ಜೈಪುರ-ಅಜ್ಮೇರ್ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ರಾಧೇಶ್ಯಾಮ್ ಚೌಧರಿ ಅವರ ದೇಹಕ್ಕೆ ಬೆಂಕಿ ಹತ್ತಿಕೊಂಡರೂ 600 ಮೀಟರ್ ನಡೆದು ಸಹಾಯ ಯಾಚಿಸಿದ್ದಾರೆ. ದುರಂತವೆಂದರೆ, ಸಹಾಯ ಮಾಡುವ ಬದಲು, ಹೆಚ್ಚಿನ ಜನರು ವೀಡಿಯೊ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಜೈಪುರ: ಜನ ಇತ್ತೀಚೆಗೆ ಸಮಯಪ್ರಜ್ಞೆ ಸೂಕ್ಷ್ಮತೆ, ಕಾಮನ್‌ಸೆನ್ಸ್ ಎಂಬುದನ್ನೇ ಮರೆತು ಬಿಟ್ಟರಾ? ಹೀಗೆ ಹೇಳುವುದಕ್ಕೆ ಕಾರಣವಾಗಿದ್ದು, ಶುಕ್ರವಾರ ಮುಂಜಾನೆ ಜೈಪುರ-ಅಜ್ಮೇರ್ ಹೆದ್ದಾರಿಯಲ್ಲಿ ನಡೆದ ದುರಂತ. ಈ ದುರಂತದ ನಂತರ ಮೈಮೇಲೆ ಪೂರ್ತಿಯಾಗಿ ಬೆಂಕಿ ಹತ್ತಿಕೊಂಡಿದ್ದ 32 ವರ್ಷ ವರ್ಷದ ರಾಧೇಶ್ಯಾಮ್ ಚೌಧರಿ ಅವರು ಸಹಾಯಕ್ಕಾಗಿ ಬೆಂಕಿ ಉರಿಯುತ್ತಿರುವ ದೇಹದೊಂದಿಗೆಯೇ 600 ಮೀಟರ್ ದೂರ ನಡೆದಿದ್ದಾರೆ. ಆದರೆ ಜನ ಅವರ ಸಹಾಯಕ್ಕೆ ಧಾವಿಸುವ ಬದಲು ವೀಡಿಯೋ ಮಾಡುತ್ತಾ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಕೆಮಿಕಲ್ ತುಂಬಿದ ಲಾರಿಯೊಂದು ಎಲ್‌ಪಿಜಿ ತುಂಬಿದ ಟ್ರಕ್ ಹಾಗೂ ಇತರ ವಾಹನಗಳು ಮಾತ್ರವಲ್ಲದೇ ಅಲ್ಲೇ ಇದ್ದ ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಒಮ್ಮೆಗೆ ಆಕಾಶದೆತ್ತರಕ್ಕೆ ಆವರಿಸಿದ ಬೆಂಕಿ ಅಲ್ಲಿದ್ದ ಅನೇಕರನ್ನು ಆಹುತಿ ಮಾಡಿತ್ತು. ಈ ದುರಂತದಲ್ಲಿ ಈಗಾಗಲೇ 12 ಜನ ಪ್ರಾಣ ಕಳೆದುಕೊಂಡಿದ್ದು, 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಶುಕ್ರವಾರ ಮುಂಜಾನೆ ನಡೆದ ಈ ದುರಂತದ ನಂತರದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಒಬ್ಬ ಬೆಂಕಿ ಹತ್ತಿಕೊಂಡು ಸುಡುತ್ತಿರುವ ವ್ಯಕ್ತಿ ತನ್ನ ಕಾಲ ಮೇಲೆ ನಿಲ್ಲಲ್ಲು ಕಷ್ಟಪಡುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಮನಕಲಕುವಂತಿದೆ. ಅವರೇ ಈ ದುರಂತದಲ್ಲಿ ಬದುಕುಳಿದ್ದು, ಚಿಕಿತ್ಸೆ ಪಡೆಯುತ್ತಿರುವ ರಾಧೇಶ್ಯಾಮ್
undefined
ರಾಧೇಶ್ಯಾಮ್ ಅವರು ಜೈಪುರದ ನ್ಯಾಷನಲ್ ಬೇರಿಂಗ್ಸ್ ಕಂಪನಿ ಲಿಮಿಟೆಡ್‌ನಲ್ಲಿ ಮೋಟಾರ್ ಮೆಕ್ಯಾನಿಕ್ ಆಗಿದ್ದು, ಎಂದಿನಂತೆ ತನ್ನ ಮೋಟಾರು ಬೈಕಿನಲ್ಲಿ ರಿಂಗ್ ರೋಡ್ ಬಳಿಯ ತಮ್ಮ ಮನೆಯಿಂದ ಕೆಲಸಕ್ಕೆ ಹೊರಟಿದ್ದರು ಅವರು ಸೇರಿದಂತೆ ಆ ರಸ್ತೆಯಲ್ಲಿ ಸಾಗುತ್ತಿದ್ದ ಅನೇಕರಿಗೆ ಕೇವಲ 2 ಕಿಮೀ ದೂರದಲ್ಲಿ ಇಂತಹ ದುರಂತವೊಂದು ಕಾದಿದೆ ಎಂಬುದರ ಸಣ್ಣ ಸುಳಿವು ಕೂಡ ಇರಲಿಲ್ಲ. ರಾಧೇಶ್ಯಾಮ್ ಹಿರಿಯ ಸಹೋದರ ಅಖೇರಾಮ್ ಅವರು ಬೆಳಗ್ಗೆ 5.50 ಕ್ಕೆ ಎಚ್ಚರಗೊಂಡಾಗ ಅಪರಿಚಿತರೊಬ್ಬರು ಕರೆ ಮಾಡಿ ಕೂಡಲೇ ಹೀರಾಪುರ ಬಸ್ ಟರ್ಮಿನಲ್‌ಗೆ ಬನ್ನಿ, ನಿಮ್ಮ ಸಹೋದರ ತೊಂದರೆಯಲ್ಲಿದ್ದಾರೆ ಎಂಬ ಅಶುಭ ಸಂದೇಶವನ್ನು ತಲುಪಿಸಲು ಕರೆ ಮಾಡಿದ್ದನ್ನು ನೆನಪಿಸಿಕೊಂಡರು.
ಅರೆನಿದ್ರಾವಸ್ಥೆಯ ಜೊತೆ ದಿಗ್ಭ್ರಮೆಗೊಂಡ ಅಖೇರಾಮ್ ಅವರು ತಮ್ಮ ಇಬ್ಬರು ನೆರೆಹೊರೆಯವರೊಂದಿಗೆ ಆ ಪ್ರದೇಶಕ್ಕೆ ಧಾವಿಸಿದರು. ಅಪಘಾತದ ಸ್ಥಳವನ್ನು ತಲುಪಿದಾಗ ಅವರಿಗೆ ಅಲ್ಲಿ ಕಂಡ ದೃಶ್ಯ ಅವರನ್ನು ಜೀವನಪೂರ್ತಿ ಮರೆಯದಂತೆ ಶಾಶ್ವತವಾಗಿ ಕಾಡಲಿದೆ. 'ನನ್ನ ಸಹೋದರ ರಸ್ತೆಯ ಮೇಲೆ ಮಲಗಿದ್ದ,, ಅವರ ಧ್ವನಿ ನಡುಗುತ್ತಿತ್ತು ಸ್ಫೋಟ ನಡೆದ ಸ್ಥಳದಿಂದ ಅವರು ಸುಮಾರು 600 ಮೀಟರ್‌ಗಳಷ್ಟು ದೂರ ನಡೆದರು ಎಂದು ಜನರು ನನಗೆ ಹೇಳಿದರು. ಅವರು ರಸ್ತೆಯಲ್ಲಿ ನಡೆಯುತ್ತಿದ್ದಾಗ ಸಹಾಯಕ್ಕಾಗಿ ಅಳುತ್ತಿದ್ದರು ಎಂದು ಅವರು ಹೇಳಿದರು. ಆದರೆ ಸಹಾಯ ಮಾಡುವ ಬದಲು, ಹೆಚ್ಚಿನ ನೋಡುಗರು ಕೇವಲ ವೀಡಿಯೊಗಳನ್ನು ಮಾಡಿದ್ದಾರೆ ಎಂದು ಅಖೇರಾಮ್ ಗದ್ಗದಿತರಾಗಿದ್ದಾರೆ.
