ಅತಂತ್ರ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿದ ಸಿಎಂ!| ಉದ್ಯೋಗ ಅರಸಿ ವಿವಿಧ ರಾಜ್ಯಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು| ಕಾರ್ಮಿಕರಿಗೆ ವಿಮಾನ ಪ್ರಯಾಣ ಸೌಲಭ್ಯ ಕಲ್ಪಿಸಿದ ಮೊದಲ ರಾಜ್ಯ
ನವದೆಹಲಿ(ಮೇ.30): ಉದ್ಯೋಗ ಅರಸಿ ವಿವಿಧ ರಾಜ್ಯಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು ಕೊರೋನಾ ಲಾಕ್‌ಡೌನ್‌ನಿಂದಾಗಿ ಅಲ್ಲಿಯೇ ಬಂಧಿಯಾಗಿ ಅನ್ನಾಹಾರವೂ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಇಂಥ ಕಾರ್ಮಿಕರನ್ನು ತವರಿಗೆ ಕರೆಸಿಕೊಳ್ಳಲು ದಾನಿಗಳು, ವಿವಿಧ ಸಂಸ್ಥೆಗಳು ನೆರವಿನ ಹಸ್ತ ಚಾಚಿದ್ದನ್ನು ಕಂಡಿದ್ದೇವೆ.
ಆದರೆ ಜಾರ್ಖಂಡ್ ಸರ್ಕಾರ ಲಡಾಖ್‌ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ವಿಮಾನದ ಮೂಲಕ ತವರಿಗೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿದ್ದು ಮಾತ್ರವಲ್ಲದೆ, ಕಾರ್ಮಿಕರಿಗೆ ವಿಮಾನ ಪ್ರಯಾಣ ಸೌಲಭ್ಯ ಕಲ್ಪಿಸಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಲಡಾಖ್‌ನಲ್ಲಿ ಗಡಿ ರಸ್ತೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ 60 ಜನರ ವಲಸೆ ಕಾರ್ಮಿಕರ ಗುಂಪೊಂದು 2 ತಿಂಗಳಿನಿಂದ ತವರಿಗೆ ಮರಳಲಾಗದೆ ಅತಂತ್ರವಾಗಿತ್ತು. ಅವರೆಲ್ಲಾ ಶುಕ್ರವಾರ ವಿಮಾನದಲ್ಲಿ ತವರಿಗೆ ಆಗಮಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಜಾರ್ಖಂಡ್ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ವಾಣಿಜ್ಯ ವಿಮಾನ ವ್ಯವಸ್ಥೆ ಮಾಡಿ ಎಲ್ಲಾ 60 ಕಾರ್ಮಿರನ್ನೂ ತವರಿಗೆ ಕರೆಸಿಕೊಂಡಿದೆ. ಈ ಏರ್‌ಲಿಫ್ಟ್ ಕಾರ‍್ಯಚಾರಣೆಗೆ ಸುಮಾರು 8 ಲಕ್ಷ ಖರ್ಚಾಗಿರಬಹುದು ಎಂದು ಮುಖ್ಯಮಂತ್ರಿ ಕಾರಾರಯಲಯದ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಈ ಕಾರ‍್ಯಕ್ಕೆ ಕಾರ್ಮಿರೆಲ್ಲಾ ಧನ್ಯವಾದ ಅರ್ಪಿಸಿದ್ದಾರೆ.
जोहार झारखण्ड!
यह खुशी का पल है। लेह जैसे दूरस्थ क्षेत्र से मेरे झारखण्डी भाई आज तालाबंदी के बाद हवाई मार्ग से अपने राज्य वापस आये हैं। सभी को मेरा जोहार एवं धन्यवाद।
यहाँ से भोजन सामग्री के साथ उन्हें गंतव्य तक भेजा जा रहा है। pic.twitter.com/mhRZxURGGe
‘ನಮ್ಮ ರಾಜ್ಯದ ಕಾರ್ಮಿಕರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ. ಈ ಕಾರಾರಯಚರಣೆಗೆ ಸಹಾಯ ಮಾಡಿದ ಎಲ್ಲರಿಗೂ ವಿಶೇಷ ಧನ್ಯವಾದ’ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಅಂಡಮಾನ್‌ನಲ್ಲಿ ಸಿಲುಕಿರುವ 230 ವಲಸೆ ಕಾರ್ಮಿಕರನ್ನೂ ಶೀಘ್ರ ತವರಿಗೆ ವಾಪಸ್ ಕರೆಸಿಕೊಳ್ಳಲು 2 ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.