ಶ್ರೀನಗರ: ಭಾರತ ಜೋಡೋ ಯಾತ್ರೆಯ ಸಮಾರೋಪ ಹಿನ್ನೆಲೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮಂಜಿನಲ್ಲಿ ಮಕ್ಕಳಂತೆ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದರು. ಇದರ ವಿಡಿಯೋವನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮೂರು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸಣ್ಣ ಮಕ್ಕಳಂತೆ ಮಂಜನ್ನು ಪರಸ್ಪರ ಎಸೆದಾಡಿಕೊಂಡು ಖುಷಿ ಪಡುತ್ತಿದ್ದಾರೆ.
ಮೊದಲಿಗೆ ರಾಹುಲ್ ಗಾಂಧಿ ಎರಡು ಮಂಜುಗಡ್ಡೆ ಗಟ್ಟಿಗಳನ್ನು ತೆಗೆದುಕೊಂಡು ಅದನ್ನು ಯಾರಿಗೂ ಕಾಣದಂತೆ ತಮ್ಮ ಕೈಗಳನ್ನು ಹಿಂಬದಿ ಇರಿಸಿಕೊಂಡು ಪ್ರಿಯಾಂಕಾ ಬಳಿಗೆ ಬರುವ ರಾಹುಲ್ ಗಾಂಧಿ ಅದನ್ನು ಪ್ರಿಯಾಂಕಾ ತಲೆಗೆ ಹಾಕುತ್ತಾರೆ. ತಮ್ಮನ್ನ ತುಂಟಾಟಕ್ಕೆ ಸುಮ್ಮನಿರದ ಪ್ರಿಯಾಂಕಾ ಕೂಡಲೇ ತಾವು ಕೂಡ ಮಂಜುಗಡ್ಡೆ ಗಟ್ಟಿಗಳನ್ನು ತೆಗೆದುಕೊಂಡು ಬಂದು ರಾಹುಲ್ ಮುಖದ ಮೇಲೆ ಎರಚಿ ತಮಾಷೆಯಾಗಿ ಸೇಡು ತೀರಿಸಿಕೊಳ್ಳುತ್ತಾರೆ. ಈ ವೇಳೆ ಇವರ ಸುತ್ತಮುತ್ತ ಇತರ ಕಾಂಗ್ರೆಸ್ ನಾಯಕರಿದ್ದು, ಇವರ ತುಂಟಾಟ ನೋಡಿ ನಗುತ್ತಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆ ಒಪ್ಪಲ್ಲ ಎಂದ ರಾಹುಲ್ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!
ಶೀನ್ ಮುಬಾರಕ್, ಕಳೆದ ಮುಂಜಾನೆಯ ಸುಂದರ ಕ್ಷಣ, ಶ್ರೀನಗರದ ಭಾರತ್ ಜೋಡೋ ಯಾತ್ರೆಯ ಕ್ಯಾಂಪ್ ಸೈಟ್‌ನಿಂದ ಎಂದು ರಾಹುಲ್ ಗಾಂಧಿ ಈ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುವ ಪ್ರೀತಿ ಹಾಗೂ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮ್ಮ ಒಡಹುಟ್ಟಿದವರ ಜೊತೆ ಇದ್ದಾಗ ನಿಮಗೆಷ್ಟೇ ವಯಸ್ಸಾದರೂ ನೀವು ಮತ್ತೆ ಮಕ್ಕಳಂತಾಗುವಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಈ ವಿಡಿಯೋ ಬಹಳ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
'ಸರಿಯಾದ ಹುಡುಗಿ ಸಿಕ್ಕರೆ ಮದುವೆ ಆಗ್ತೇನೆ..' ಸಂದರ್ಶನದಲ್ಲಿ ರಾಹುಲ್ ಗಾಂಧಿ ಮಾತು..!
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಅಂತ್ಯವಾಗಿದ್ದು, ಕಾಶ್ಮೀರದ ಶೇರ್ -ಇ ಕಾಶ್ಮೀರ್ ಸ್ಟೇಡಿಯಂನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಸಾವಿರಾರು ಜನರ ಜೊತೆ ದೇಶದ ಹಲವು ವಿಪಕ್ಷಗಳು ಈ ಸಮಾವೇಶದಲ್ಲಿ ಭಾಗಿಯಾಗು ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