ಶ್ರೀ ರಾಮ, ಜಯ ರಾಮ, ಜಯ ಜಯ ರಾಮ, ವರ್ಚುವಲ್ ಮಂತ್ರ ಪಠಣ ವೇದಿಕೆ ಆರಂಭಿಸಿದ ಜೋಶ್!

By Suvarna News  |  First Published Jan 22, 2024, 11:19 AM IST

ಆಯೋಧ್ಯೆ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಮನೆ ಮಾಡಿದೆ. ಇದರ ಬೆನ್ನಲ್ಲೇ ಭಾರತದ ಅತೀ ದೊಡ್ಡ ಶಾರ್ಟ್ ವಿಡಿಯೋ ಆ್ಯಪ್ ಜೋಶ್, ರಾಮ ಭಕ್ತರಿಗೆ ಶ್ರೀರಾಮ ಮಂತ್ರ ಪಠಣ ವೇದಿಕೆ ಸೃಷ್ಟಿಸಿದೆ. ಜೋಶ್ ಆ್ಯಪ್ ಸಾಮೂಹಿಕವಾಗಿ ಶ್ರೀರಾಮ ಮಂತ್ರ ಪಠಣಕ್ಕೆ ಭಕ್ತರನ್ನು ಆಹ್ವಾನಿಸಿದೆ.
 


ಬೆಂಗಳೂರು(ಜ.22) ದೇಶಾದ್ಯಂತ ಶ್ರೀರಾಮ ಭಜನೆ, ರಾಮಕಥಾ, ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮ ಇಮ್ಮಡಿಗೊಳಿಸಲು ಭಾರತದ ಶಾರ್ಟ್ ವಿಡಿಯೋ ಆ್ಯಪ್ ಜೋಶ್ ರಾಮಭಕ್ತರಿಗೆ ಮಂತ್ರ ಪಠಣ ವೇದಿಕೆಯನ್ನು ಒದಗಿಸುತ್ತಿದೆ. ಬಳಕೆದಾರರು, ರಾಮ ಭಕ್ತರು ವರ್ಚುವಲ್ ಆಗಿ ಶ್ರೀರಾಮ ಮಂತ್ರ ಪಠಣ ಮಾಡುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಡೈಲಿಹಂಟ್ ಹಾಗೂ ಜೋಶ್ ಜಂಟಿಯಾಗಿ ರಾಮ ಭಕ್ತರಿಗಾಗಿ ವರ್ಚುವಲ್ ಮಂತ್ರ ಪಠಣ ವೇದಿಕೆ ನೀಡಿದೆ.

ಜೋಶ್ ಹೊರತಂದಿರುವ ಶ್ರೀರಾಮ ಮಂತ್ರ ಚ್ಯಾಂಟ್ ರೂಮ್ ಮೂಲಕ, ರಾಮ ಭಕ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು, ಶ್ರೀ ರಾಮ, ಜಯ ರಾಮ, ಜಯ ಜಯ ರಾಮ  ಅನ್ನೋ ಮಂತ್ರವನ್ನು ಪಠಿಸಬೇಕು. ಭಕ್ತರು 11, 108 ಅಥವಾ 1008ರ ಬಾರಿ ಈ ಮಂತ್ರ ಪಠಿಸಬಹುದು. ಮಂತ್ರ ಪಠಣೆ ಪೂರ್ಣಗೊಂಡ ಬಳಿಕ ಈ ಐತಿಹಾಸಿಕ ಭಕ್ತಿ ಪರಂಪರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಮಾಣಪತ್ರ ಸಿಗಲಿದೆ.

Tap to resize

Latest Videos

undefined

ಪ್ರಾಣಪ್ರತಿಷ್ಠೆ ನೇರಪ್ರಸಾರ LED ತೆಗೆದುಹಾಕಿದ ತಮಿಳುನಾಡು ಪೊಲೀಸ್, ದಾಖಲೆ ನೀಡಿದ ಸಚಿವೆ!

ಶ್ರೀರಾಮ ಮಂತ್ರ ಪಠಣ ವೇದಿಕೆ ಸೇರಲು ಜೋಶ್ ಬಳಕೆದಾರರನ್ನು ಸ್ವಾಗತಿಸಿದೆ. ಇದೇ ವೇಳೆ ರಾಮ ಭಕ್ತರಿಗೆ ಶ್ರೀರಾಮನಿಗೆ ವಿಶೇಷವಾಗಿ ಪುಟವನ್ನು ಮೀಸಲಿಡಲಾಗಿದೆ.ಶ್ರೀರಾಮ ಥೀಮ್ ಹೊಂದಿರುವ ಪೇಜ್ ಇದಾಗಿದ್ದು, ಕ್ಯುರೇಟಿ ಪ್ಲೇ ಲಿಸ್ಟ್‌ನಲ್ಲಿ ಶ್ರೀರಾಮನ ಹಾಡುಗಳನ್ನು ಆನಂದಿಸಬಹುದು.ಜೋಶ್ ಬಳಕೆದಾರರು ಶ್ರೀರಾಮ ಮಂತ್ರ ಪಠಣ ರೂಮ್ ಸೇರಿಕೊಳ್ಳುವುದು ಅತೀ ಸುಲಭವಾಗಿದೆ. ಇಷ್ಟೇ ಅಲ್ಲ ಕುಟುಂಬಸ್ಥರು, ಆಪ್ತರು,ಸ್ನೇಹಿತರನ್ನೂ ಈ ವರ್ಚುವಲ್ ಮಂತ್ರ ಪಠಣ ವೇದಿಕೆಗೆ ಆಹ್ವಾನಿಸಬಹುದು. 

