ಜೆಆರ್‌ಡಿ ಟಾಟಾ ಅವರು ಆಸ್ಪತ್ರೆಯಲ್ಲಿದ್ದಾಗಲೇ ಟಾಟಾ ಸಮೂಹದ ಚುಕ್ಕಾಣಿಯನ್ನು ರತನ್ ಟಾಟಾ ಅವರಿಗೆ ನೀಡುವ ನಿರ್ಧಾರ ಮಾಡಿದ್ದರು. ಈ ಐತಿಹಾಸಿಕ ಕ್ಷಣದ ಬಗ್ಗೆ ರತನ್ ಟಾಟಾ ಅವರು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಮುಂಬೈ (ಅ.10): ಸಾಕಷ್ಟು ಮಂದಿ ಹಿರಿಯರು ಹಾಗೂ ಅನುಭವಿಗಳೂ ಇದ್ದರೂ, 1991ರಲ್ಲಿ ಜೆಆರ್‌ಡಿ ಟಾಟಾ ಎಂದು ಕರೆಯಲ್ಪಡುವ ಜಹಾಂಗೀರ್ ರತನ್‌ಜಿ ದಾದಾಭೋಯ್ ಟಾಟಾ, ಇಡೀ ಟಾಟಾ ಸಮೂಹದ ಚುಕ್ಕಾಣಿಯನ್ನು ರತನ್ ಟಾಟಾಗೆ ಹಸ್ತಾಂತರ ಮಾಡಿದ್ದರು. ಆ ವೇಳೆ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದ ರುಸ್ಸಿ ಮೋದಿ ಸೇರಿದಂತೆ ಇನ್ನೂ ಹಲವರಿಗೆ ಜೆಆರ್‌ಡಿ ಟಾಟಾ ಮಾಡಿದ ಈ ನಿರ್ಧಾರ ಅಚ್ಚರಿ ತಂದಿತ್ತು. ಆದರೆ, ಇದು ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್ ತನಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ ಟಾಟಾ ಸಮೂಹದ ಮೊದಲ ದೊಡ್ಡ ನಿರ್ಧಾರವಾಗಿತ್ತು. 1997 ರಲ್ಲಿ ನಟಿ ಮತ್ತು ಟಾಕ್ ಶೋ ಹೋಸ್ಟ್ ಸಿಮಿ ಗರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ, ರತನ್ ಟಾಟಾ ಅವರು, ಜೆಆರ್‌ಡಿ ಟಾಟಾ ಇಡೀ ಟಾಟಾ ಸಮೂಹದ ಚುಕ್ಕಾಣಿಯನ್ನು ತಮಗೆ ನೀಡುವ ನಿರ್ಧಾರ ಮಾಡಿದ ದಿನದ ಬಗ್ಗೆ ಮಾತನಾಡಿದ್ದರು.
'ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್' ನಲ್ಲಿ ಭಾಗವಹಿಸಿದ್ದ ರತನ್ ಟಾಟಾ ಅವರು ಆ ದಿನಗಳನ್ನು ನೆನೆಸಿಕೊಂಡಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಜೆಆರ್‌ಡಿ ಟಾಟಾ ಅಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೇ ಆಸ್ಪತ್ರೆಯಲ್ಲಿ ಜೆಆರ್‌ಡಿ ಟಾಟಾ ಇಡೀ ಟಾಟಾ ಸಮೂಹದ ಚುಕ್ಕಾಣಿಯನ್ನು ರತನ್ ಟಾಟಾಗೆ ನೀಡಿದ್ದರು. ವಿಶೇಷ ಏನೆಂದರೆ, ರತನ್ ಟಾಟಾಗೆ ಟಾಟಾ ಸಮೂಹದ ಚುಕ್ಕಾಣಿ ಸಿಕ್ಕ ಇದೇ ಆಸ್ಪತ್ರೆಯಲ್ಲಿಯೇ ಅವರು ಕೂಡ ಕೊನೆಯುಸಿರೆಳೆದಿದ್ದಾರೆ.
