JNU clash ಜೆಎನ್‌ಯುನಲ್ಲಿ ಮಾರಾಮಾರಿ, ವಿದ್ಯಾರ್ಥಿ ಸಂಘಟನೆಗಳ ಬಡಿದಾಟದಲ್ಲಿ ಹಲವರಿಗೆ ಗಾಯ!

By Suvarna NewsFirst Published Apr 10, 2022, 10:54 PM IST
Highlights
  • ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹೊಡೆದಾಟ
  • JNUSU ಹಾಗೂ ABVP ವಿದ್ಯಾರ್ಥಿ ಸಂಘಟನೆಗಳ ನಡುವೆ ಜಗಳ
  • ಮತ್ತೊಂದು ವಿವಾದದಲ್ಲಿ ಸಿಲುಕಿದ JNU

ನವದೆಹಲಿ(ಏ.10): ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಇದೀಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದೆ. ವಿದ್ಯಾರ್ಥಿಗಳ ಸಂಘಟನೆಗಳಾದ ಎಬಿವಿಪಿ  ಹಾಗೂ ಜೆಎನ್‌ಯುಎಸ್‌ಯು ವಿದ್ಯಾರ್ಥಿಗಳು ಬಡಿದಾಡಿಕೊಂಡ ಘಟನೆ ನಡೆದಿದೆ. ಈ ಮಾರಾಮಾರಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಿಯೋಜಿಸಲಾಗಿದೆ.

ರಾಮನವವಿ ಪೂಜೆಗೆ  JNUSU ವಿದ್ಯಾರ್ಥಿ ಸಂಘಟನೆಗಳು ಅಡ್ಡಿ ಮಾಡಿದ್ದಾರೆ. ಹೀಗಾಗಿ ಜಗಳ ಆರಂಭಗೊಂಡಿದೆ ಎಂದು ಎಬಿವಿಪಿ ಸಂಘಟನೆ ಆರೋಪಿಸಿದೆ. ಇತ್ತ ರಾಮನವವಿ ದಿನ ಹಾಸ್ಟೆಲ್ ಮೆಸ್‌ನಲ್ಲಿ ಮಾಂಸಾಹಾರ ನೀಡಬಾರದು ಎಂದು ಎಬಿವಿಪಿ ವಿದ್ಯಾರ್ಥಿ ಸಂಘಟನೆ ಆರೋಪಿಸಿ ದಾಂಧಲೆ ನಡೆಸಿದೆ ಎಂದು JNUSU ಸಂಘಟನೆ ಆರೋಪಿಸಿದೆ.

ಉಮರ್ ಖಾಲಿದ್‌ಗೆ ಬಿಗ್ ಶಾಕ್, ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಅರ್ಜಿ ತಿರಸ್ಕೃತ!

ರಾಮನವಮಿ ದಿನ ಕಾಲೇಜಿನ ಹಾಸ್ಟೆಲ್ ಮೆಸ್‌ನಲ್ಲಿ ಮಾಂಸಾಹಾರ ನೀಡಬಾರದು ಎಂದು ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಹೊಡೆದಾಟ ಆರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಗಂಭೀರವಾಗಿದೆ. JNUSU ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು JNUSU ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.

ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಗೂಂಡಾಗಿರಿ ನಡೆಸಿದ್ದಾರೆ. ನಮ್ಮ ಆಹಾರ ನಮ್ಮ ಹಕ್ಕು, ಅದನ್ನು ಪ್ರಶ್ನಿಸಲು ಯಾರಿಗೂ ಅವಕಾಶವಿಲ್ಲ ಎಂದು  JNUSU  ವಿದ್ಯಾರ್ಥಿ ಸಂಘಟನೆ ಹೇಳಿದೆ. ದೇಶದಲ್ಲಿ ಇದೀಗ ಈ ರೀತಿಯ ಬೆಳವಣಿಗೆ ಹೆಚ್ಚಾಗುತ್ತಿದೆ. ನಮ್ಮ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು JNUSU ಹೇಳಿದೆ.

