ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 2ನೇ ಹಂತದ ಪ್ಯಾಕೇಜ್ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!

By Suvarna NewsFirst Published May 14, 2020, 5:19 PM IST
Highlights

ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಇದೀಗ ಮೊತ್ತವನ್ನು ವಿವಿಧ ಕ್ಷೇತ್ರಗಳಿಗೆ ಹಂಚಲಾಗಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗುತ್ತಿದೆ ಅನ್ನೋ ವಿವರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

ನವದೆಹಲಿ(ಮೇ.14): ಕೊರೋನಾ ವೈರಸ್‌ನಿಂದ ಜರ್ಝರಿತವಾಗಿರುವ ಭಾರತದ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿ ಇತಿಹಾಸ ಸೃಷ್ಟಿಸಿದ್ದಾರೆ.

"

ಈ ಕುರಿತು ನಿನ್ನೆ(ಮೇ.13) ರಂದು ಮೊದಲ ಹಂತದ ಯೋಜನೆ  ವಿವರಣೆ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಮೇ.14) ಎರಡನೇ ಹಂತದ ಯೋಜನೆ ಪ್ರಕಟಿಸಿದ್ದಾರೆ.  ವಲಸೆ ಕಾರ್ಮಿಕರು, ಬೀದಿ ಬದಿ  ವ್ಯಾಪಾರಿಗಳು, ಸಣ್ಣ ರೈತರು, ನಗರ ಪ್ರದೇಶದ ಬಡವರು  ಸೇರಿದಂತೆ ಹಲವು ಶ್ರಮಿಕ ವರ್ಗಕ್ಕೆ 2ನೇ ಹಂತದ ಯೋಜನೆ ಪ್ರಕಟಿಸಿದ್ದಾರೆ. 

ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಟಿ ಮೂಲಕ 2ನೇ ಹಂತದ ಆರ್ಥಿಕ ಪ್ಯಾಕೇಜ್ ವಿವರಣೆ ನೀಡಿದರು. ಸ್ವಾವಲಂಬಿ ಭಾರತ ನಿರ್ಮಾಣದ 2ನೇ ಹಂತದ ಆರ್ಥಿಕ ಪ್ಯಾಕೇಜ್ ಮೂಲಕ ಹಲವು ಕ್ಷೇತ್ರಗಳನ್ನು ಆರ್ಥೀಕ ಸಬಲೀಕರಣ ಮಾಡುವತ್ತ ಕೇಂದ್ರ ದಿಟ್ಟ ಕ್ರಮ ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಸಾಲ ಮಾಡಿರುವ  ಸಣ್ಣ ರೈತರ ಬಹುದೊಡ್ಡ ರಿಲೀಫ್ ನೀಡಲಾಗಿದೆ.  ಮೇ.31 ವರೆಗಿನ  ಸಾಲದ ಮೇಲಿನ ಬಡ್ಡಿ ಮನ್ನ ಮಾಡಲಾಗಿದೆ. 

"

3 ಕೋಟಿ ರೈತರಿಗೆ ಈಗಾಗಲೇ 4 ಲಕ್ಷ ರೂಪಾಯಿ ಸಾಲ ನೀಡಲಾಗಿದೆ. ಗರೀಬ್ ಕಲ್ಯಾಣ ಮೂಲಕ ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ. 25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗಿದೆ.  ಇದರೊಂದಿಗೆ ಸಾಲ ಪಡೆದ ರೈತರಿಗೆ ಕಂತು ಪಾವತಿಸಲು 3 ತಿಂಗಳ ವಿನಾಯಿತಿ ನೀಡಲಾಗಿದೆ.  ಕಳೆದ 2 ತಿಂಗಳಲ್ಲಿ ರೈಚರಿಗೆ 25, 000 ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ನಗದು ಪೂರೈಕೆಯ ಬೆಂಬಲ ಕಳೆದ 2 ತಿಂಗಳಿನಿಂದ ಆಗುತ್ತಿದೆ. ರೈತರಿಗೆ  ಗ್ರಾಮೀಣ ಆರ್ಥಿಕತೆಯ ಮೂಲಕ ಹಣದ ಹರಿವಿಗೆ ಆದ್ಯತೆ ನೀಡಲಾಗುತ್ತಿದೆ. 63,86,000 ಕೋಟಿ ಸಾಲ ರೈತರರಿಗೆ ನೀಡಲಾಗಿದೆ. ಇನ್ನು 4,200 ಕೋಟಿ ರೂಪಾಯಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿಗೆ ನೀಡಲಾಗಿದೆ. ಇನ್ನು ರಾಜ್ಯ ಸರ್ಕಾರಗಳಿಗೆ ಬೆಳೆ ಖರೀದಿಗೆ 2,700 ಕೋಟಿ ರೂಪಾಯಿ ನೀಡಲಾಗಿದೆ. 29,500 ಕೋಟಿ ರೂಪಾಯಿಗಳನ್ನು ನಬಾರ್ಡ್ ಮೂಲಕ ವಿತರಿಸಲಾಗಿದೆ. ಇದರೊಂದಿಗೆ  ರಾಜ್ಯ ಸರ್ಕಾರಗಳಿಗೆ SDRF ನಿಧಿ ಬಳಕೆಗೆ ಅವಕಾಶ ನೀಡಲಾಗಿದೆ ಎಂದು  ಅನುರಾಗ್ ಠಾಕೂರ್ ಹೇಳಿದರು.

ಮನ್ರೇಗಾ ಕೂಲಿ ಹೆಚ್ಚಳ:
ಮನ್ರೇಗಾಗೆ 10 ಸಾವಿರ ಕೋಟಿ ರೂಪಾಯಿ ಮೀಸಲು, ಮನ್ರೇಗಾ ಕೂಲಿ 182 ರೂಪಾಯಿಂದ 202 ರೂಪಾಯಿಗೆ ಏರಿಕೆ, ಹಲವು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಅವರ ಕುಟುಂಬ ನಿರ್ವಹಣೆ ಜವಾಬ್ದಾರಿ ಸರ್ಕಾರದ ಮೇಲಿದೆ. ಮನ್ರೇಗಾ ಕೆಲಸಕ್ಕೆ ಹಾಜರಾಗುವ ಕಾರ್ಮಿಕರು ಆರೋಗ್ಯ ತಪಾಸಣೆ ಕಡ್ಡಾಯ  ಮಾಡಲಾಗಿದೆ. ಒಂದೇ ರಾಷ್ಟ್ರ, ಒಂದೇ ವೇತನ ಜಾರಿ ಮಾಡಲಾಗಿದೆ. ಇನ್ನು ಮನ್ರೇಗಾಗೆ ಅಗತ್ಯವಿದ್ದರೆ ಹೆಚ್ಚಿನ ಹಣ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನಿಷ್ಠ ವೇತನ ಪದ್ದತಿ:
ಉದ್ಯೋಗ ಕಳೆದುಕೊಂಡವರಿಗೆ ಸರ್ಕಾರದಿಂದ ಕೌಶಲ್ಯ ತರಬೇತಿ ಕಾರ್ಯಕ್ರಮ. ಕನಿಷ್ಠ 10 ಜನ ಕಾರ್ಮಿಕರಿರುವವರಿಗೆ ESIC ಸೌಲಭ್ಯ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಒಂದೇ ವೇತನ ಪದ್ದತಿ ಜಾರಿಗೆ ತರಲಾಗುವುದು. ಇದರೊಂದಿಗೆ ವಲಸೆ ಕಾರ್ಮಿಕರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಗೆ ಪರಿಹಾರ ಸಿಗಲಿದೆ. 

ರಾತ್ರಿ ಪಾಳಿ ಮಹಿಳೆಯರಿಗೆ ಕಾನೂನು:
ಅಂತಾರ್ ರಾಜ್ಯ ವಲಸೆ ಕಾರ್ಮಿಕರಿಗೂ ಕನಿಷ್ಠ ವೇತನ ಸಿಗುವ ಕಾನೂನು ತರಲಿದ್ದೇವೆ. ರಾತ್ರಿ ಪಾಳಿ ಕೆಲಸ ಮಾಡುವು ಮಹಿಳೆಯರಿಗೆ ವಿಶೇಷ ಕಾನೂನು ತರಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉಚಿತ ಪಡಿತರ ಅಕ್ಕಿ, ಧಾನ್ಯ
ಮುಂದಿನ 2 ತಿಂಗಳು ಉಚಿತ ಆಹಾರ, ಧಾನ್ಯ ವಿತರಣೆ, ಇಷ್ಟೇ ಅಲ್ಲ ಇದೀಗ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಪಡಿತರ ಕಾರ್ಡ್ ಇಲ್ಲದ ಕುಟುಂಬಕ್ಕೂ 5 ಕೆ.ಜಿ ಅಕ್ಕಿ ಸೇರಿದಂತೆ ಉಚಿತ ಆಹಾರ ಧಾನ್ಯ ವಿತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಈ ಮೂಲಕ 8 ಕೋಟಿ ವಲಸೆ ಕಾರ್ಮಿಕರಿಗೆ ನೆರವಾಗಲಿದೆ ಎಂದರು.  

ಒನ್ ನೇಶನ್, ಒನ್ ರೇಶನ್ ಕಾರ್ಡ್:
ಒಂದು ದೇಶ, ಒಂದು ಪಡಿತರ ಕಾರ್ಡ್ ಜಾರಿಯಾಗಲಿದೆ. ಇದರಿಂದ ಕಾರ್ಮಿಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋದರು ಪಡಿತರ ಅಕ್ಕಿ ಪಡೆಯಲು ಯಾವುದೇ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಈ ಯೋಜನೆ ಜಾರಿಗೆ ತರುತ್ತಿದ್ದೇವೆ. ಯಾವುದೇ ರಾಜ್ಯದಲ್ಲಿ ಪಡಿತರ ಕಾರ್ಡ್ ಬಳಕೆ ಮಾಡಬಹುದು. ಆಗಸ್ಟ್ ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ರಾಷ್ಟ್ರೀಯ ಪೋರ್ಟ್‌ಬಿಲಿಟಿ ಕಾರ್ಡ್ ಮೂಲಕ ವಿತರಿಸಲಾಗುವುದು.

ಅಗ್ಗದ ದರದಲ್ಲಿ ಬಾಡಿಗೆ ಮನೆ;
ಹಳ್ಳಿ, ಇತರ ರಾಜ್ಯ ಸೇರಿದಂತೆ ವಲಸೆ ಕಾರ್ಮಿಕರಿಗೆ ನಗರ ಪ್ರದೇಶಗಳಲ್ಲಿ ಮೂಲಭೂತ ಅವಶ್ಯಕತೆ ಪೂರೈಸಲು ಕೇಂದ್ರ ಸರ್ಕಾರ ಬದ್ದವಾಗಿದೆ. ವಲಸೆ ಕಾರ್ಮಿಕರ ಬಾಡಿಗೆ ಮನೆಗೆ ನಿರ್ದಿಷ್ಟ ಬಾಡಿಗೆ ನಿಗದಿ ಮಾಡಲಾಗುವುದು. ಈ ಮೂಲಕ ಬಡವರಿಗೆ ಅಗ್ಗದಲ್ಲಿ ಮನೆ ಒದಗಿಸಲಾಗುತ್ತದೆ. ಕೈಗಾರಿಕೆಗಳು ತಮ್ಮ ಸ್ವಂತ ಜಾಗದಲ್ಲಿ ಮನೆಗಳನ್ನು ನಿರ್ಮಿಸಬೇಕು.  ಮನೆಗಳನ್ನು ನಿರ್ಮಿಸಲು ಸರ್ಕಾರ ನೆರವು ನೀಡಲಿದೆ. 

