
ನವದೆಹಲಿ (ಮಾ.3): ಮಹಾಕುಂಭ ಮೇಳದಲ್ಲಿ ಪ್ರಸಿದ್ಧಗೆ ಬಂದಿದ್ದ ಅಭಯ್ ಸಿಂಗ್ ಅಲಿಯಾಸ್ ಐಐಟಿ ಬಾಬಾರನ್ನು ಜೈಪುರ ಪೊಲೀಸರು ಬಂಧಿಸಿದ್ದರು. ಒಂದು ಗಂಟೆಗಳ ಬಂಧನದಲ್ಲಿ ಇದ್ದ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ತಮ್ಮ ಬಂಧನವಾಗುತ್ತಿದ್ದ ಬೆನ್ನಲ್ಲಿಯೇ ಬರುತ್ತಿರುವ ಫೇಕ್‌ನ್ಯೂಸ್‌ಗಳ ಬಗ್ಗೆಯೂ ಅವರು ಎಚ್ಚರಿಸಿದ್ದಾರೆ. ಬಿಡುಗಡೆ ಮಾಡದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದಿರುವ ಅವರು, ತಮ್ಮ ಹೆಸರಿನಲ್ಲಿ ಹಲವು ಸುಳ್ಳು ಸುದ್ದಿಗಳು ಹರಡಲಾಗುತ್ತಿದೆ, ವಿಶೇಷವಾಗಿ ಆತ್ಮಹತ್ಯೆ ಮತ್ತು ಬಂಧನ ಕುರಿತು ತಪ್ಪು ಮಾಹಿತಿಗಳು ಹರಿದಾಡುತ್ತಿದೆ ಎಂದು ತಿಳಿಸಿದ್ದಾರೆ. ಈ ಎಲ್ಲ ವರದಿಗಳ ನಡುವೆ ಕೇವಲ ಒಂದು ವಿಷಯ ಮಾತ್ರ ಸತ್ಯ ಎಂದು ಅವರು ಒಪ್ಪಿಕೊಂಡಿದ್ದು, ಅವರ ವಿರುದ್ಧ ಗಾಂಜಾ (ಮರಿಜುವಾನಾ) ಹೊಂದಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಮಹಾ ಕುಂಭಮೇಳದ ವೇಳೆ ಜನಪ್ರಿಯರಾದ IIT ಬಾಬಾ, ಸಾಮಾಜಿಕ ಮಾಧ್ಯಮದಲ್ಲಿ ಆತ್ಮಹತ್ಯೆ ಬೆದರಿಕೆ ನೀಡಿದ ನಂತರ ಜೈಪುರ ಪೊಲೀಸ್ ಅವರನ್ನು ಬಂಧಿಸಿದೆ ಎಂಬ ಸುದ್ದಿ ಹರಿದಾಡಿತ್ತು. ಇಂಡಿಯಾ ಟುಡೇ ಮಾಧ್ಯಮದ ವರದಿ ಪ್ರಕಾರ, ಜೈಪುರ ಪೊಲೀಸರು ಸಿಂಗ್ ಅವರನ್ನು ತಾತ್ಕಾಲಿಕವಾಗಿ ಬಂಧಿಸಿದ್ದರೆಂದು ತಿಳಿದುಬಂದಿದ್ದು, ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (NDPS) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಮಾಡಿದ್ದ ವ್ಯಕ್ತಿ ಇಂದು ಮಹಾಸಾಧು!
ಪತ್ರಕರ್ತರೊಂದಿಗೆ ಮಾತನಾಡುವಾಗ, ಸಿಂಗ್ ಅವರು ಇದನ್ನು "ಪ್ರಸಾದ" ಎಂದು ಹೇಳಿದ್ದಾರೆ ಮತ್ತು ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ತಾನು ಅಗೋರಿ ಬಾಬಾ ಎಂದು ಹೇಳಿಕೊಂಡಿದ್ದು, ಗಾಂಜಾ ಸೇವನೆ ತನ್ನ ಸಂಪ್ರದಾಯದ ಒಂದು ಭಾಗವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಫೋಟೋ, ಕೇಸ್ ದಾಖಲಿಸಿದ ಪೊಲೀಸ್!
ಐಐಟಿ ಬಾಬಾ ಯಾರು: ಅಭಯ್ ಸಿಂಗ್, IIT-ಬಾಂಬೆನಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಮಾಜಿ ವಿದ್ಯಾರ್ಥಿಯಾಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ತ್ಯಜಿಸಿ ಆಧ್ಯಾತ್ಮಿಕ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಹರಿಯಾಣದ ಮೂಲದ ಅಭಯ್ ಸಿಂಗ್ ಐಐಟಿ ಬಾಂಬೆಯಲ್ಲಿ ನಾಲ್ಕು ವರ್ಷ ಓದಿದ್ದಾರೆ. ರು. ಇದಲ್ಲದೆ, ಭೌತಶಾಸ್ತ್ರ (ಫಿಸಿಕ್ಸ್) ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಮೂಲಕ ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದರು. ತಮ್ಮ ಜೀವನದ ಅರ್ಥವನ್ನು ಕಂಡುಕೊಳ್ಳಲು ಪೋಸ್ಟ್-ಮೋಡರ್ನಿಸಮ್ (ಅಧುನಿಕೋತ್ತರ ತತ್ವಶಾಸ್ತ್ರ), ಸೋಕ್ರಟೀಸ್ ಮತ್ತು ಪ್ಲೇಟೋ ಅವರ ತತ್ವಶಾಸ್ತ್ರಗಳ ಅಧ್ಯಯನ ನಡೆಸಿದ ಬಗ್ಗೆ ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