ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ದೇಶದೆಲ್ಲೆಡೆ ಶ್ರೀರಾಮನ ಭಜನೆ, ರಾಮಕಥಾ, ಶೋಭಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ಹೀಗೆ ಸಾಗುತ್ತಿದ್ದ ಶ್ರೀರಾಮ ಶೋಭಯಾತ್ರೆ ಮೇಲೆ ಅನ್ಯಕೋಮಿನ ಗುಂಪು ಭೀಕರ ದಾಳಿ ನಡೆಸಿದೆ. ಕಲ್ಲುತೂರಾಟ, ಬಡಿಗೆ ಮೂಲಕ ಕಾರುಗಳನ್ನು ಜಖಂ ಗೊಳಿಸಲಾಗಿದ್ದು, ಹಲವು ರಾಮಭಕ್ತರು ಗಾಯಗೊಂಡಿದ್ದಾರೆ. ಇಲ್ಲಿದೆ ದಾಳಿ ವಿಡಿಯೋ! 

ಮುಂಬೈ(ಜ.22) ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ದೇಶದ ಮೂಲೆ ಮೂಲೆಯಲ್ಲಿ ಶ್ರೀರಾಮನ ಭಜನೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ, ಶೋಭಯಾತ್ರೆ, ರಾಮಕಥಾ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಮುಂಬೈ ಥಾಣೆಯಲ್ಲಿ ನಡೆಯುತ್ತಿದ್ದ ಶ್ರೀರಾಮ ಶೋಭಯಾತ್ರೆ ಮೇಲೆ ಭೀಕರ ದಾಳಿ ನಡೆದಿದೆ. ಕಲ್ಲು ತೂರಾಟ, ಬಡಿಗೆಗಳ ಮೂಲಕ ದಾಳಿ ನಡೆಸಿದ್ದು, ಹಲವು ರಾಮ ಭಕ್ತರು ಗಾಯಗೊಂಡಿದ್ದಾರೆ. ಇತ್ತ ಶೋಭಯಾತ್ರೆಗೆ ಬಳಸಿದ ಕಾರುಗಳು ಜಖಂ ಗೊಂಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ. ಜೈಶ್ರೀರಾಮ್ ಘೋಷಣೆಯೊಂದಿಗೆ ಸಾಗಿದ ಶ್ರೀರಾಮ ಶೋಭಯಾತ್ರೆ ಮೇಲೆ ಏಕಾಏಕಿ ದಾಳಿಯಾಗಿದೆ. ಇದೊಂದು ಪೂರ್ವನಿಯೋಜಿತ ದಾಳಿ ಎಂದು ರಾಮ ಭಕ್ತರು ಆರೋಪಿಸಿದ್ದಾರೆ. ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಶೋಭಯಾತ್ರೆ ಮೇಲೆ ದಾಳಿ ನಡೆದಿದೆ.

ಪ್ರಾಣಪ್ರತಿಷ್ಠೆ ನೇರಪ್ರಸಾರ LED ತೆಗೆದುಹಾಕಿದ ತಮಿಳುನಾಡು ಪೊಲೀಸ್, ದಾಖಲೆ ನೀಡಿದ ಸಚಿವೆ!

200ಕ್ಕೂ ಹೆಚ್ಚು ಅನ್ಯಕೋಮಿನ ಯುವಕರ ಗುಂಪು ಏಕಾಏಕಿ ದಾಳಿ ನಡೆಸಿದೆ. ಶಾಂತಿಯುತವಾಗಿ ಸಾಗುತ್ತಿದ್ದ ಶ್ರೀರಾಮನ ಶೋಭಯಾತ್ರೆ ಮೇಲಿನ ದಾಳಿಯ ಭೀಕರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದಾಳಿ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತಕ್ಷಣವೇ ಕ್ರಮಕ್ಕೆ ಆಗ್ರಹಿಸಲಾಗಿದೆ. ಇಷ್ಟೇ ಅಲ್ಲ ಸೂಕ್ತ ತನಿಖೆ ನಡೆಸಲು ಆಗ್ರಹ ಹೆಚ್ಚಾಗುತ್ತಿದೆ. 

Scroll to load tweet…

ಸತತ 500 ವರ್ಷಗಳ ಹೋರಾಟದ ಬಳಿ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ದೇಶದ ನಾಗರೀಕತೆಯ ಪುನರುತ್ಥಾನ ಎಂದೇ ಗುರುತಿಸಿಕೊಂಡಿರುವ ರಾಮ ಮಂದಿರದ ಸಂಭ್ರಮ ದೇಶದೆಲ್ಲೆಡೆ ಹರಡಿದೆ. ರಾಮ ಭಕ್ತರ ಮೇಲೆ 500 ವರ್ಷಗಳ ಬಳಿಕವೂ ದಾಳಿಯಾಗುತ್ತಿದೆ. ತಪ್ಪತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಶೋಭಯಾತ್ರೆಯಲ್ಲಿ ಪಾಲ್ಗೊಂಡ ರಾಮಭಕ್ತರು ಆಗ್ರಹಿಸಿದ್ದಾರೆ.

ರಾಮ ಮಂದಿರದಲ್ಲಿ 114 ಕಲಶ ನೀರಿನಿಂದ ಮೂರ್ತಿ ಪುಣ್ಯಸ್ನಾನ, ಪೂಜಾ ವಿಧಿವಿಧಾನ ಆರಂಭ!

ಪ್ರಧಾನಿ ನರೇಂದ್ರ ಮೋದಿ 12.20ಕ್ಕೆ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. 12.50ರ ವರೆಗೆ ಪ್ರಾಣಪ್ರತಿಷ್ಠೆ ಹಾಗೂ ಪೂಜಾ ಕೈಂಕರ್ಯಗಳು ನಡೆಯಿದೆ. ಬಳಿಕ 1 .15ರ ಹೊತ್ತಿಗೆ ಪ್ರಧಾನಿ ಮೋದಿ ಆಯೋಧ್ಯೆಯಲ್ಲಿ ಆಯೋಜಿಸಿವ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 

Scroll to load tweet…