'ಅಂದು ನಾವು ಯಾವುದೋ ಕಾರ್ಯಕ್ರಮ ನಿಮಿತ್ತ ಜೆಮ್ಶೆಡ್ಪುರದಲ್ಲಿದ್ದೆವು. ಅಲ್ಲಿಂದಲೇ ನಾನು ಮರ್ಸಿಡೀಸ್-ಬೆಂಜ್ ಕಂಪನಿಯೊಂದಿಗಿನ ಮಾತುಕತೆಯ ಕಾರಣಕ್ಕೆ ಜರ್ಮನಿಯ ಸ್ಟುಟ್‌ಗರ್ಟ್‌ಗೆ ತೆರಳಿದ್ದೆ. ನಾನು ವಾಪಾಸ್ ಬಂದಾಗ, ಅವರು (ಜೆಆರ್‌ಡಿ ಟಾಟಾ) ಹೃದಯ ಸಂಬಂಧಿ ಕಾಯಿಲೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವಿಷಯ ತಿಳಿಯಿತು. ಬಹುಶಃ ಒಂದು ವಾರ ಅವರು ಈ ಆಸ್ಪತ್ರೆಯಲ್ಲಿದ್ದರು. ನಾನು ಪ್ರತಿದಿನ ಅವರನ್ನು ಭೇಟಿ ಮಾಡುತ್ತಿದ್ದೆ. ಶುಕ್ರವಾರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ, ಮುಂದಿನ ಸೋಮವಾರ ಅವರನ್ನು ಭೇಟಿಯಾಗಲು ನಾನು ಆಫೀಸ್‌ಗೆ ತೆರಳುತ್ತಿದ್ದೆ' ಎಂದು ರತನ್ ಟಾಟಾ ನೆನಪಿಸಿಕೊಂಡಿದ್ದಾರೆ.
undefined
ಸಾಮಾನ್ಯವಾಗಿ ಜೆಆರ್‌ಡಿ ಟಾಟಾ, 'ಓಕೆ, ಏನು ಹೊಸ ವಿಚಾರ?' ಎಂದು ಕೇಳುವುದರ ಮೂಲಕವೇ ಸಭೆಯನ್ನು ಆರಂಭ ಮಾಡುತ್ತಿದ್ದರು. ಇದಕ್ಕೆ ನಾನು, 'ಜೆ, ನಾನು ನಿಮ್ಮನ್ನು ಪ್ರತಿದಿನವೂ ನೋಡಿದ್ದೇನೆ. ನಾನು ನಿಮ್ಮನ್ನು ಕೊನೆಯ ಬಾರಿಗೆ ನೋಡಿದ ಕ್ಷಣದಿಂದ ಇಲ್ಲಿಯವರೆಗೂ ಯಾವುದೇ ಹೊಸ ವಿಚಾರವಿಲ್ಲ' ಎಂದಿದ್ದೆ.
ಆದರೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿದ್ದಾಗಲೇ ಜೆಆರ್‌ಡಿ ಟಾಟಾ ನಿರ್ಧಾರ ಮಾಡಿದ್ದರು. ಅಂದು ನನಗೆ ಮುಖ್ಯವಾದದನ್ನು ಹೇಳೋಕೆ ತೀರ್ಮಾನಿಸಿದ್ದರು. 'ನನಗೆ ಜೆಮ್ಶೆಡ್ಪುರದಲ್ಲಿ ಏನು ಆಯಿತೋ ಅದರ ಬೆನ್ನಲ್ಲಿಯೇ ನನಗೆ ಒಂದು ಯೋಚನೆ ಬಂದಿದೆ. ನಾನೀಗ ಕೆಳಗಿಳಿಯುವ ಸಮಯ ಬಂದಿದೆ. ಹಾಗೂ ನೀನು ನನ್ನ ಸ್ಥಾನ ತುಂಬಬೇಕು ಎಂದು ನಾನು ನಿರ್ಧಾರ ಮಾಡಿದ್ದೇನೆ ಎಂದು ಹೇಳಿಬಿಟ್ಟರು..' ಎಂದು ರತನ್ ಟಾಟಾ ತಿಳಿಸಿದ್ದರು.
Explainer: ಟಾಟಾ ಸನ್ಸ್-ಟಾಟಾ ಟ್ರಸ್ಟ್ ಏನಿದು ಟಾಟಾ ಸಮೂಹದ ಅಂತರಾಳ, ಅಗಲಿದ ದಿಗ್ಗಜನ ಸ್ಥಾನ ತುಂಬುವವರು ಯಾರು?