ಮುದ್ರಾ ಶಿಶು ಸಾಲದ ಬಡ್ಡಿ ಸರ್ಕಾರ ಕಟ್ಟಲಿದೆ:
ಮುದ್ರಾ ಶಿಶು ಸಾಲ ಪಡೆದವರ ಶೇಕಡಾ 2 ರಷ್ಟು ಬಡ್ಡಿ ಸರ್ಕಾರ ಭರಿಸಲಿದೆ. 3 ಕೋಟಿಗೂ ಹೆಚ್ಚು ಜನ ಮುದ್ರಾ ಶಿಶು ಸಾಲ ಪಡೆದಿದ್ದಾರೆ. 12 ತಿಂಗಳು ಕಾಲ ಶೇಕಡಾ 2 ರಷ್ಟು ಬಡ್ಡಿಯನ್ನು ಸರ್ಕಾರ ಕಟ್ಟಲಿದೆ. ಅತೀ ಸಣ್ಮ ವ್ಯಾಪಾರಿಗಳಿಗೆ ನೆರವಾಗಲು ಈ ಕ್ರಮ ಕೈಗೊಳ್ಳಲಾಗಿದೆ.  

ಬೀದಿ ಬದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ ರೂ!
50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಲ ಸಾಲ ಸೌಲಭ್ಯಕ್ಕೆ 5,000 ಕೋಟಿ ರೂಪಾಯಿ ನೆರವು ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪರಿಗಳಿಗೆ ಸುಲಭ ವಿಧಾನದಲ್ಲಿ ಸಾಲ ಸೌಲಭ್ಯ. ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಆರಂಭಿಸಲು 10,000 ರೂಪಾಯಿ ಸಾಲ ನೀಡಲಾಗುವುದು. 

ಮದ್ಯಮ ವರ್ಗದ ಜನರಿಗೆ ಸಾಲ ಸಬ್ಸಡಿ ಸ್ಕೀಮ್
ಮದ್ಯಮ ವರ್ಗದ ಜನರಿಗೆ ಗೃಹ ಸಾಲ ಸಬ್ಸಡೀ ಸೌಲಭ್ಯ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ 6 ರಿಂದ 18 ಲಕ್ಷ ವರೆಗೆ ಸಂಬಳದಾರರಿಗೆ ಈ ಯೋಜನೆ ಅನ್ವಯವಾಗಲಿದೆ. 2020ಕ್ಕೆ ಅಂತ್ಯವಾಗುತ್ತಿದ್ದ ಈ ಯೋಜನೆಯನ್ನು 2021ರ ವರೆಗೆ ಮುಂದುವರಿಸಲಾಗಿದೆ. 2.5 ಲಕ್ಷ ಕುಟುಂಬಗಳು ಹೆಚ್ಚುವರಿಯಾಗಿ ಇದರ ಲಾಭ ಪಡೆಯಲಿದೆ. ಇದಕ್ಕಾಗಿ 70,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. 

ರೈತರಿಗೆ 30 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್:
ರೈತರಿಗೆ 30,000 ಕೋಟಿ ರೂಪಾಯಿ ಹೆಚ್ಚುವರಿ ತುರ್ತು ಬಂಡವಾಳ ಒದಗಿಸಲಾಗಿದೆ. ಇದು 3 ಕೋಟಿ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ನೆರವಾಗಲಿದೆ. ನಬಾರ್ಡ್ ಮೂಲಕ ಸಾಲ ಹಂಚಲಾಗುವುದು. 

ಮೀನುಗಾರರು, ಪಶುಸಂಗೋಪಣೆದಾರರುನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್ ಪಟ್ಟಿಗೆ ಸೇರಿಸಲಾಗುತ್ತಿದೆ. ಬುಡಕಟ್ಟು ಆದಿವಾಸಿಗಳಿಗೆ ಉದ್ಯೋಗ ಸೃಷ್ಟಿಗೂ ಯೋಜನೆ ಜಾರಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.  

click me!