ಭಾರಿ ಮಳೆಗೆ ಕೆರೆಯಂತಾದ ಜೈಪುರ ಏರ್‌ಪೋರ್ಟ್‌: ಟ್ರಾಲಿಯಲ್ಲಿ ಬಂದ ವಿಮಾನ ಓಡಿಸೋ ಪೈಲಟ್

Published : Aug 02, 2024, 12:51 PM ISTUpdated : Aug 02, 2024, 01:03 PM IST
ಭಾರಿ ಮಳೆಗೆ ಕೆರೆಯಂತಾದ ಜೈಪುರ ಏರ್‌ಪೋರ್ಟ್‌: ಟ್ರಾಲಿಯಲ್ಲಿ ಬಂದ ವಿಮಾನ ಓಡಿಸೋ ಪೈಲಟ್

ಸಾರಾಂಶ

ನಿನ್ನೆ ಜೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಜಲಾವೃತವಾಗಿದ್ದು, ವಿಮಾನ ಓಡಿಸಲು ಬರಬೇಕಿದ್ದ ಪೈಲಟ್‌ ನೀರಿನ ಕಾರಣಕ್ಕೆ ಕಾರಿನಿಂದ ಇಳಿದು ಬಳಿಕ ಟ್ರಾಲಿಗಾಡಿಯಲ್ಲಿ ನಿಂತು ಆಗಮಿಸಿ ವಿಮಾನ ನಿಲ್ದಾಣದ ಆವರಣ ತಲುಪಿದ್ದಾರೆ ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಳೆಯ ರೌದ್ರವತಾರಕ್ಕೆ ದಕ್ಷಿಣದ ರಾಜ್ಯಗಳು ಮಾತ್ರವಲ್ಲ ಉತ್ತರ ಭಾರತವೂ ತತ್ತರಿಸಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಿನ್ನೆ ಜೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಜಲಾವೃತವಾಗಿದ್ದು, ವಿಮಾನ ಓಡಿಸಲು ಬರಬೇಕಿದ್ದ ಪೈಲಟ್‌ ನೀರಿನ ಕಾರಣಕ್ಕೆ ಕಾರಿನಿಂದ ಇಳಿದು ಬಳಿಕ ಟ್ರಾಲಿಗಾಡಿಯಲ್ಲಿ ನಿಂತು ಆಗಮಿಸಿ ವಿಮಾನ ನಿಲ್ದಾಣದ ಆವರಣ ತಲುಪಿದ್ದಾರೆ ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಳೆಯಿಂದಾಗಿ ಜೈಪುರದ ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಕೂಡ ಜಲಾವೃತವಾಗಿದೆ. ಜನರು ಕೂಡ ಮಳೆಯಿಂದಾಗಿ ತಾವು ಇದ್ದಲ್ಲಿಯೇ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ಪೈಲಟ್ ಒಬ್ಬ ಈ ಜಲಾವೃತವಾದ ನೀರನ್ನು ದಾಟಿ ಬರಲು ಟ್ರಾಲಿಗಾಡಿಯನ್ನು ಬಳಸಿಕೊಂಡಿದ್ದಾನೆ. ಈ ವೀಡಿಯೋ ಈಗ ವೈರಲ್ ಆಗಿದೆ. ವೀಣಾ ಜೈನ್ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಜೈಪುರದ ಅದಾನಿ ಏರ್‌ಪೋರ್ಟ್, ಇಲ್ಲಿ ಪೈಲಟ್‌ಗಳು ವಿಮಾನ ಓಡಿಸುವುದಕ್ಕೂ ಮೊದಲು ಏರ್‌ಪೋರ್ಟ್ ತಲುಪಲು ಟ್ರಾಲಿಗಾಡಿ ಏರಿ ಬರಬೇಕು ಎಂದು ಬರೆದುಕೊಂಡಿದ್ದಾರೆ. 

