Delhi Protest; ಮೊದಲು ದಕ್ಷಿಣ ಭಾರತದ ಆ ಸ್ಟಾರ್ ಕರೆಸಿ; ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ಮಹಿಳೆ ವಿಚಿತ್ರ ಡಿಮ್ಯಾಂಡ್‌ಗೆ ಡೆಲ್ಲಿ ಶೇಕ್!

Published : Oct 02, 2026, 10:49 PM IST
Delhi Protest!

ಸಾರಾಂಶ

ದೆಹಲಿಯ ಜಂತರ್ ಮಂತರ್‌ನಲ್ಲಿ ಚುನಾವಣಾ ಆಯುಕ್ತರ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುತ್ತಿರುವಾಗಲೇ, ಮಹಿಳೆಯೊಬ್ಬಳು ದ.ಭಾರತದ ಆ ಸ್ಟ್ರಾರ್‌ನ್ನು ಕರೆಸಿ ಎಂದು ನಡುರಸ್ತೆಯಲ್ಲಿ ಮಲಗಿ ಹೈಡ್ರಾಮಾ ಸೃಷ್ಟಿಸಿದ ವಿಡಿಯೋ ವೈರಲ್ ಆಗಿದೆ.

ದೆಹಲಿಯ ಪ್ರಸಿದ್ಧ ರಾಜಕೀಯ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ ಶುಕ್ರವಾರ ಒಂದೆಡೆ ತೀವ್ರ ರಾಜಕೀಯ ಕಾವಿನಿಂದ ಕಂಗಾಲಾಗಿದ್ದರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ವಿಡಿಯೋ ಎಲ್ಲರ ಗಮನ ಸೆಳೆಯಿತು. ದೇಶದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾಗ, ನಡುರಸ್ತೆಯಲ್ಲಿ ಮಲಗಿದ್ದ ಮಹಿಳೆಯೊಬ್ಬಳು ಪೊಲೀಸರಿಗೆ ಇಟ್ಟ ವಿಚಿತ್ರ ಬೇಡಿಕೆ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರನ್ನೂ ದಿಗ್ಭ್ರಮೆಗೊಳಿಸಿತು!

‘ದಳಪತಿ ವಿಜಯ್ ಅಪ್ಪಿಕೊಳ್ಳುವವರೆಗೆ ಜಾಗ ಖಾಲಿ ಮಾಡಲ್ಲ!’

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ದೆಹಲಿ ಬೀದಿಯಲ್ಲಿ ಸುಮ್ಮನೆ ಮಲಗಿರುವುದು ಕಂಡುಬರುತ್ತದೆ. ಆಕೆಯನ್ನು ರಸ್ತೆಯಿಂದ ತೆರವುಗೊಳಿಸಲು ದೆಹಲಿ ಪೊಲೀಸರು ಎಷ್ಟೇ ಮನವೊಲಿಸಲು ಯತ್ನಿಸಿದರೂ ಆಕೆ ಜಾಗದಿಂದ ಕದಲುವುದಿಲ್ಲ. ಕೊನೆಗೆ ಪೊಲೀಸರು ಕಾರಣ ಕೇಳಿದಾಗ, ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ‘ವಿಜಯ್ ದಳಪತಿ’ ಅವರನ್ನು ತಾನು ಭೇಟಿಯಾಗಬೇಕು ಮತ್ತು ಅವರು ನನ್ನನ್ನು ಅಪ್ಪಿಕೊಳ್ಳುವವರೆಗೆ ನಾನು ಇಲ್ಲಿಂದ ಏಳುವುದೇ ಇಲ್ಲ ಎಂದು ಪಟ್ಟು ಹಿಡಿಯುತ್ತಾಳೆ.

ನನ್ನನ್ನೂ ಯಾರು ಮುಟ್ಟಬೇಡಿ!

ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕೆಯನ್ನು ಎತ್ತಲು ಬಂದಾಗ, ಆಕೆ ತೀವ್ರ ಆಕ್ರೋಶದಿಂದ "ನನ್ನನ್ನು ಯಾರೂ ಮುಟ್ಟಬೇಡಿ!" ಎಂದು ಕಿರುಚಾಡಿ ನಿರಾಕರಿಸುತ್ತಾಳೆ. ರಸ್ತೆಯಲ್ಲೇ ಬಿದ್ದು ಆಕೆ ನಡೆಸಿದ ಈ ಹೈಡ್ರಾಮಾವನ್ನು ಪೊಲೀಸರು ಹಾಗೂ ಹಾದಿಹೋಕರು ಮೂಗಿನ ಮೇಲೆ ಬೆರಳನ್ನಿಟ್ಟು ನೋಡುವಂತಾಯಿತು. ಕೊನೆಗೆ ಪೊಲೀಸರು ಬಲವಂತವಾಗಿ ಆಕೆಯನ್ನು ರಸ್ತೆಯಿಂದ ತೆರವುಗೊಳಿಸಿ ಕರೆದೊಯ್ದಿದ್ದಾರೆ.

