಐ ವೈವಿ ಚಂದ್ರಚೂಡ್ ಕೂಡ ಇದ್ದರು.
2017 ರಲ್ಲಿ, ಸುಪ್ರೀಂ ಕೋರ್ಟ್ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಗುರುತಿಸಿತು. ಈ ಪೀಠದಲ್ಲಿ ಡಿವೈ ಚಂದ್ರಚೂಡ್ ಕೂಡ ಇದ್ದರು. ಚಂದ್ರಚೂಡ್ ಅವರು ತಮ್ಮ ನಿರ್ಧಾರದಲ್ಲಿ, "ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ಬಹುಮತದ ನಿರ್ಧಾರದಲ್ಲಿ ಗಂಭೀರ ದೋಷಗಳಿವೆ. ಸಂವಿಧಾನವನ್ನು ಅಂಗೀಕರಿಸುವ ಮೂಲಕ, ಭಾರತದ ಜನರು ತಮ್ಮ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿಲ್ಲ' ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana