
ನವದೆಹಲಿ: ಸೂರತ್‌ನಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರು ಪ್ರಯಾಣ ಆರಂಭವಾಗುತ್ತಿದ್ದಂತೆ ಮದ್ಯ ಕುಡಿದು ಎಲ್ಲಾ ಸ್ಟಾಕ್ ಖಾಲಿ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ ವಿಮಾನದಲ್ಲಿದ್ದ ತಿಂಡಿ ಸೇರಿದಂತೆ ಎಲ್ಲಾ ಆಹಾರವನ್ನು ಖಾಲಿ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಮದ್ಯವನ್ನು ಪ್ರಯಾಣಿಕರು ಖಾಲಿ ಮಾಡಿದ್ದಾರೆ.
ವರದಿಗಳ ಪ್ರಕಾರ, ವಿಮಾನದಲ್ಲಿ 300 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. 1.8 ಲಕ್ಷ ಮೌಲ್ಯದ 15 ಲೀಟ್ ಮದ್ಯ ಮತ್ತು ಗುಜರಾತಿನ ಜನಪ್ರಿಯ ತಿಂಡಿಗಳನ್ನು ಖಾಲಿ ಮಾಡಿದ್ದಾರೆ. ಈ ಘಟನೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಖಾಲಿ ಬಾಟೆಲ್ ಮತ್ತು ಗ್ಲಾಸ್ ಕಾಣಬಹುದು. ಇಂದಿನಿಂದ ಸೂರತ್ ಮತ್ತು ಬ್ಯಾಂಕಾಕ್ ನಡುವೆ ವಿಮಾನಯಾನ ಆರಂಭವಾಗಿದೆ ಎಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಬ್ಯಾಂಕಾಕ್ ತಲುಪುವ ಮೊದಲೇ ಮದ್ಯ ಮತ್ತು ಎಲ್ಲಾ ರೀತಿಯ ಆಹಾರ ಖಾಲಿಯಾಗಿತ್ತು. ಸೂರತ್ ಮತ್ತು ಬ್ಯಾಂಕಾಕ್ ನಡುವೆ 4 ಗಂಟೆ ಪ್ರಯಾಣವಿದೆ.
ಈ ಘಟನೆಯ ಬಗ್ಗೆ ಯಾವುದೇ ಅಧಿಕಾರಿಗಳು ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು, ಇದು ಗುಜರಾತಿನ ಮದ್ಯ ನಿಷೇಧದ ಎಫೆಕ್ಟ್. ಹಾಗಾಗಿ ಸಿಕ್ಕಿದ್ದೇ ತಡ ಎಲ್ಲಾ ಮದ್ಯವನ್ನು ಸೇವಿಸಿದ್ದಾರೆ ಎಂಬ ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: ಅಪ್ಪನಿಗೆ ಪೌಡರ್, ಲಿಪ್‌ಸ್ಟಿಕ್ ಹಾಕಿ ಮೇಕಪ್ ಮಾಡಿದ ಮಗಳು: ಮುದ್ದಾದ ವಿಡಿಯೋ ವೈರಲ್
ಪ್ರತಿ ವ್ಯಕ್ತಿಗೆ 50 ಮಿಲಿ ಅಂತ ಎರಡು ಪೆಗ್ ಮಾತ್ರ ನೀಡಲಾಗುತ್ತದೆ. ಹಾಗಾಗಿ ಈ ವಿಷಯವನ್ನು ದೊಡ್ಡಮಟ್ಟದಲ್ಲಿ ಚರ್ಚೆ ಮಾಡುತ್ತಿರೋದು ಏಕೆ ಎಂದು ಓರ್ವ ನೆಟ್ಟಿಗ ಪ್ರಶ್ನೆ ಮಾಡಿದ್ದಾರೆ. ಸೂರತ್‌ನಲ್ಲಿ ಮದ್ಯ ಸಿಗಲ್ಲ. ವಿಮಾನದಲ್ಲಿ ಉಚಿತವಾಗಿ ಸಿಗುತ್ತಿದ್ದಂತೆ ಎಲ್ಲರೂ ಕುಡಿದು ಆನಂದಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಕೆಲವರ ಪ್ರಶ್ನೆ ಮಾಡಿದ್ದಾರೆ. ಗುಜರಾತ್‌ನಲ್ಲಿ ಮದ್ಯ ನಿಷೇಧವಿದೆ. ಹಾಗಾದ್ರೆ ಮದ್ಯ ತುಂಬಿಕೊಂಡು ರಾಜ್ಯದೊಳಗೆ ಮದ್ಯ ತೆಗೆದುಕೊಂಡಿದ್ದು ಬಂದಿದ್ದು ಹೇಗೆ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಮಕ್ಕಳ ಆಸ್ತಿಯಲ್ಲಿ ಅಪ್ಪ-ಅಮ್ಮನಿಗೆ ಸಿಗುತ್ತಾ ಪಾಲು? ಮಗ, ಮಗಳಿಗೆ ಪ್ರತ್ಯೇಕ ರೂಲ್ಸ್, ಏನಿದು ಕಾನೂನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