
ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ (Jagdeep Dhankhar) ಅವರ ದಿಢೀರ್ ರಾಜೀನಾಮೆ (resignation), ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹಗಳಿಗೆ ಕಾರಣವಾಗಿದೆ. ಅವರು ಇಂಥದ್ದೊಂದು ಕಠಿಣ ನಿರ್ಧಾರವನ್ನ ಏಕಾಏಕಿ ತೆಗೆದುಕೊಂಡಿದ್ದು ಹೇಗೆ? ಇದರ ಹಿಂದೆ ಯಾವ ಒತ್ತಡವಿತ್ತು ಅನ್ನೋದರ ಬಗ್ಗೆ ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ. ಹಾಗಿದ್ದಲ್ಲಿ, ಮೋದಿ (Narendra Modi) ಸರ್ಕಾರ ಏಕೆ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ರಿಗೆ ರಾಜೀನಾಮೆ ಕೊಡುವಂತೆ ಒತ್ತಡ ಹಾಕಿತು? ಇಲ್ಲಿದೆ inside story
ಕೆಲ ದಿನಗಳಿಂದ ಯಾರೇ ಭೇಟಿ ಯಾಗಲು ಹೋದರು ಕೇಂದ್ರ ಸರ್ಕಾರದ ಬಗ್ಗೆ ಧನ್‌ಕರ್ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರಂತೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರನ್ನ ಕರೆಸಿ ಕೊಂಡು ಸರ್ಕಾರ ತನ್ನ ಜಾಟ್ ಸಮುದಾಯದ ಬಗ್ಗೆ ಅನ್ಯಾಯ ಮಾಡಿದೆ ಎಂದೆಲ್ಲ ಧನ್‌ಕರ್ ಮಾತನಾಡಿದ್ದರು ಎಂದು ಹೇಳಲಾಗ್ತಿದೆ.
ಅಷ್ಟೇ ಅಲ್ಲ ಪ್ರಧಾನಿ ಮೋದಿ ಅವರ ಭದ್ರತೆಗೆ ಬಳಸುವ ವಾಹನಗಳನ್ನೇ ತನಗೆ ನೀಡಬೇಕು ಎಂದು ಬೇಡಿಕೆ ಗ್ರಹ ಇಲಾಖೆಯ ನಕಾರ ವ್ಯಕ್ತಪಡಿಸಿತ್ತು. ಆದರೆ ಯಾವಾಗ ಲೋಕಸಭೆಯಲ್ಲಿ ನ್ಯಾಯಮೂರ್ತಿ ವರ್ಮಾ ವಿರುದ್ಧದ ಅರ್ಜಿ ಸಲ್ಲಿಕೆ ಆಯಿತೋ ಆಗ ಸರ್ಕಾರವನ್ನು ವಿಶ್ವಾಸಕ್ಕೆ ಕೂಡ ತೆಗೆದು ಕೊಳ್ಳದೆ ವಿಪಕ್ಷ ಗಳ ಅರ್ಜಿ ಸ್ವೀಕಾರ ಮಾಡಿದ್ದು ಸರ್ಕಾರವನ್ನು ಕೆರಳಿಸಿದೆ.
ಜಸ್ಟಿಸ್ ವರ್ಮಾ ವಿರುದ್ಧ ಮಾಡಿದಂತೆ ವಿಎಚ್‌ಪಿ ಸಭೆಯಲ್ಲಿ ಭಾಗವಹಿಸಿದ್ದ ಜಸ್ಟಿಸ್ ಯಾದವ್ ವಿರುದ್ಧ ಮಾಡಿದರೆ ಅನ್ನುವ ಆತಂಕ ಮೋದಿ ಸರ್ಕಾರಕ್ಕೆ ಇತ್ತು. ಹೀಗಾಗಿ ಕೇಂದ್ರ ಸಚಿವ ಪಿಯುಶ್ ಗೊಯಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಪರಾಷ್ಟ್ರಪತಿ ಗಳ ವಿರುದ್ಧ ಸಹಿ ಸಂಗ್ರಹ ಮಾಡುವ ಸಂಬಂಧ ಸಂಸದರ ಸಭೆ ನಡೆಯಿತು. ಹೀಗಾಗಿ ಸೋಮವಾರ ಜಗದೀಪ್ ಧನ್ ಕರ್ ರಾಜೀನಾಮೆ ಅನಿವಾರ್ಯ ಆಗಿತ್ತು ಎನ್ನುವ ವರದಿಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