ಕಾರ್ಮಿಕರಿಗೆ 48 ಸಾವಿರ ರೂ ನೀಡಿ ವಿಮಾನದಲ್ಲಿ ಕಳುಹಿಸಿದ ಬಾಲಕಿ; ಧನ್ಯವಾದ ಹೇಳಿದ ಸಿಎಂ!

By Suvarna NewsFirst Published Jun 2, 2020, 9:39 PM IST
Highlights

ತಾನು ಕೂಡಿಟ್ಟ ಒಂದೊಂದೇ ರೂಪಾಯಿಗಳ ಪಿಗ್ಗಿ ಬಾಕ್ಸ್ ಒಡೆದು ವಲಸೆ ಕಾರ್ಮಿಕರ ವಿಮಾನ ಟಿಕೆಟ್‌ಗೆ ನೀಡಿದ 12 ವರ್ಷದ ಬಾಲಕಿಗೆ ಜಾರ್ಖಂಡ್ ಮುಖ್ಯಮಂತ್ರಿ ಧನ್ಯವಾದ ಹೇಳಿದ್ದಾರೆ. ಪುಟ್ಟ ಬಾಲಕಿಯ ದೊಡ್ಡ ಮನಸ್ಸಿನ ವಿವರ ಇಲ್ಲಿದೆ.

ರಾಂಚಿ(ಜೂ.02): ಲಾಕ್‌ಡೌನ್ ಕಾರಣ ಇತರ ರಾಜ್ಯ, ನಗರದಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಹಲವರು ವಲಸ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಕಳುಹಿಸಿಕೊಡಲು ನೆರವಾಗುತ್ತಿದ್ದಾರೆ. ಹೀಗೆ ನೋಯ್ಡಾದಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರಿಗೆ 12 ವರ್ಷದ ಬಾಲಕಿ ನಿಹಾರಿಕಾ ದ್ವಿವೇದಿ ನೆರವಾಗಿದ್ದಾರೆ.

ಮಗುವಿಗೆ 'ಸೋನು' ಹೆಸರಿಟ್ಟು ಥ್ಯಾಂಕ್ಸ್ ಎಂದ ವಲಸೆ ಕಾರ್ಮಿಕೆ!.

ನಿಹಾರಿಕಾ ದ್ವಿವೇದಿ ಪೋಷಕರು, ಕುಟುಂಬ್ಥರು ನೀಡಿದ ಪ್ರೀತಿಯಿಂದ ನೀಡುತ್ತಿದ್ದ ಹಣವನ್ನ  ಪಿಗ್ಗಿ ಬಾಕ್ಸ್‌ನಲ್ಲಿ ಹಾಕಿದ್ದಳು. ಇದೀಗ ಪಿಗ್ಗ ಬಾಕ್ಸ್ ಒಡೆದು ಇದರಲ್ಲಿದ್ದ 48,000 ರೂಪಾಯಿಯನ್ನು ಮೂವರು ಕಾರ್ಮಿಕರನ್ನು ಜಾರ್ಖಂಡ್‌ಗೆ ವಿಮಾನದ ಮೂಲಕ ಕಳುಹಿಸಲು ನೆರವಾಗಿದ್ದಾಳೆ. 

ನೂರಾರು ವಲಸೆ ಕಾರ್ಮಿಕರ ಜೀವ ಉಳಿಸಿದ ಶಿವಾಜಿನಗರ ಪೊಲೀಸ್ ಕಾನ್ಸ್ ಟೇಬಲ್

ಮೂವರು ವಲಸೆ ಕಾರ್ಮಿಕರು ತಮ್ಮ ಊರಾದ ರಾಂಚಿಗೆ ತೆರಳಲು ಪರದಾಡುತ್ತಿರುವುದು ಬಾಲಕಿಯ ಗಮನಕ್ಕೆ ಬಂದಿದೆ. ಅದರಲ್ಲೂ ಒರ್ವ ಕ್ಯಾನ್ಸರ್ ರೋಗಿ ಇರವುದು ಗಮನಕ್ಕೆ ಬಂದಿದೆ. ಹೀಗಾಗಿ ಪಿಗ್ಗಿ ಬಾಕ್ಸ್ ಒಡೆದು ಹಣವನ್ನು ಪೋಷಕರಿಗೆ ನೀಡಿ, ಮೂವರು ವಲಸೆ ಕಾರ್ಮಿಕರಿಗೆ ನೀಡಲು ಸೂಚಿಸಿದ್ದಾಳೆ. ಪೋಷಕರು ವಲಸೆ ಕಾರ್ಮಿಕರನ್ನು ಸಂಪರ್ಕಿಸಿ ಅವರಿಗೆ ವಿಮಾನ ಟಿಕೆಟ್ ಬುಕ್ ಮಾಡಿ ರಾಂಚಿಗೆ ಕಳುಹಿಸಿಕೊಟ್ಟಿದ್ದಾರೆ. 

ನಿಹಾರಿಕಾ ಕಾರ್ಯಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಧನ್ಯವಾದ ಹೇಳಿದ್ದಾರೆ. ಸಣ್ಣ ವಯಸ್ಸಿನಲ್ಲಿ ಸಾಮಾಜಿಕ ಕಳಕಳಿ ಹಾಗೂ ಇತರರಿಗೆ ನೆರವಾಗೂ ಬಾಲಕಿಯ ಗುಣಕ್ಕೆ ಧನ್ಯವಾದ. ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಸೊರೆನ್ ಟ್ವೀಟ್ ಮೂಲಕ ಕೃತಜ್ಞತೆ ಅರ್ಪಿಸಿದ್ದಾರೆ.

 

इस छोटी सी उम्र में ऐसी संवेदनशीलता के लिए निहारिका बिटिया का आभार।
आपके उज्ज्वल भविष्य के लिए मेरी हार्दिक शुभकामनाएं। https://t.co/FVM606B12z

— Hemant Soren (घर में रहें - सुरक्षित रहें) (@HemantSorenJMM)
click me!