ರಾಂಚಿ (ಡಿ.23): ರಾಜಸ್ತಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯ ಸೋಲಿನ ಸರಣಿ ಮುಂದುವರಿದಿದೆ.
ಇಂದು (ಸೋಮವಾರ) ಪ್ರಕಟವಾದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮುಗ್ಗರಿಸಿದ್ದು, ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ.
ನ.23ರಿಂದ 6 ಹಂತಗಳಲ್ಲಿ 81 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದೆ. ಬಿಜೆಪಿಯು 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಜಾರ್ಖಂಡ್ ಮುಕ್ತಿ ಮೋರ್ಚಾ- ಕಾಂಗ್ರೆಸ್ ಮೈತ್ರಿಕೂಟವು 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ | ಅರ್ಹ ಶಾಸಕರ ಪ್ರಮಾಣವಚನ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ...
ಅಧಿಕಾರ ಹಿಡಿಯಲು 41 ಮ್ಯಾಜಿಕ್ ನಂಬರ್ ಆಗಿದ್ದು, ಕಾಂಗ್ರೆಸ್-ಜೆಎಂಎಂ-ಆರ್‌ಜೆಡಿ ಮೈತ್ರಿಕೂಟ ಸರಳ ಬಹುಮತವನ್ನು ಪಡೆದಿದೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ, ಬಿಜೆಪಿ 24, ಜೆವಿಎಂ 29 ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ಮುಂದಿದೆ.
ಇನ್ನುಳಿದಂತೆ, ಕಳೆದ ಬಾರಿ 8 ಸ್ಥಾನಗಳನ್ನು ಪಡೆದಿದ್ದ ಜಾರ್ಖಂಡ್ ವಿಕಾಸ್ ಮೋರ್ಚಾ (JVM) ಈ ಬಾರಿ 3 ಸೀಟುಗಳಿಗೆ ಸೀಮಿತವಾಗಿದೆ. ಆಲ್ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್ (AJSU) 3 ಸೀಟುಗಳನ್ನು ಗೆದ್ದಿದೆ.
2014ರಲ್ಲಿ ಬಿಜೆಪಿಯು 37 ಸ್ಥಾನ, ಜಾರ್ಖಂಡ್ ಮುಕ್ತಿ ಮೋರ್ಚಾ 19, ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ ಸಿಎಂ ರಘುಬರ್ ದಾಸ್ ಈಗಾಗಲೇ ಸೋಲನ್ನೊಪ್ಪಿಕೊಂಡಿದ್ದು, ಜನಾದೇಶವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.
JMM ಮುಖ್ಯಸ್ಥ ಶಿಬು ಸೊರೆನ್ ಪುತ್ರ, 44 ವರ್ಷ ಪ್ರಾಯದ ಹೇಮಂತ್ ಸೊರೆನ್‌ಗೆ ಮತ್ತೆ ಮುಖ್ಯಮಂತ್ರಿ ಭಾಗ್ಯ ಒಲಿದು ಬಂದಿದೆ.