ಕಾಲ್ನಡಿಗೆಯಲ್ಲಿ ಮನೆ ಕಡೆ ಹೊರಡ ಕಾರ್ಮಿಕರಿಗೆ ಚಪ್ಪಲಿ, ಆಹಾರ ವಿತರಿಸಿದ ಪೊಲೀಸ್!

By Suvarna News  |  First Published May 19, 2020, 3:15 PM IST

ಲಾಕ್‌ಡೌನ್ ಹೇರಿದ ಬಳಿಕ ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಬಡವರು, ನಿರ್ಗತಿಕರು ಸೇರಿದಂತೆ ಹಲವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲು ಸೇವೆ ಇಲ್ಲದ ಕಾರಣ ವಲಸೆ ಕಾರ್ಮಿಕರು ಸಾವಿರ ಕಿಲೋಮೀಟರ್ ನಡೆದುಕೊಂಡ ಮನೆ ತಲುಪವ ಸಾಹಸ ಮಾಡುತ್ತಿದ್ದಾರೆ. ಹೀಗೆ ಉರಿ ಬಿಸಿಲಿನಲ್ಲಿ ಕಾಲ್ನಡಿಗೆ ಮೂಲಕ ತವರು ಸೇರಲು ಹೊರಟ ಕಾರ್ಮಿಕರಿಗೆ ಎಸಿಪಿ ಮಾನವೀಯತೆ ಮೆರೆದಿದ್ದಾರೆ.


ಜೈಪುರ(ಮೇ.19): ಕೊರೋನಾ ವೈರಸ್ ಲಾಕ್‌ಡೌನ್ ಘೋಷಿಸಿದ ಮೇಲೆ ವಲಸೆ ಕಾರ್ಮಿಕರ ಗೋಳಿಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಮೂರು ಹೊತ್ತಿನ ಊಟ ಹಾಗೂ ನೆಮ್ಮದಿಯ ನಿದ್ದೆಗಾಗಿ ನಗರ, ಪಟ್ಟಣ ಸೇರಿಕೊಂಡು ಕೂಲಿ ಮಾಡುತ್ತಿದ್ದ ವಲಸೆ ಕಾರ್ಮಿಕರಿಗೆ ದುಡಿಯಲು ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ತಿನ್ನಲ ಆಹಾರವಿಲ್ಲ ಹೀಗೆ ಅವರ ಸಮಸ್ಯೆ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಹೀಗಾಗಿ  ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮ ಊರು ಸೇರಿಕೊಳ್ಳುತ್ತಿದ್ದಾರೆ.

Tap to resize

Latest Videos

undefined

ಜೈಪುರದ ವಲಸೆ ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕಾಲ್ನಡಿಗೆ ಮೂಲಕ ಬಿಹಾರ, ಮಧ್ಯಪ್ರದೇಶ, ಸೇರಿದಂತೆ ಇತರ ರಾಜ್ಯಗಳಿಗೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ. ಉರಿ  ಬಿಸಿಲು, ಚಪ್ಪಲಿ ಕೂಡ ಇಲ್ಲದೆ ಮಕ್ಕಳನ್ನು ಎತ್ತಿಕೊಂಡು ನಡೆಯುತ್ತಿದ್ದಾರೆ. ಹೀಗಾಗಿ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಜೈಪುರ ಎಸಿಪಿ ಪುಶ್ಪಿಂದರ್ ಸಿಂಗ್, ಚಪ್ಪಲಿ, ಆಹಾರ, ಓ
ನೀರು ವಿತರಿಸಿದ್ದಾರೆ.

ವಲಸೆ ಕಾರ್ಮಿಕರು ಸಾವಿರ ಕಿಲೋಮೀಟರ್ ನಡೆದುಕೊಂಡೇ ತೆರಳುತ್ತಿದ್ದಾರೆ. ಅದು ಕೂಡ ಬರಿಗಾಲಲ್ಲಿ. ಇದು ತೀವ್ರ ನೋವು ತರಿಸುತ್ತಿದೆ. ಹೀಗಾಗಿ ಅವರಿಗೆ ಚಪ್ಪಲಿ, ನೀರು, ಬಿಸ್ಕಟ್, ಬಟ್ಟೆ ವಿತರಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಹಲವರ ಕೈಯಲ್ಲಿ ಒಂದು ರೂಪಾಯಿ ಇಲ್ಲ. ಹೀಗಾಗಿ ಹೆಚ್ಚಿನವರು ಬಸ್ ಟಿಕೆಟ್ ನೀಡಲು ಹಣ ಇಲ್ಲ ಎಂದು ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ.  ಅವರಿಗೆ ಉಚಿತ ಬಸ್ ಕುರಿತು ಮಾಹಿತಿ ನೀಡಿ, ಬಸ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಎಸಿಪಿ ಹೇಳಿದ್ದಾರೆ.

ಎಲ್ಲಾ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ವಲಸೆ ಕಾರ್ಮಿಕರಿಗೆ ನೆಲವು ನೀಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಎಸಿಪಿ ಹೇಳಿದ್ದಾರೆ.

click me!