
ನವದೆಹಲಿ(ಏ.17) ಭಾರತ ಮಹತ್ವಾಂಕ್ಷೆ ಯೋಜನೆಯಾಗಿರುವ ಬುಲೆಟ್ ರೈಲು ಯೋಜನೆ ಪ್ರಗತಿಯಲ್ಲಿದೆ. ಹಂತ ಹಂತವಾಗಿ ಭಾರತ ತನ್ನ ಬುಲೆಟ್ ರೈಲು ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ. ಇದೀಗ ಭಾರತದಲ್ಲಿ ತನ್ನ ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಜಪಾನ್ ಮಹತ್ವದ ಕೊಡುಗೆ ನೀಡಿದೆ. ಜಪಾನ್ ಇದೀಗ ಭಾರತಕ್ಕೆ 2 ಬುಲೆಟ್ ರೈಲು ಉಡುಗೊರೆಯಾಗಿ ನೀಡುತ್ತಿದೆ. ಈ ರೈಲು 2026ರಲ್ಲಿ ಭಾರತಕ್ಕೆ ತಲುಪಲಿದೆ. ಈ ರೈಲನ್ನು ಸದ್ಯ ಕಾಮಗಾರಿ ಪ್ರಗತಿಯಲ್ಲಿರುವ ಮುಂಬೈ-ಅಹಮ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಭಾರತಕ್ಕೆ ಹೈಸ್ಪೀಡ್ ರೈಲು ಪರೀಕ್ಷಾರ್ಥವಾಗಿ ಜಪಾನ್ 2 ಬುಲೆಟ್ ರೈಲುಗಳನ್ನು ಉಡುಗೊರೆಯಾಗಿ ನೀಡುತ್ತಿದೆ. ಜಪಾನ್ ನೀಡುತ್ತಿರುವ 2 ಬುಲೆಟ್ ರೈಲು ಭಾರತದ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಮತ್ತಷ್ಟು ವೇಗ ನೀಡಿದೆ. ಜಪಾನ್ ಗಿಫ್ಟ್ 2026ರ ವೇಳೆಗೆ ಭಾರತಕ್ಕೆ ಆಗಮಿಸಲಿದೆ. ಆಪರೇಶನಲ್ ಡೇಟಾ, ಇನ್‌ಸ್ಪೆಕ್ಷನ್ ಟೂಲ್ ಸೇರಿದಂತೆ ಎಲ್ಲವನ್ನು ಕಾರ್ಯಗೊತಗಳಿಸಲು ಈ ಜಪಾನ್ ಬುಲೆಟ್ ರೈಲು ನೆರವಾಗಲಿದೆ. ಪ್ರಮುಖವಾಗಿ ಭಾರತದ ವಾತಾವರಣ, ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಬುಲೆಟ್ ರೈಲು ಹೇಗೆ ಕಾರ್ಯನಿರ್ವಹಲಿದೆ, ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಇದು ನೆರವಾಗಲಿದೆ. ಭಾರತದಲ್ಲಿನ ಅತೀವ ಉಷ್ಣಾಂಶ ವಾತಾವರಣ ಹಾಗೂ ಧೂಳು ಬುಲೆಟ್ ರೈಲು ಕಾರ್ಯಗತಗೊಳಿಸಲು ಸವಾಲು ಒಡ್ಡಲಿದೆ.
ಬೆಂಗಳೂರು ಹೈದರಾಬಾದ್ ಪ್ರಯಾಣ ಇನ್ನು ಕೇವಲ 2 ಗಂಟೆ, ಶುರುವಾಗುತ್ತಿದೆ ಹೈಸ್ಪೀಡ್ ರೈಲು
ಜಪಾನ್‌ನ ಅತ್ಯಾಧುನಿಕ ಶಿನ್‌ಕಾನ್ಸೆನ್ ಇ5 ಹಾಗೂ ಇ3 ಮಾಡೆಲ್ ರೈಲನ್ನು ಭಾರತಕ್ಕೆ ಉಡುಗೊರೆಯಾಗಿ ನೀಡುತ್ತಿದೆ. ಈ ರೈಲನ್ನು ಜಪಾನ್ 2011ರಲ್ಲಿ ಅಭಿವೃದ್ಧಿಪಡಿಸಿದೆ. ಇದೀಗ ಹಲವು ಅತ್ಯಾಧುನಿಕ ತಂತ್ರಜ್ಞಾನ ಸೇರಿಸಲಾಗಿದೆ. ಈ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ. ಇ3 ಹಾಗೂ ಇ5 ರೈಲುಗಳನ್ನು ಮುಂಬೈ-ಅಹಮ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.
ಸದ್ಯ ಮುಂಬೈ-ಅಹಮ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಪ್ರಗತಿಯಲ್ಲಿದೆ. ಭಾರತ ಇದೇ ಮೊದಲ ಬಾರಿಗೆ ಹೈಸ್ಪೀಡ್ ರೈಲು ಓಡಿಸಲು ತಯಾರಿ ನಡೆಸುತ್ತಿದೆ. ಭಾರತದಲ್ಲಿ ಹೈಸ್ಪೀಡ್ ರೈಲು ಅತ್ಯಂತ ಸವಾಲು. ಇಲ್ಲಿನ ಭೌಗೋಳಿಕ ಪರಿಸರ, ಇಲ್ಲಿನ ವಾತಾವರಣ, ರೈಲು ಸಾಗುವ ಹಳಿ, ಸುರಕ್ಷತೆ ಎಲ್ಲವೂ ಸವಾಲಾಗಿದೆ. ಆದರೆ ಈ ಮಹತ್ವಾಂಕ್ಷಿ ಕಾರಿಡಾರ್ ಯೋಜನೆಯನ್ನು 2027ರಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ. 2026ರಲ್ಲಿ ಜಪಾನ್ ರೈಲುಗಳು ಪರೀಕ್ಷಾರ್ಥ ಓಡಾಟ ಆರಂಭಸಲಿದೆ. ಆರಂಭಿಕ ಹಂತದಲ್ಲಿ ಪೂರ್ಣಗೊಂಡಿರುವ ಹೈಸ್ಪೀಡ್ ಕಾರಿಡಾರ್ ಮೂಲಕ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