ಪ್ರತಿ ಲಕ್ಷ ಜನರ ಪೈಕಿ ದೇಶದಲ್ಲಿ 7.1 ಮಂದಿಗೆ ಮಾತ್ರ ಸೋಂಕು| ಆರೋಗ್ಯ ಸಚಿವಾಲಯ| ಜಾಗತಿಕ ಸರಾಸರಿ 60| ಅಮೆರಿಕದಲ್ಲಿ 431: ಕೇಂದ್ರ
ನವದೆಹಲಿ(ಮೇ.19): ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 7.1 ಕೊರೋನಾ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಆದರೆ ಜಾಗತಿಕವಾಗಿ ಪ್ರತೀ ಲಕ್ಷ ಜನಸಂಖ್ಯೆಗೆ 60 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪರಿಸ್ಥಿತಿ ವರದಿಯ ಅಂಕಿ-ಅಂಶವನ್ನು ಉಲ್ಲೇಖಿಸಿ, ‘ಭಾರತದಲ್ಲಿ ಪ್ರತೀ ಲಕ್ಷಜನರಲ್ಲಿ 7.1 ಜನರಲ್ಲಿ ಮಾತ್ರ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಗುಣಮುಖರಾಗುವ ಪ್ರಮಾಣ ಶೇ.38.29ರಷ್ಟಿದೆ. ಆಕ್ರಮಣಕಾರಿ ಮುಂಜಾಗ್ರತಾ ಕ್ರಮಗಳಿಂದ ಈ ಫಲಿತಾಂಶ ವ್ಯಕ್ತವಾಗಿದೆ’ ಎಂದು ಹೇಳಿದೆ.
undefined
ದೇಶ ಸೋಂಕು/ಪ್ರತಿ ಲಕ್ಷಕ್ಕೆ
ಸ್ಪೇನ್ 494
ಅಮೆರಿಕ 431
ಇಟಲಿ 372
ಬ್ರಿಟನ್ 361
ಜರ್ಮನಿ 210
ಫ್ರಾನ್ಸ್ 209
ರಷ್ಯಾ 195
ಭಾರತ 7.1
ಟರ್ಕಿ 180
ಇರಾನ್ 145
ಬ್ರೆಜಿಲ್ 104