Viral Video: ಜೈಪುರ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ರಕ್‌ಗೆ ಢಿಕ್ಕಿ ಹೊಡೆದ ಟ್ಯಾಂಕರ್‌, 10 ಕಿಲೋಮೀಟರ್‌ವರೆಗೆ ಗೋಚರಿಸಿದ ಬೆಂಕಿ!

Published : Oct 08, 2025, 08:55 AM IST
Jaipur lpg truck explosion

ಸಾರಾಂಶ

Massive LPG Truck Explosion on Jaipur-Ajmer Highway ಜೈಪುರ-ಅಜ್ಮೀರ್ ಹೆದ್ದಾರಿಯ ದುಡು ಬಳಿ ಎಲ್‌ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್‌ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಸ್ಫೋಟ ಸಂಭವಿಸಿದೆ. ಈ ಅವಘಡದಲ್ಲಿ ಏಳು ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ಜೈಪುರ (ಅ.8): ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ದುಡುವಿನ ಸನ್ವರ್ದಾ ಪ್ರದೇಶದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ತುಂಬಿದ್ದ ಟ್ರಕ್ ಸ್ಫೋಟಗೊಂಡಿದ್ದು, ದೊಡ್ಡ ಪ್ರಮಾಣ ಬೆಂಕಿ ಅವಘಡ ಸಂಭವಿಸಿದೆ. ಏಳು ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಸ್ಫೋಟಗಳು ಎಷ್ಟು ಪ್ರಬಲವಾಗಿದ್ದವೆಂದರೆ ಅವು ಕಿಲೋಮೀಟರ್ ದೂರದಿಂದವರೆಗೂ ಶಬ್ದ ಕೇಳಿಬಂದವು ಮತ್ತು ಪರಿಣಾಮವಾಗಿ ಜ್ವಾಲೆಗಳು ಸ್ಥಳದಿಂದ 10 ಕಿಲೋಮೀಟರ್‌ಗಳವರೆಗೆ ಗೋಚರಿಸುತ್ತಿದ್ದವು.

ಬೃಹತ್ ಸ್ಫೋಟಗಳ ನಂತರ ದಟ್ಟವಾದ ಕಪ್ಪು ಹೊಗೆಯ ರಾಶಿ ಆಕಾಶಕ್ಕೆ ಏರಿತು, ಕನಿಷ್ಠ ಏಳು ವಾಹನಗಳು ಸುಟ್ಟು ಬೂದಿಯಾದವು. ಘಟನಾ ಸ್ಥಳದ ದೃಶ್ಯಗಳು ಜನರು ಕಾಲ್ನಡಿಗೆಯಲ್ಲಿ ಮತ್ತು ತಮ್ಮ ವಾಹನಗಳಲ್ಲಿ ಓಡುತ್ತಿರುವುದನ್ನು ತೋರಿಸುತ್ತಿದ್ದ, ಬೆನ್ನು ಬೆನ್ನಿಗೆ ಅನೇಕ ಸ್ಪೋಟಗಳು ಸಂಭವಿಸಿದೆ.

ಪೊಲೀಸರ ಪ್ರಕಾರ, ನಿಂತಿದ್ದ ಎಲ್‌ಪಿಜಿ ತುಂಬಿದ ಟ್ರಕ್‌ಗೆ ಹಿಂದಿನಿಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಚಾಲಕ ಊಟಕ್ಕೆಂದು ಹೋಗಿದ್ದಾಗ ರಸ್ತೆಬದಿಯ ಹೋಟೆಲ್‌ನ ಹೊರಗೆ ನಿಲ್ಲಿಸಿದ್ದ ಅಕ್ರಮ ಸ್ಥಳದಲ್ಲಿ ತಿರುವು ಪಡೆಯಲು ಯತ್ನಿಸುತ್ತಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟಗೊಂಡಿದೆ. ಡಿಕ್ಕಿಯ ಬಲದಿಂದಾಗಿ ತಕ್ಷಣವೇ ಎಲ್‌ಪಿಜಿ ಸಿಲಿಂಡರ್‌ಗಳು ಬೆಂಕಿಯ ಉಂಡೆಯಂತೆ ಉರಿಯಿತು, ನಂತರ ಗ್ಯಾಸ್ ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಹೊತ್ತಿಕೊಂಡು ಭಯಾನಕ ಸರಣಿ ಸ್ಫೋಟಗಳು ಸಂಭವಿಸಿದವು.

ತಕ್ಷಣವೇ ಸಂಚಾರ ನಿರ್ಬಂಧ

ಜೈಪುರ-ಅಜ್ಮೀರ್ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು, ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿವೆ. ದುಡು, ಬಾಗ್ರು ಮತ್ತು ಕಿಶನ್‌ಗಢದಿಂದ ಬಂದ ಅಗ್ನಿಶಾಮಕ ದಳದ ಡಜನ್ಗಟ್ಟಲೆ ವಾಹನಗಳು ಬೆಂಕಿಯನ್ನು ನಂದಿಸಲು ಕೆಲಸ ಮಾಡುತ್ತಿವೆ. ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದಾರೆ ಮತ್ತು ಜೈಪುರ ಐಜಿ ರಾಹುಲ್ ಪ್ರಕಾಶ್ ಸೇರಿದಂತೆ ಹಿರಿಯ ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಟ್ಯಾಂಕರ್ ಚಾಲಕ ಸೇರಿದಂತೆ ಎರಡರಿಂದ ಮೂರು ಜನರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನಿಗೆ ದುಡುವಿನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಸಿಎಂಎಚ್‌ಒ ಜೈಪುರ-ಐ ಡಾ. ರವಿ ಶೇಖಾವತ್ ತಿಳಿಸಿದ್ದಾರೆ. ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಇಲ್ಲಿಯವರೆಗೆ ಯಾರನ್ನೂ ದಾಖಲಿಸಲಾಗಿಲ್ಲ.

ಈವರೆಗೂ ವರದಿಯಾಗದ ಸಾವು ನೋವು!

ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ನಿರ್ದೇಶನದ ಮೇರೆಗೆ ಸ್ಥಳಕ್ಕೆ ತಲುಪಿದ ಉಪಮುಖ್ಯಮಂತ್ರಿ ಪ್ರೇಮ್ ಚಂದ್ ಬೈರ್ವಾ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದರು. "ಇನ್ನೂ ಸಾವುನೋವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದು ಬೈರ್ವಾ ಸುದ್ದಿಗಾರರಿಗೆ ತಿಳಿಸಿದರು, ಘಟನೆಗೆ ಸಂಬಂಧಿಸಿದಂತೆ ವಾಹನಗಳ ಚಾಲಕರು ಮತ್ತು ಕ್ಲೀನರ್‌ಗಳು ಪ್ರಸ್ತುತ ನಾಪತ್ತೆಯಾಗಿದ್ದಾರೆ ಎಂದು ಹೇಳಿದರು. ಪೊಲೀಸರು ಮತ್ತು ಆಡಳಿತವು ಅವರಿಗಾಗಿ ಸಕ್ರಿಯವಾಗಿ ಹುಡುಕಾಟ ನಡೆಸುತ್ತಿದೆ.

ಈ ಘಟನೆಯು 10 ತಿಂಗಳ ಹಿಂದೆ ಭಂಕ್ರೋಟಾದಲ್ಲಿ ಸಂಭವಿಸಿದ ಇದೇ ರೀತಿಯ ದುರಂತಕ್ಕೆ ಹೋಲಿಕೆಯಾಗಿದೆ, ಅದೇ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು 19 ಜನರು ಸಾವನ್ನಪ್ಪಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!