25 ಸಾವಿರ ದುಡಿಯುತ್ತಿದ್ದ ಟ್ರಕ್‌ ಚಾಲಕ ಈಗ ಸ್ಟಾರ್‌ ಯೂಟ್ಯೂಬರ್, ಆತನ ಗಳಿಕೆ ಶೇಕಡಾ 7100 ರಷ್ಟು ಹೆಚ್ಚಾಗಿದೆ

Published : Sep 18, 2026, 05:59 PM IST
From Truck Driver To YouTube Star

ಸಾರಾಂಶ

ಇಲ್ಲೊಂದು ಸ್ಫೂರ್ತಿದಾಯಕ ಸ್ಟೋರಿ ಇದೆ. ಎಂಥವರನ್ನೂ ಬಡಿದೆಬ್ಬಿಸಬಹುದಾದ ಕತೆ. ಟ್ರಕ್‌ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇವತ್ತು ಸ್ಟಾರ್‌ ಯೂಟ್ಯೂಬರ್‌ ಆಗಿದ್ದಾರೆ. ಆತನ ಆದಾಯ ಕೇಳಿದ್ರೆ ತಲೆ ತಿರುಗಿ ಬೀಳ್ತೀರಿ..

ಬದುಕಿನಲ್ಲಿ ಅದೃಷ್ಟ ಕೆಲವೊಮ್ಮೆ ಹೇಗೆ ಖುಲಾಯಿಸಿ ಬರುತ್ತೆ ಅನ್ನೋದಕ್ಕೆ ಟ್ರಕ್‌ ಡ್ರೈವರ್‌ ಕತೆಯೇ ಸಾಕ್ಷಿ. ಇಲ್ಲಿ ಅವರ ಶ್ರಮವೂ ಇದೆ. ತಿಂಗಳಿಗೆ 25000 ರೂಪಾಯಿ ಗಳಿಸಿಸುತ್ತಿದ್ದ ಟ್ರಕ್‌ ಚಾಲಕ ಈಗ ಫೇಮಸ್‌ ಯೂಟ್ಯೂಬ್‌ ಸ್ಟಾರ್.‌ ಈಗ ಅವರ ಆದಾಯ ಶೇಕಡಾ 7100ಕ್ಕೆ ಹೆಚ್ಚಾಗಿದೆ. ಈಗಲೂ ಅವರು ಟ್ರಕ್‌ ಓಡಿಸುತ್ತಾರೆ. ಜೊತೆಗೆ ಐಷಾರಾಮಿ ಜೀವನವನ್ನೂ ಸಾಗಿಸುತ್ತಿದ್ದಾರೆ.

ಶುರುವಾಗಿದ್ದು ಹೇಗೆ?

ಹೆಸರು ರಾಜೇಶ್ ರಾವಣಿ. ಜಾರ್ಖಂಡ್‌ನ ಜಮ್ತಾರಾ ನಿವಾಸಿ. ಒಂದು ಕಾಲದಲ್ಲಿ ಟ್ರಕ್‌ ಓಡಿಸಿ ತಿಂಗಳಿಗೆ 25,000-30,000 ರೂಪಾಯಿ ಗಳಿಸುತ್ತಿದ್ದರು. ಹಗಲು ರಾತ್ರಿ ಎನ್ನದೇ ಟ್ರಕ್ ಓಡಿಸುತ್ತಿದ್ದರು. ಅವರು ಇವತ್ತು ಯೂಟ್ಯೂಬ್ ಸ್ಟಾರ್.‌ ಹೆದ್ದಾರಿಯ ಬದಿಯಲ್ಲಿ ಟ್ರಕ್ ನಿಲ್ಲಿಸಿ ದೇಸಿ ಶೈಲಿಯಲ್ಲಿ ಅಡುಗೆ ಮಾಡುವ ಅವರ ವೀಡಿಯೊಗಳು ತುಂಬಾ ಫೇಮಸ್ಸು. ಅವರ ಚಾನೆಲ್ ಹೆಸರು ಆರ್.ರಾಜೇಶ್ ವ್ಲಾಗ್ಸ್ . ಇವರ ಚಾನೆಲ್‌ಗೆ 3 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಸೋಶಿಯಲ್‌ ಮೀಡಿಯಾದಿಂದ ಬರುವ ಆದಾಯವನ್ನು ರಾಜೇಶ್ ತಮ್ಮ ಟ್ರಕ್‌ಗೆ ಬಳಸಿಕೊಳ್ತಿದ್ದಾರೆ. ಇವರ ಟ್ರಕ್‌ ಒಳಗೆ ಐಷಾರಾಮಿ ಒಳಾಂಗಣ, ಹವಾನಿಯಂತ್ರಣ ಮತ್ತು ಆರಾಮದಾಯಕ ಕ್ಯಾಬಿನ್ ಹೊಂದಿದ್ದಾರೆ.