ಕೇರಳದ ಭೀಕರ ಭೂಕುಸಿತದ ಉಪಗ್ರಹ ಚಿತ್ರ ಇಸ್ರೋ ಬಿಡುಗಡೆ : ವಯನಾಡ್‌ನಲ್ಲಿ ಕುಸಿದದ್ದು ಬರೊಬ್ಬರಿ 21 ಎಕರೆಯ ದೊಡ್ಡ ಗುಡ್ಡ!

ಕಾರ್‌ ಕ್ಯಾಬ್‌ನಲ್ಲಿ ಏರ್‌ಪೋರ್ಟ್‌ವರೆಗೆ ಬಂದ ಪೈಲಟ್ ಬಳಿಕ ಅಲ್ಲಿಂದ ಏರ್‌ಪೋರ್ಟ್ ಅವರಣ ತಲುಪಲು ಟ್ರಾಲಿಗಾಡಿ ಬಳಸಿದ್ದಾರೆ. ಏರ್‌ಪೋರ್ಟ್‌ನ ಕೆಲಸಗಾರ ಸಿಬ್ಬಂದಿ ಈ ಪೈಲಟ್ ಇದ್ದ ಟ್ರಾಲಿಗಾಡಿಯನ್ನು ದೂಡಿಕೊಂಡು ಬಂದು ಪೈಲಟ್ ಅನ್ನು ಏರ್‌ಪೋರ್ಟ್ ಒಳಗೆ ಕರೆತಂದಿದ್ದಾನೆ. ಈ ಮೂಲಕ ಸ್ವಲ್ಪವೂ ಒದ್ದೆಯಾಗದೇ ಪೈಲಟ್ ಏರ್‌ಪೋರ್ಟ್ ತಲುಪಿದ್ದಾನೆ. 

ನಿನ್ನೆ ಈ ವೀಡಿಯೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ  7 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. ಅನೇಕ ನೆಟ್ಟಿಗರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಮಳೆ ಎಲ್ಲರ ಬಣ್ಣ ಬಯಲು ಮಾಡಿದೆ. ಎಲ್ಲಿ ನೋಡಿದರಲ್ಲಿ ಬರೀ ಸಮಸ್ಯೆಯೇ ಕಾಣಿಸುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಮಾಡದೇ ಇರುವುದು ಇದಕ್ಕೆ ಕಾರಣ ಇದು ನಿಜವಾಗಿಯೂ ನಾಚಿಕೆಗೇಡಿನ ವಿಚಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ತಾಯಿ ಮಗನ ಬಲಿ ಪಡೆದ ತೆರೆದ ಚರಂಡಿ : ಮಗನ ಕೈ ಹಿಡಿದುಕೊಂಡ ಸ್ಥಿತಿಯಲ್ಲೇ ತಾಯಿ ಶವಪತ್ತೆ

ವಾವ್ ಎಂತಹ ಎಂಟ್ರಿ ಇದು, ಸಾಮಾನ್ಯ ಪ್ರಯಾಣಿಕನೋರ್ವ ಈ ಏರ್‌ಪೋರ್ಟ್‌ಗೆ ಹೇಗೆ ಬರಬಹುದು ಎಂದು ನೋಡುವುದಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ಬಹುಶಃ ಅವರು ಏರ್‌ಪೋರ್ಟ್ ತಲುಪಲು ಬೋಟ್ ಬೇಕಾಗಬಹುದು. ಅಥವಾ ಇದೇನಾದರೂ ಏರ್ ಪ್ಲಸ್ ವಾಟರ್ ಪೋರ್ಟ್ ಆಗಿದ್ಯಾ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇದು ಎಲ್ಲವನ್ನು ನಾಶ ಮಾಡಿದೆ, ನಮ್ಮ ಕೆಟ್ಟ ದಿನಗಳನ್ನು ವಾಪಸ್ ತಂದಿದೆ ಎಂದು ಮತ್ತೆ ಕೆಲವರು ಮಳೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು