
ನವದೆಹಲಿ(ನ.28): ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಯಾಗಬೇಕೆಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್( Ram Nath Kovind)ಕರೆ ನೀಡಿದ್ದಾರೆ. ನ್ಯಾಯಾಧೀಶರನ್ನು ನ್ಯಾಯಾಧೀಶರೇ ನೇಮಕ ಮಾಡುವ ನ್ಯಾಯಾಂಗ ವ್ಯವಸ್ಥೆಯನ್ನು ಬದಲಾಯಿಸುವ ಸಲುವಾಗಿ ಸಂಸತ್ ತಂದಿದ್ದ ಎನ್‌ಜೆಎಸಿ ಆಕ್ಟ್ (NJAC Act)ನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆರು ವರ್ಷಗಳಾದ ಬಳಿಕ ರಾಷ್ಟ್ರಪತಿ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಯ ಮಾತನಾಡಿದ್ದಾರೆ. ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಸುಧಾರಿಸಬೇಕು ಹಾಗೂ ತಳ್ಳಮಟ್ಟದ ನ್ಯಾಯಾಧೀಶರ ಪೋಷಣೆಯಾಗಬೇಕು ಎಂದು ಅವರು ಹೇಳಿದ್ದಾರೆ. ನ್ಯಾಯಾಧೀಶರು ಉನ್ನತ ದರ್ಜೆಗೆ ಏರಲು ಅಖಿಲ ಭಾರತ ಮಟ್ಟದ ಪರೀಕ್ಷೆಗಳನ್ನು ಆಯೋಜಿಸಬೇಕು. ಈ ಮೂಲಕ ತಳಮಟ್ಟದಿಂದ ನ್ಯಾಯಾಧೀಶರುಗಳ ಆಯ್ಕೆಯಾಗಬೇಕು ಎಂದು ಅವರು ಹೇಳಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ್, ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನ್ಯಾಯಾಧೀಶರ ಆಯ್ಕೆಗೆ ಒಂದು ಅಖಿಲ ಭಾರತ ಮಟ್ಟದ ಪರೀಕ್ಷೆಯನ್ನು ನಡೆಸಬಹುದು. ಈ ಮೂಲಕ ಸರಿಯಾದ ಪ್ರತಿಭೆಯನ್ನು ತಳಮಟ್ಟದಿಂದ ಉನ್ನತ ಮಟ್ಟಕ್ಕೆ ಆಯ್ಕೆ ಮಾಡಬಹುದು ಎಂದರು. ಈ ಉಪಾಯ ಹೊದೇನು ಅಲ್ಲ. ಇದು ದಶಕದಿಂದ ಸುತ್ತು ಹೊಡೆಯುತ್ತಿದೆ. ಅಲ್ಲದೇ ಇದರ ಸುಧಾರಣೆಗೆ ಬೇರೆ ಉತ್ತಮವಾದ ಸಲಹೆಗಳು ಇರಬಹುದು. ಅಂತಿಮವಾಗಿ ಇದರ ಗುರಿ ನ್ಯಾಯ ನೀಡುವ ವ್ಯವಸ್ಥೆಯನ್ನು ಸಧೃಡಗೊಳಿಸುವುದಾಗಿದೆ.
ಪ್ರೀತಿ, ಧೈರ್ಯ, ಹೆಮ್ಮೆಗೆ ಇದೇ ಸಾಕ್ಷಿ, ಮೇಜರ್ ಸೂದ್ Shaurya Chakra ಸ್ವೀಕರಿಸಿದ ಆಕೃತಿ!
ಈ ಹಿಂದೆ 2016ರ ಅಕ್ಟೋಬರ್ 15ರಂದು ಐವರು ಜಡ್ಜ್‌ಗಳಿದ್ದ ರಾಷ್ಟ್ರೀಯ ನ್ಯಾಯಾಂಗ ಆಯ್ಕೆ ಸಮಿತಿ ಅರ್ಧ ಶತಮಾನಕ್ಕೂ ಹಳೆಯದಾದ ಕೊಲಿಜಿಯಂ ವ್ಯವಸ್ಥೆಯ ಪುರುಜೀವನಗೊಳಿಸುವ ನಿರ್ಧಾರವನ್ನು ತಿರಸ್ಕರಿಸಿತು. ಇದಕ್ಕೂ ಮೊದಲು ಶುಕ್ರವಾರ ಬಾರ್ ಕೌನ್ಸಿಲ್‌ನ ಅಧ್ಯಕ್ಷರಾಗಿರುವ ವಿಕಾಸ್ ಸಿಂಗ್ ಕೂಡ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಕೊಲಿಜಿಯಂ ವ್ಯವಸ್ಥೆ ಬದಲಾಗಬೇಕು ಎಂದು ಹೇಳಿದ್ದರು.
Kanganaಗೆ ಪ್ರಶಸ್ತಿ ಅಲ್ಲ, ಚಿಕಿತ್ಸೆ ನೀಡಬೇಕಿದೆ : ಪದ್ಮಶ್ರೀ ಹಿಂಪಡೆಯುವಂತೆ ರಾಷ್ಟ್ರಪತಿಗೆ ಮಹಿಳಾ ಆಯೋಗ ಪತ್ರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