ಜಾರ್ಖಂಡ್(ಜೂ.04): ಯಾರೋ ಹೇಳಿದ ವಿಚಾರವನ್ನು ಕೇಳಿ ಅನೇಕರು ಯಾಮಾರ್ತಾರೆ ಹಾಗೂ ಮುಜುಗರಕ್ಕೊಳಗಾಗುತ್ತಾರೆ. ಇದೇ ಕಾರಣಕ್ಕೆ ಸತ್ಯವನ್ನು ಕಣ್ಣಾರೆ ನೋಡೋವರೆಗೆ ನಂಬಬಾರದು ಎನ್ನುತ್ತಾರೆ. ಸದ್ಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದ ಜಾರ್ಖಂಡ್‌ನ ನಿವಾಸಿ 24 ವರ್ಷದ ದಿವ್ಯಾ ಕೂಡಾ ಇಂತಹುದೇ ಮುಜುಗರವನ್ನು ಅನುಭವಿಸಿದ್ದಾರೆ. ಆದರೀಗ ಅವರ ಕುಟುಂಬ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯುಪಿಎಸ್‌ಇಯಲ್ಲಿ ತೇರ್ಗಡೆಯಾಗಿದ್ದು, ತಮ್ಮ ಮಗಳು ದಿವ್ಯಾ ಪಾಂಡೆ ಅಲ್ಲ, ದಕ್ಷಿಣ ಭಾರತದ ನಿವಾಸಿ ದಿವ್ಯಾ ಪಿ ಎಂದಿದ್ದಾರೆ.
ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣ
ಮೊದಲ ಪ್ರಯತ್ನದಲ್ಲೇ ತಮ್ಮ ಮಗಳು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ ಎಂದು ದಿವ್ಯಾ ಪಾಂಡೆ ಕುಟುಂಬ ಹೇಳಿಕೊಂಡಿತ್ತು. ಆದರೆ ಶುಕ್ರವಾರ ಅವರು ಜಿಲ್ಲಾಡಳಿತ ಮತ್ತು ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ (ಸಿಸಿಎಲ್) ಬಳಿ ಕ್ಷಮೆಯಾಚಿಸಿದ್ದಾರೆ. ಯಾಕೆಂದರೆ ಯುಪಿಎಸ್‌ಇಯಲ್ಲಿ ಮಗಳು ತೇರ್ಗಡೆಯಾಗಿದ್ದಾಳೆಂದು ಕುಟುಮಬ ಸದಸ್ಯರು ಸಂಭ್ರಮಿಸಿದ ಬಳಿಕ ಈ ಎರಡೂ ಸಂಸ್ಥೆ ದಿವ್ಯಾಳನ್ನು ಗೌರವಿಸಿದ್ದವು. ಏಕಕಾಲಕ್ಕೆ ಮಾಧ್ಯಮಗಳು ಹೆಚ್ಚಿನ ಆದ್ಯತೆ ನೀಡಿ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಯಶಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿದ ಬಗ್ಗೆ ಕುಟುಂಬವು ಅರಿವಿಲ್ಲದೇ ಈ ತಪ್ಪು ನಡೆದಿದೆ ಎಂದು ಹೇಳಿದೆ.
ದಿವ್ಯಾ ಪಾಂಡೆ (24) ಪರವಾಗಿ ಕ್ಷಮೆಯಾಚಿಸಿದ ಅವರ ಕುಟುಂಬ ಸದಸ್ಯರು ಮತ್ತು ಆಕೆಯ ನೆರೆಹೊರೆಯವರು UPSC ಪರೀಕ್ಷೆಯಲ್ಲಿ 323 ನೇ ರ್ಯಾಂಕ್ ಗಳಿಸಿರುವುದು ದಿವ್ಯಾ ಪಾಂಡೆ ಅಲ್ಲ, ದಕ್ಷಿಣ ಭಾರತದ ದಿವ್ಯಾ ಪಿ ಎಂದು ಹೇಳಿದ್ದಾರೆ.
ಕರೆ ಮಾಡಿ ಮಾಹಿತಿ ನೀಡಿದ್ದ ಸ್ನೇಹಿತ
ಯುಪಿಎಸ್‌ಸಿಯಲ್ಲಿ 323ನೇ ರ್ಯಾಂಕ್ ಪಡೆದಿರುವ ಬಗ್ಗೆ ಉತ್ತರ ಪ್ರದೇಶದಲ್ಲಿ ನೆಲೆಸಿರುವ ತನ್ನ ಸ್ನೇಹಿತೆ ತನ್ನ ಸಹೋದರಿಗೆ ಮಾಹಿತಿ ನೀಡಿದ್ದಾರೆ ಎಂದು ದಿವ್ಯಾ ಪಾಂಡೆ ಅವರ ಹಿರಿಯ ಸಹೋದರಿ ಪ್ರಿಯದರ್ಶಿನಿ ಪಾಂಡೆ ಹೇಳಿದ್ದಾರೆ. ಇದಾದ ನಂತರ ಅವರು UPSC ಯ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ನೋಡಲು ಪ್ರಯತ್ನಿಸಿದರು. ಆದರೆ ಇಂಟರ್‌ನೆಟ್ ಕೆಲಸ ಮಾಡದ ಕಾರಣ ಖುದ್ದು ಫಲಿತಾಂಶ ನೋಡಲು ಸಾಧ್ಯವಾಗಲಿಲ್ಲ, ಹೀಗಾಗಿ ಸ್ನೇಹಿತನ ಮಾತನ್ನು ನಂಬಿ ತೇರ್ಗಡೆಯಾಗಿರುವುದಾಗಿ ಘೋಷಣೆ ಮಾಡಿದ್ದಾರೆ. ಇದು ತಿಳಿದು ಮಾಡಿದ ತಪ್ಪಲ್ಲ ಎಂದಿದ್ದಾರೆ.
ತಪ್ಪಿಗೆ ಮನೆಯವರು ಕ್ಷಮೆ ಕೇಳಿದರು
ಇಡೀ ಪ್ರಕರಣದಲ್ಲಿ ಕುಟುಂಬ ಸದಸ್ಯರು ಸುಳ್ಳು ಸುದ್ದಿ ಅಥವಾ ಸುಳ್ಳು ಹೇಳಿಕೆಗಳನ್ನು ಹರಡುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ. ಸತ್ಯಾಂಶ ತಿಳಿದು ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಚಿತ್ತಾರ್‌ಪುರ ಬ್ಲಾಕ್‌ನ ರಾಜ್ರಪ್ಪ ಕಾಲೋನಿ ನಿವಾಸಿ ದಿವ್ಯಾ ದೆಹಲಿಗೆ ತೆರಳಿದ್ದಾರೆ ಎಂದು ಅವರು ಹೇಳಿದರು. ಈ ತಪ್ಪಿಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಅವರು ಹೇಳಿದರು.
2017 ರಲ್ಲಿ ರಾಂಚಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ದಿವ್ಯಾ ಅ"ನಾನು ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಅಧ್ಯಯನ ಮಾಡಿದ್ದೇನೆ ಮತ್ತು ಬಹಳಷ್ಟು NCERT ಪುಸ್ತಕಗಳನ್ನು ಓದಿದ್ದೇನೆ, ಇದರಿಂದಾಗಿ ನಾನು ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ" ಎಂದು ಹೇಳಿದ್ದರು. ಪ್ರಸ್ತುತ, ರಾಮಗಢದ ಅಧಿಕಾರಿಗಳು ಈ ಸಂಬಂಧ ದಿವ್ಯಾ ಅಥವಾ ಆಕೆಯ ಕುಟುಂಬದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಮಾನವ ದೋಷ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