ಹಲವು ದಶಕಗಳಿಂದ ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಇದೀಗ ಕಾಲ ಬದಲಾಗಿದೆ. ಜಮ್ಮು ನಿವಾಸಿಗಳಿಗೆ ಶಾಂತಿ ಬೇಕಾಗಿದೆ. ಸ್ಥಳೀಯರು ಸೇನೆ ಹಾಗೂ ಭದ್ರತಾ ಪಡೆಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಹೇಳಿದ್ದಾರೆ. ಜಮ್ಮು ನಿವಾಸಿಗಳ ಕುರಿತು ಸೇನಾ ಮುಖ್ಯಸ್ಥ ಹೇಳಿದ ಮಹತ್ವದ ಮಾಹಿತಿ ಇಲ್ಲಿದೆ.
ಡೆಹ್ರಡೂನ್(ಜೂ.13): ಕಣಿವೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದ ಉಗ್ರರನ್ನ ಸೇನೆ ಹತ್ಯೆ ಮಾಡಿದೆ. ಕಳೆದ ಒಂದು ವಾರದಲ್ಲಿ 15ಕ್ಕೂ ಹೆಚ್ಚು ಉಗ್ರರನ್ನು ಗುಂಡಿಕ್ಕಲಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಭಾರತೀಯ ಸೇನೆ ಟೊಂಕ ಕಟ್ಟಿ ನಿಂತಿದೆ. ಈ ಹೋರಾಟದಲ್ಲಿ ಕೆಲ ಯೋಧರು ಹುತಾತ್ಮರಾಗಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳ ಕುರಿತು ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ.ನರ್ವಾನೆ ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಡೆಹಾಡ್ರೂನ್‌ನಲ್ಲಿ ನಡೆದ ಸೇನಾಧಿಕಾರಿಗಳ ಪಾಸಿಂಗ್ ಔಟ್ ಪರೇಡ್ ಬಳಿಕ ಮಾಧ್ಯಮ ಜೊತೆ ನರ್ವಾನೆ ಮಾತನಾಡಿದರು.
ಇದೇ ಮೊದಲ ಬಾರಿಗೆ ಪೋಷಕರಿಲ್ಲದೆ 333 ಸೈನ್ಯಾಧಿಕಾರಿಗಳ ಪಾಸಿಂಗ್ ಔಟ್ ಪರೇಡ್!.
ಜಮ್ಮ ಕಾಶ್ಮೀರದಲ್ಲಿ ಉಗ್ರರ ಕ್ಯಾಂಪ್, ಅಡಗುತಾಣಗಳನ್ನು ಧ್ವಂಸ ಮಾಡಲಾಗಿದೆ. ಆಪರೇಶನ್, ಕೂಬಿಂಗ್ ಮೂಲಕ 15ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರಳಿಸಲಾಗಿದೆ. ಕಾಶ್ಮೀರ ನಿವಾಸಿಗಳಿಗೆ ಭಯೋತ್ಪಾದನೆ ಸಾಕಾಗಿದೆ. ಅವರಿಗೆ ನೆಮ್ಮದಿಯ ಬದುಕು ಬೇಕಾಗಿದೆ. ಕೆಲವರು ಇದಕ್ಕೆ ಅಡ್ಡಿಯಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತೀಯ ಸೇನೇ ಉಗ್ರರಿಗೆ ಅವಕಾಶ ನೀಡುವುದಿಲ್ಲ ಎಂದು ನರ್ವಾನೆ ಹೇಳಿದ್ದಾರೆ.
ಕಾಶ್ಮೀರಿ ಪಂಡಿತರ ಕೈಯಲ್ಲಿನ್ನು ಗನ್..? ಜಮ್ಮು ಮಾಜಿ ಡಿಜಿಪಿ ಹೇಳಿದ್ದಿಷ್ಟು..!
ಕಳೆದ 10 ದಿನಗಳಲ್ಲಿ ನಡೆದ ಆಪರೇಶನ್, ಉಗ್ರರ ಅಡಗುತಾಣಗಳ ಮೇಲಿನ ದಾಳಿಗಳೆಲ್ಲವೂ ಖಚಿತ ಮಾಹಿತಿ ಮೇರೆಗೆ ನಡೆಸಲಾಗಿದೆ. ಸೇನೆಗೆ ಖಚಿತ ಮಾಹಿತಿಗಳನ್ನು ಸ್ಥಳೀಯರು ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸೇನೆ ಕೂಬಿಂಗ್ ಮೂಲಕ ಉಗ್ರರನ್ನು ಹೊಡೆದುರುಳಿಸಿದೆ. ಸ್ಥಳೀಯರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿದೆ. ಭಯೋತ್ಪಾದನೆಯಿಂದ ರೋಸಿ ಹೋಗಿದ್ದಾರೆ ಎಂದು ನರ್ವಾನೆ ಹೇಳಿದ್ದಾರೆ.