ಆಸಕ್ತರು ರಾಮ ಮಂತ್ರ ಪಠಣ ವೇದಿಕೆಯಲ್ಲಿ ಪಾಲ್ಗೊಳ್ಳಲು ಇಲ್ಲಿ ಕ್ಲಿಕ್ ಮಾಡಿ: ಶ್ರೀ ರಾಮ ಮಂತ್ರ ಪಠಣ

ರಾಮ ಭಕ್ತರು ಶ್ರೀರಾಮ ಮಂತ್ರ ಪಠಣದ ಜೊತೆಗೆ ಡೈಲಿಹಂಟ್‌ನಲ್ಲಿ ಲೈವ್ ಫೀಡ್ ಮೂಲಕ ಆಯೋಧ್ಯೆ ರಾಮ ಮಂದಿರ ಉದ್ಘಾಟನೆಯ ನೇರ ಪ್ರಸಾರವನ್ನೂ ವೀಕ್ಷಿಸಬಹುದು.  ಇದರ ಜೊತೆಗೆ ಆಯೋಧ್ಯೆ ರಾಮ ಮಂದಿರದ ಆಡಿಯೋ ಅಪ್‌ಡೇಟ್, ಪಾಡ್ ಕಾಸ್ಟ್,ರಾಮಕಥಾ ಸೇರಿದಂತೆ ಶ್ರೀರಾಮ ಮಂದಿರ ಹಲವು ಕುತೂಹಲ ವಿಚಾರಗಳನ್ನು ಆನಂದಿಸಬಹುದು ಎಂದು ಡೈಲಿಹಂಟ್ ಜೋಶ್ ಹೇಳಿದೆ.

ಶ್ರೀರಾಮ ಮಂತ್ರ ಪಠಣ ವೇದಿಕೆ ಮಹತ್ವದ ಮೈಲಿಗಲ್ಲಾಗಿದೆ. ಈ ಮೂಲಕ ಜೋಶ್ ಡೈಲಿಹಂಟ್ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯಲ್ಲಿ ತೊಡಗಿಸಿಕೊಳ್ಳುತ್ತಾ, ಬಳಕೆದಾರರಿಗೆ ಅತ್ಯುತ್ತಮ ಮಂತ್ರ ಪಠಣದ ಅವಕಾಶ ಕಲ್ಪಿಸುತ್ತಿದೆ ಎಂದು ಜೋಶ್ ವಕ್ತಾರರು ಹೇಳಿದ್ದಾರೆ. ಶ್ರೀರಾಮ ಮಂತ್ರ ಪಠಿಸುವ ಆಧ್ಯಾತ್ಮಿಕ ಅನುಭೂತಿಯಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಳ್ಳಲು ಬಳಕೆದಾರರನ್ನು ಆಹ್ವಾನಿಸುತ್ತಿದೆ. ಈ ಮೂಲಕ ಶಾಂತಿ ಹಾಗೂ ಸೌಹಾರ್ಧತೆ ಭಾವನೆ ಬೆಳಸಲು ಸಹಕಾರಿಯಾಗಲಿದೆ. ಜೋಶ್ ಹಾಗೂ ಡೈಲಿಹಂಟ್ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮ ಭಕ್ತರು ಈ ಮಂತ್ರ ಪಠಣ ಹಾಗೂ ಶ್ರೀರಾಮ ವಿಶೇಷ ಪೇಜ್‌ನಲ್ಲಿ ತೊಡಗಿಸಿಕೊಳ್ಳುವುದನ್ನು ಎದುರುನೋಡುತ್ತಿದೆ. ಎಲ್ಲಾ ಗಡಿಗಳನ್ನು ಮೀರಿದ ಆಧ್ಯಾತ್ಮಿಕ ಅನುಭೂತಿ ಹೃದಯಗಳನ್ನು ಒಂದುಗೂಡಿಸುತ್ತದೆ. ಈ ಅಭಿಯಾನ ದೇಶಾದ್ಯಂತ 1 ಮಿಲಿಯನ್ ಬಳಕೆದಾರರನ್ನು ಒಂದಾಗಿಸುತ್ತದೆ ಎಂದು ಜೋಶ್ ವಕ್ತಾರರು ಹೇಳಿದ್ದಾರೆ.  

ಶ್ರೀರಾಮ ಶೋಭಯಾತ್ರೆ ಮೇಲೆ ಅನ್ಯಕೋಮಿನಿಂದ ಭೀಕರ ದಾಳಿ;ಕಾರು ಜಖಂ, ಹಲವರಿಗೆ ಗಾಯ!

click me!