ಕಳೆದ 25 ವರ್ಷಗಳಿಂದ ದೇಶಾದ್ಯಂತ ಟ್ರಕ್‌ಗಳನ್ನು ಓಡಿಸುತ್ತಿರುವ ಇವರಿಗೆ ಅಡುಗೆ ಮಾಡುವುದರ ಮೇಲೆ ಅಪಾರ ಆಸಕ್ತಿ. ಪ್ರಯಾಣದ ಸಮಯದಲ್ಲಿ ಅವರು ಕುರಿಮರಿ, ಕೋಳಿ ಅಥವಾ ಮೀನು ಬೇಯಿಸುವ ವೀಡಿಯೊಗಳನ್ನು ಚಿತ್ರೀಕರಿಸಿ ತಮ್ಮ ಕುಟುಂಬಕ್ಕೆ ಕಳುಹಿಸುತ್ತಿದ್ದರು. 2021ರಲ್ಲಿ ಅವರ ಮಗ ಸಾಗರ್ ಈ ವೀಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ಒಂದು ವೀಡಿಯೊದಲ್ಲಿ, ವೀಕ್ಷಕರ ಬೇಡಿಕೆಯ ಮೇರೆಗೆ ರಾಜೇಶ್ ಮೊದಲ ಬಾರಿಗೆ ತನ್ನ ಮುಖವನ್ನು ತೋರಿಸಿದಾಗ ಅದು ಒಂದೇ ದಿನ 4.5 ಲಕ್ಷ ವೀಕ್ಷಣೆ ಗಳಿಸಿತು. ಅಲ್ಲಿಂದ ಅವರ ಜನಪ್ರಿಯತೆ ವೇಗವಾಗಿ ಏರಲು ಪ್ರಾರಂಭಿಸಿತು.

18 ಲಕ್ಷ ಆದಾಯ

ಯೂಟ್ಯೂಬ್ ರಾಜೇಶ್ ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಟ್ರಕ್ ಚಾಲನೆಯಿಂದ 25,000-30,000 ರೂಪಾಯಿ ಗಳಿಸುತ್ತಿದ್ದ ಅವರು ಇಂದು 400,000-500,000 ರೂಪಾಯಿ ತೆಗೆದುಕೊಳ್ತಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಗಮನಾರ್ಹ ಯಶಸ್ಸು ಮತ್ತು ಕಠಿಣ ಪರಿಶ್ರಮವನ್ನು ನೋಡಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೊಂಡಾಡಿದ್ದಾರೆ. ಇನ್ನು ರಾಜೇಶ್‌ ಅವರ ಜೀವನ ತುಂಬಾ ಕಷ್ಟಗಳಿಂದ ಕೂಡಿತ್ತು.

ಒಂದು ಕಾಲದಲ್ಲಿ ರಸ್ತೆ ಅಪಘಾತದಲ್ಲಿ ಅವರ ಕೈಗೆ ಗಂಭೀರ ಗಾಯವಾಗಿತ್ತು, ಆದರೆ ಆರ್ಥಿಕ ಸಂಕಷ್ಟ ಮತ್ತು ಸ್ವಂತ ಮನೆ ಕಟ್ಟುವ ಕನಸು ಅವರನ್ನು ಮುನ್ನಡೆಸಿತು. ಇಂದು, ಅವರು Instagram ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.‌ ಅವರ ವೀಡಿಯೊಗಳನ್ನು YouTube ನಲ್ಲಿ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಲಕ್ಷಾಂತರ ವೀಕ್ಷಣೆಗಳು ಮತ್ತು ಲಕ್ಷಾಂತರ ಗಳಿಕೆಯ ಹೊರತಾಗಿಯೂ, ರಾಜೇಶ್ ಇನ್ನೂ ತಮ್ಮ ವೃತ್ತಿ ಬಿಟ್ಟಿಲ್ಲ. ಇನ್ನೂ ಅವರು ಐಷಾರಾಮಿ ಟ್ರಕ್ ಓಡಿಸುತ್ತಾರೆ ಮತ್ತು ಹೆದ್ದಾರಿಯಲ್ಲಿ ಅದೇ ಹಳ್ಳಿಗಾಡಿನ ಶೈಲಿಯಲ್ಲಿ ಅಡುಗೆ ಮಾಡುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಮೊದಲ ಹೈಡ್ರೋಜನ್ ರೈಲಿಗೆ ತೀವ್ರ ಸಂಕಷ್ಟ, 2600 ಆಸನ ಸಾಮರ್ಥ್ಯದ ರೈಲಿಗೆ ಕೇವಲ 40 ಜನ ಪ್ರಯಾಣಿಕರು!
"ನನ್ನ ಹೆತ್ತವರ ಪ್ರೀತಿಯೇ ನನಗೆ ಆಸ್ತಿ": ಕಣ್ಣೀರಿಡುವಂತಿದೆ ರೈಲ್ವೇ ಸ್ಟೇಷನ್‌ನ ಈ ಬೀಳ್ಕೊಡುಗೆಯ ದೃಶ್ಯ!