ವೈರಲ್ ವಿಡಿಯೋದ ಹಿಂದಿರುವ ಸತ್ಯಾಸತ್ಯತೆ!

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಜಂತರ್ ಮಂತರ್‌ನಲ್ಲಿ ನಡೆದ ಪ್ರಸ್ತುತ ಪ್ರತಿಭಟನೆಗೆ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಲಭ್ಯವಿರುವ ವರದಿಗಳ ಪ್ರಕಾರ, ಈ ವಿಚಿತ್ರ ಘಟನೆ ಸಂಭವಿಸಿದ್ದು ಸೆಪ್ಟೆಂಬರ್ 29, 2026 ರಂದು. ಅಂದರೆ ಇದು ಅಕ್ಟೋಬರ್ 2 ರಂದು ನಡೆದ ದೊಡ್ಡ ರಾಜಕೀಯ ಪ್ರತಿಭಟನೆಗಿಂತ ಪ್ರತ್ಯೇಕವಾದ ಘಟನೆಯಾಗಿದೆ. ಆದಾಗ್ಯೂ, ಪ್ರತಿಭಟನೆಯ ಬಿಸಿಯ ನಡುವೆ ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿ ಭಾರಿ ಚರ್ಚೆಗೆ ಗ್ರಾಸವಾಯಿತು.

ಜಂತರ್ ಮಂತರ್‌ನಲ್ಲಿ ನಿಜವಾಗಿ ನಡೆದದ್ದೇನು?

ಅಕ್ಟೋಬರ್ 2 ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ನಿಜವಾದ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ವಿಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದವು. ಆದರೆ, ಚುನಾವಣಾ ಆಯೋಗವು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಎಲ್ಲಾ ಕಾರ್ಯವಿಧಾನಗಳನ್ನು ನಿಯಮಗಳ ಪ್ರಕಾರವೇ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

700ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ಈ ಭಾರಿ ಪ್ರತಿಭಟನೆಗೆ ದೆಹಲಿ ಪೊಲೀಸರು ಯಾವುದೇ ಮುನ್ನೆಚ್ಚರಿಕಾ ಅನುಮತಿ ನೀಡಿರಲಿಲ್ಲ. ಪರಿಸ್ಥಿತಿ ಕೈಮೀರಬಾರದೆಂದು ಇಡೀ ಪ್ರದೇಶವನ್ನು ಬ್ಯಾರಿಕೇಡ್ ಮಾಡಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ನಿಷೇಧಾಜ್ಞೆ ಮೀರಿ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್, ಸಂಜೀವ್ ಝಾ ಮತ್ತು ಸಂಜಯ್ ಸಿಂಗ್ ಸೇರಿದಂತೆ 700ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗೆ ಒಂದು ಕಡೆ ರಾಜಕೀಯ ನಾಯಕರು ಮತ್ತು ಚುನಾವಣಾ ಆಯೋಗದ ನಡುವೆ ಕಾದಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ತಮಿಳು ನಟ ವಿಜಯ್ ದಳಪತಿಗಾಗಿ ರಸ್ತೆಯಲ್ಲಿ ಬಿದ್ದು ಜಗಳವಾಡಿದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ತಿರುವು ನೀಡಿ ಭಾರಿ ಸದ್ದು ಮಾಡಿದೆ.

ಹೆಚ್ಚಿದ ಆಕ್ರೋಶ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದರಾಮಯ್ಯಗೆ ಹ್ಯುಬ್ಲೋಟ್‌ ಸಂಕಟದ ರೀತಿಯಲ್ಲೇ ಕೇರಳದ ಕಾಂಗ್ರೆಸ್‌ ಸಿಎಂ ವಿಡಿ ಸತೀಶನ್‌ಗೆ ದುಬಾರಿ ವಾಚ್‌ ಸಂಕಷ್ಟ
3 ತಿಂಗಳು ಕಾಣೆಯಾಗಿದ್ದ ಪತ್ನಿ ಭಿಕ್ಷುಕಿಯಾಗಿ ಸಿಕ್ಕಾಗ... ಕಣ್ಣೀರು ತರಿಸುವ ವಿಡಿಯೋ ವೈರಲ್