ಜೆಅರ್‌ಡಿ ಟಾಟಾ ನಿರ್ಧಾರದ ಬಳಿಕ ಅದೇ ವರ್ಷದ ಮಾರ್ಚ್ 25 ರಂದು ಟಾಟಾ ಗ್ರೂಪ್‌ನ ಬೋರ್ಡ್‌ನಲ್ಲಿ ಇದನ್ನು ಪ್ರಸ್ತಾಪ ಮಾಡಲಾಯಿತು. ಆ ಬೋರ್ಡ್ ಮೀಟಿಂಗ್‌ನಲ್ಲಿ ಜೆಆರ್‌ಡಿ ಟಾಟಾ ತಮ್ಮ ದಶಕಗಳ ಕಾಲಿನ ಟಾಟಾ ಸಾಂಗತ್ಯವನ್ನು ನೆನಪಿಸಿಕೊಂಡಿದ್ದರು. "ನನ್ನ ಅನೇಕ ಸಹೋದ್ಯೋಗಿಗಳು ಇದು ಐತಿಹಾಸಿಕ ದಿನ ಎಂದು ಹೇಳಿದ್ದರು. ಅವರು 40 ರಿಂದ 50 ವರ್ಷಗಳ ಕಾಲ ನಿರ್ವಹಿಸಿದ ಸ್ಥಾನದಿಂದ ಕೆಳಗಿಳಿಯುವುದರ ಹೊರತಾಗಿ, ಈ ಪಾತ್ರವನ್ನು ಬೇರೆಯವರಿಗೆ ಬಿಟ್ಟುಕೊಡಲು ಅವರು ಅತ್ಯಂತ ದಿಟ್ಟ ನಿರ್ಧಾರ ಹೊಂದಿದ್ದರು' ಎಂದು ರತನ್ ಟಾಟಾ ನೆನಪಿಸಿಕೊಂಡಿದ್ದರು.
Ratan Tata Funeral ಪಾರ್ಸಿ ಸಂಪ್ರದಾಯದಲ್ಲಿ ಹೆಣ ಸುಡೋದು ಇಲ್ಲ,ಹೂಳೋದು ಇಲ್ಲ; ಏನಿದು ದಖ್ಮಾ?
ಆದರೂ, ಇದು ಕೇವಲ ಪರಿವರ್ತನೆಯಾಗಿರಲಿಲ್ಲ, ಆ ಕ್ಷಣವನ್ನು ತುಂಬಾ ಮಹತ್ವದ್ದಾಗಿದೆ. "ಆ ಸಭೆಯಲ್ಲಿ ಅವರು ವರ್ಷಗಳ ಕಾಲ ನೆನಪಿಸಿಕೊಂಡರು ಮತ್ತು ನಾನು ಅದನ್ನು ಭಾವನಾತ್ಮಕವಾಗಿ ಅಥವಾ ಇನ್ಯಾವುದೇ ರೀತಿಯಲ್ಲಿ ಪುನರುತ್ಪಾದಿಸಲು ಸಾಧ್ಯವಿಲ್ಲ, ಆದರೆ ಆ ಸಭೆಯು ಟಾಟಾದಲ್ಲಿ ಅವರ ಎಲ್ಲಾ ದಿನಗಳ ಆರ್ಕೈವಲ್ ಮರುಕಳಿಸುವಿಕೆಯಂತೆ ನಡೆಯಿತು. ಎಲ್ಲಿಯೂ ಅವರು ಸ್ವಪ್ರಶಂಸೆ ಮಾಡಿರಲಿಲ್ಲ. ತಮ್ಮ ಅನುಭವ, ಗ್ರೂಪ್‌ನ ಇತಿಹಾಸ ಹೇಳಿಕೊಂಡಿದ್ದರು. ಆ ದಿನ ನಾವೆಲ್ಲರೂ ತುಂಬಾ ಭಾವುಕರಾಗಿ ಹೊರಬಂದೆವು, ”ಎಂದು ಸಂದರ್ಶನದಲ್ಲಿ ಹೇಳಿದ್ದರು. JRD ಟಾಟಾ ಬ್ಯಾಟನ್ ಹಸ್ತಾಂತರಿಸಿದ ಎರಡು ವರ್ಷಗಳ ನಂತರ, ಅವರು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನಿಧನರಾದರು.