ವೈರಸ್‌ ನಿಲ್ಲುವವರೆಗೆ ವಕೀಲರು ಕೋಟ್‌, ಗೌನ್‌ ಧರಿಸುವಂತಿಲ್ಲ!

Published : May 14, 2020, 01:59 PM IST
ವೈರಸ್‌ ನಿಲ್ಲುವವರೆಗೆ ವಕೀಲರು ಕೋಟ್‌,  ಗೌನ್‌ ಧರಿಸುವಂತಿಲ್ಲ!

ಸಾರಾಂಶ

ವೈರಸ್‌ ನಿಲ್ಲುವವರೆಗೆ ವಕೀಲರು ಕೋಟ್‌, ಗೌನ್‌ ಧರಿಸುವಂತಿಲ್ಲ| ಕೊರೋನಾ ವೈರಸ್‌ ಸುಲಭವಾಗಿ ಹಬ್ಬುವ ಸಾಧ್ಯತೆ ಇದೆ| ಸುಪ್ರೀಂಕೋರ್ಟ್‌ ಅಧಿಸೂಚನೆ

ನವದೆಹಲಿ(ಮೇ.14): ಕೊರೋನಾ ವೈರಸ್‌ ಉಪಟಳ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ವಕೀಲರು ಕಪ್ಪು ಕೋಟ್‌ ಹಾಗೂ ಉದ್ದ ಗೌನ್‌ಗಳನ್ನು ವಿಚಾರಣೆ ವೇಳೆ ಧರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಅಧಿಸೂಚನೆ ಹೊರಡಿಸಿದೆ.

ಈ ರೀತಿಯ ವಸ್ತ್ರ ಧರಿಸುವುದರಿಂದ ಕೊರೋನಾ ವೈರಸ್‌ ಸುಲಭವಾಗಿ ಹಬ್ಬುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ  ಹೊಸ ಸಮವಸ್ತ್ರ ಸಂಹಿತೆಯನ್ನು ಶೀಘ್ರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಎಂದು ಬುಧವಾರ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಹೇಳಿದ್ದರು.

ಅದಾದ ಕೆಲವೇ ತಾಸಿನಲ್ಲಿ ಅಂದರೆ ಸಂಜೆ ವೇಳೆಗೆ ಸುಪ್ರೀಂಕೋರ್ಟ್‌ ಅಧಿಸೂಚನೆ ಹೊರಡಿಸಿತು. ಶ್ವೇತವರ್ಣದ ಪ್ಲೇನ್‌ ಶರ್ಟ್‌/ಬಿಳಿಯ ಸಲ್ವಾರ್‌- ಕಮೀಜ್‌/ಬಿಳಿ ಸೀರೆ ಹಾಗೂ ಬಿಳಿ ಬಣ್ಣದ ನೆಕ್‌ಬ್ಯಾಂಡ್‌ ಧರಿಸುವಂತೆ ವಕೀಲರಿಗೆ ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!
ಒಂದೇ ಲಾಂಚರ್‌ ಮೂಲಕ ಎರಡು ಪ್ರಳಯ್‌ ಕ್ಷಿಪಣಿ ಪರೀಕ್ಷೆ ಮಾಡಿದ ಭಾರತ!