"ಬೆಂಕಿ ಹಚ್ಚೋಕೆ ನಾವು ಸಿದ್ಧ", ಉಮರ್ ಖಾಲಿದ್ ಬಗ್ಗೆ ಕೋರ್ಟ್ ನಲ್ಲಿ ಸಾಕ್ಷಿ ಸಮೇತ ವಿವರ ನೀಡಿದ ವಕೀಲರು!

ಆದರೆ JNUSU ಆರೋಪವನ್ನು ಎಬಿವಿಪಿ ತಳ್ಳಿ ಹಾಕಿದೆ. ಇಲ್ಲಿ ಮಾಂಸಾಹಾರದ ಪ್ರಶ್ನೆ ಬಂದಿಲ್ಲ.  ಎಬಿವಿಪಿ ರಾಮನವಮಿ ದಿನ ಪೂಜೆ ಹಾಗೂ ಹವನ ಕಾರ್ಯಕ್ರಮ ಆಯೋಜಿಸಿತ್ತು. ರಾಮನವಮಿ ಆಚರಣೆ ಹಾಸ್ಟೆಲ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಎಡಪಂಥಿಯರು ತಮಗೆ ಬೇಕಾದ ಹಬ್ಬಗಳನ್ನು ಆಚರಿಸಿಕೊಂಡು, ಇದೀಗ ರಾಮನವಮಿಗೆ ಅಡ್ಡಿಪಡಿಸಿದ್ದಾರೆ. ಪೂಜಾ ಕಾರ್ಯಕ್ರಮಕ್ಕೂ ಅಡ್ಡಿಪಡಿಸಿದ್ದಾರೆ. ಇದಕ್ಕೆ ನಮ್ಮ ಸಂಘಟನೆ ವಿದ್ಯಾರ್ಥಿಗಳು ಪ್ರತಿರೋಧ ತೋರಿದ್ದಾರೆ. ಹೀಗಾಗಿ ಸಂಘರ್ಷ ನಡೆದಿದೆ ಎಂದು ಜೆನ್‌ಯು ಕಾಲೇಜಿನ ಎಬಿವಿಪಿ ಸಂಘಟನೆ ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದ್ದಾರೆ.

ಹೊಡೆದಾಟದಲ್ಲಿ 50 ರಿಂದ 60 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಹೊಡೆದಾಟದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಸದ್ಯ ಉಭಯ ಸಂಘಟನೆ ವಿದ್ಯಾರ್ಥಿಗಳು ಪ್ರತಿಭಟನೆ ನಡಸುತ್ತಿದ್ದಾರೆ. ಪೊಲೀಸ್ ಭದ್ರತೆ ಒದಗಿಸಲಾಗಿದೆ.

ದೆಹಲಿ ಗಲಭೆ: ಉಮರ್‌ ವಿರುದ್ಧ ಯುಎಪಿಎ ಕಾಯ್ದೆ ಅಡಿ ತನಿಖೆಗೆ ಅನುಮತಿ
ಸಿಎಎ ಕಾನೂನು ಸಂಬಂಧ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧಿಯಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ಮೇಲೆ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ)ಯಡಿ ಪ್ರಕರಣ ದಾಖಲಿಸಲು ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರದ ದೆಹಲಿ ಪೊಲೀಸರಿಗೆ ಅನುಮತಿ ನೀಡಿದೆ. 15 ದಿನಗಳ ಹಿಂದೆಯೇ ಈ ಅನುಮತಿ ನೀಡಲಾಗಿದ್ದು, ಕೇಂದ್ರ ಗೃಹ ಮಂತ್ರಾಲಯದಿಂದ ಇಂಥಹದ್ದೇ ಅನುಮತಿ ಲಭಿಸಿದೆ ಎಂದು ದೆಹಲಿ ಪೊಲೀಸ್‌ ಮೂಲಗಳು ಹೇಳಿವೆ. ಸೆ.13ರಂದು ಖಾಲಿದ್‌ರನ್ನು ಬಂಧಿಸಿ ಅವರ ಮೇಲೆ ಯುಎಪಿಎ ಕಾಯ್ದೆ ಪ್ರಯೋಗಿಸಲಾಗಿತ್ತು.

click me!