ಆ. 16ರಿಂದ ವೈಷ್ಣೋ ದೇವಿ ಯಾತ್ರೆ ಆರಂಭ: ಮಾರ್ಗಸೂಚಿಗಳು ಹೀಗಿವೆ

By Suvarna NewsFirst Published Aug 14, 2020, 1:13 PM IST
Highlights

ಆಗಸ್ಟ್ 16ರಿಂದ ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ಯಾತ್ರೆ ಆರಂಭವಾಗಲಿದೆ. ಕೊರೋನಾ ವೈರಸ್‌ನಂತರ ಲಾಕ್‌ಡೌನ್‌ನಿಂದಾಗಿ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು, ಇದೀಗ 6 ತಿಂಗಳ ಬಳಿಕ ದೇವಾಲಯ ಭಕ್ತರಿಗೆ ಮುಕ್ತವಾಗಿದೆ ಎಂದು ಜಮ್ಮು ಕಾಶ್ಮೀರ ತಿಳಿಸಿದೆ.

ಜಮ್ಮುಕಾಶ್ಮೀರ(ಆ.14): ಆಗಸ್ಟ್ 16ರಿಂದ ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ಯಾತ್ರೆ ಆರಂಭವಾಗಲಿದೆ. ಕೊರೋನಾ ವೈರಸ್‌ನಂತರ ಲಾಕ್‌ಡೌನ್‌ನಿಂದಾಗಿ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು, ಇದೀಗ 6 ತಿಂಗಳ ಬಳಿಕ ದೇವಾಲಯ ಭಕ್ತರಿಗೆ ಮುಕ್ತವಾಗಿದೆ ಎಂದು ಜಮ್ಮು ಕಾಶ್ಮೀರ ತಿಳಿಸಿದೆ.

ಯಾತ್ರೆಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯದ ಮಂಡಳಿ ತಿಳಿಸಿದೆ. ದೇವಾಲಯದ ಸುತ್ತ ಮುತ್ತ ಸ್ಯಾನಿಸೈಟೇಷನ್ ಕೂಡಾ ಮಾಡಲಾಗುತ್ತಿದೆ. ಕೊರೊನಾ ಮಧ್ಯೆಯೇ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಯಾತ್ರಿಗಳನ್ನು ಸ್ವಾಗತಿಸಲು ದೇವಾಲಯ ಸಜ್ಜಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಪುಡಿ ಮಾರುಕಟ್ಟೆಗೆ

ಸ್ವಾತಂತ್ರ್ಯೋತ್ಸವದ ದಿನ ಕಳೆದು ಆಗಸ್ಟ್ 16ರಂದು ಎಲ್ಲ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಜಮ್ಮುಕಾಶ್ಮೀರ ಸರ್ಕಾರ ನಿರ್ಧರಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳು ಆಗಸ್ಟ್‌ 16ರಿಂದ ತೆರೆಯಲ್ಪಡುತ್ತದೆ ಎಂದು ಆಗಸ್ಟ್ 4ರಂದು ಜಮ್ಮು ಕಾಶ್ಮೀರದ ಅಧಿಕೃತ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದರು.

ಶಬ್ಬಾಶ್..! ಹುಕ್ಕಾ ಸೇದುತ್ತ ಕೋರ್ಟ್‌ ವಿಚಾರಣೆಗೆ ವಕೀಲ ಹಾಜರ್‌!

ಧಾರ್ಮಿಕ ಮೆರವಣಿಗೆ, ಜಾತ್ರೆಯಂತಹ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ವೈಷ್ಣೋ ದೇವಿ ದೇವಾಲಯವು ಮೇ 18ರಂದು ಮುಚ್ಚಲ್ಪಟ್ಟಿತ್ತು.

ಯಾತ್ರೆಯ ಮಾರ್ಗಸೂಚಿಗಳು:

  • ಯಾತ್ರಾ ಸ್ಥಳಗಳನ್ನು ಮತ್ತೆ ತೆರೆದಿರುವ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
  • ಸೆಪ್ಟೆಂಬರ್  30ರ ತನಕಒಂದು  ದಿನದಲ್ಲಿ 5000 ಯಾತ್ರಿಗಳಿಗೆ ಮಾತ್ರ ಅವಕಾಶವಿರುತ್ತದೆ.
  • ಆನ್‌ಲೈನ್‌ ಮೂಲಕ ಮಾತ್ರ ಮುಂಗಡವಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾಗುತ್ತದೆ. ಕೌಂಟರ್‌ಗಳಲ್ಲಿ ಜನಸಂದಣಿ ತಪ್ಪಿಸಲು ಈ ರೀತಿ ಮಾಡಲಾಗಿದೆ.
  • ಎಲ್ಲ ಭಕ್ತಾದಿಗಳೂ ಆರೋಗ್ಯ ಸೇತು ಎಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ.
  • ಭಕ್ತಾದಿಗಳು ಮೂರ್ತಿಗಳು, ಪ್ರತಿಮೆ, ಧಾರ್ಮಿಕ ಗ್ರಂಥಗಳನ್ನು ಮುಟ್ಟಲು ಅವಕಾಶವಿಲ್ಲ.

ಕಣಿವೆ ರಾಜ್ಯದಲ್ಲಿ 27 ಸಾವಿರ ಕೊರೋನಾ ಸೋಂಕಿತರು: 536 ಹೊಸ ಕೊರೋನಾ ಪ್ರಕರಣಗಳು ಸೇರಿ ಜಮ್ಮು ಕಾಶ್ಮೀರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26,949 ತಲುಪಿದೆ. 509 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ.

click me!