ಘಟನೆಯ ಬಳಿಕ ಟ್ರಾಫಿಕ್ ಅಸ್ತವ್ಯಸ್ಥತೆಯಿಂದಾಗಿ ಆಂಬ್ಯುಲೆನ್ಸ್ ಶೀಘ್ರದಲ್ಲೇ ಬರಬಹುದೆಂಬುದನ್ನು ನಿರೀಕ್ಷಿಸುವುದು ವ್ಯರ್ಥವೆಂದು ಅರಿತ ಅಖೇರಾಮ್ ಮತ್ತು ಅವನ ನೆರೆಹೊರೆಯವರು ರಾಧೆಶ್ಯಾಮ್ ಅವರನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಜಾಗೃತರಾಗಿದ್ದರು, ಆಸ್ಪತ್ರೆಗೆ ಹೋಗುವವರೆಗೂ ಸ್ಪಷ್ಟವಾಗಿ ಮಾತನಾಡುತ್ತಿದ್ದರು ನಡುಗುವ ಧ್ವನಿಯಲ್ಲಿ ಅಲ್ಲಿ ಏನಾಯಿತು ಎಂಬುದನ್ನು ನಮಗೆ ಸ್ಪಷ್ಟವಾಗಿ ಹೇಳುತ್ತಿದ್ದರು. ಅಲ್ಲದೇ ನನಗೆ ಕರೆ ಮಾಡಿದ ವ್ಯಕ್ತಿಗೆ ಅವರು ನನ್ನ ದೂರವಾಣಿ ಸಂಖ್ಯೆಯನ್ನು ಕೂಡ ನೀಡಿದ್ದರು. ಇಷ್ಟೊಂದು ಬೆಂಕಿಯಿಂದ ನರಳಾಡುತ್ತಿದ್ದರು ನನ್ನ ಸಂಖ್ಯೆಯನ್ನು ಅವರು ಹೇಗೆ ನೆನಪಿಸಿಕೊಂಡರು ಎಂಬುದು ನಂಬಲ ಸಾಧ್ಯವಾಗಿತ್ತು. ನರಳಾಟದ ನಡುವೆಯೂ ಆತ ಸ್ಪಷ್ಟವಾಗಿ ಮಾತನಾಡುವುದನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ,
ಪ್ರಯಾಣದ ಸಮಯದಲ್ಲಿ, ರಾಧೆಶ್ಯಾಮ್ ದುರಂತಕ್ಕೆ ಕಾರಣವಾದ ದುಃಖದ ಕ್ಷಣಗಳನ್ನು ವಿವರಿಸಿದರು. ಬೆಂಕಿಯ ಅಲೆಗಳು ಎಲ್ಲವನ್ನೂ ಆಹುತಿ ತೆಗೆದುಕೊಳ್ಳುವುದಕ್ಕೂ ಮೊದಲು ಭೂಮಿ ಹೇಗೆ ಒಮ್ಮೆ ನಡುಗಿತು ಎಂಬುದನ್ನು ಆತ ವಿವರಿಸಿದ್ದ. ಸಹಜವಾಗಿಯೇ ರಾಧೇಶ್ಯಾಮ್ ತನ್ನ ಬೈಕ್‌ನಿಂದ ಹಾರಿ ವಿರುದ್ಧ ದಿಕ್ಕಿಗೆ ಓಡಿದ. ಆದರೆ ಬೆಂಕಿಯ ಜ್ವಾಲೆಯು ಅವನಿಗೆ ಹತ್ತಿಕೊಂಡಿತು. ಸುಟ್ಟಗಾಯಗಳ ಹೊರತಾಗಿಯೂ, ಅವನು ತನ್ನ ಸಹೋದರನಿಗೆ ಕರೆ ಮಾಡಲು ಕರೆಯಲು ಯಾರನ್ನಾದರೂ ಹುಡುಕುವುದಕ್ಕಾಗಿ ವಿರುದ್ಧ ದಿಕ್ಕಿನಲ್ಲಿ ಓಡಿದ್ದ. ಪ್ರಸ್ತುತ ಎಸ್‌ಎಂಎಸ್ ಆಸ್ಪತ್ರೆಯಲ್ಲಿ, ರಾಧೇಶ್ಯಾಮ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಬದುಕುಳಿಯುತ್ತಾನೆ ಎಂದು ನಾವು ಭಾವಿಸಿದ್ದೇವೆ. ಆದರೆ ಶೇಕಡಾ 85ರಷ್ಟು ಸುಟ್ಟ ಗಾಯಗಳಾಗಿರುವುದರಿಂದ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆಯಾಗಿದ ಎಂದು ವೈದ್ಯರು ಹೇಳಿದ್ದಾಗಿ ಅಖೇರಾಮ್ ಕಣ್ಣೀರಾಕಿದ್ದಾರೆ.